More

    ಕರೊನಾ ಆತಂಕ: ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದ ಮೇಲೊಂದು ಮನೆಯ ಮಾಡಿದ!

    ಕಡಬ: ಲಾಕ್​ಡೌನ್​ನಿಂದ ಮನೆಯಲ್ಲೇ ಉಳಿಯಲು ಬೋರ್ ಹೊಡೆಯುತ್ತಿದೆ ಎನ್ನುವ ಜನರ ಮಧ್ಯೆ ಕಡಬ ತಾಲೂಕಿನ ಸವಣೂರು ಪುಣ್ಚಪ್ಪಾಡಿ ಗ್ರಾಮದ ನಡುಮನೆ ನಿವಾಸಿ ವಿವೇಕ್ ಆಳ್ವ ವಿಭಿನ್ನ ಯೋಚನೆಯೊಂದಿಗೆ ಮರದ ಮೇಲೆ ಗುಡಿಸಲು ಕಟ್ಟಿ ಪರಿಸರದೊಂದಿಗೆ ಬೆರೆಯುವ ಯೋಚನೆ ಮಾಡಿದ್ದಾರೆ.

    ಕೃಷಿ ಸಂಶೋಧನೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ವಿವೇಕ್, ಮನೆಯ ಸಮೀಪದ ಕಾಡಿನಲ್ಲಿ ಮರದ ಮೇಲೆ ಒಂದು ವಾರ ಶ್ರಮ ವಹಿಸಿ ಗುಡಿಸಲು ಕಟ್ಟಿದ್ದಾರೆ. ಅದರಲ್ಲಿ ಮನೆ ಮಂದಿಯೆಲ್ಲ ವಿಹರಿಸಿ ಸಂತೋಷ ಪಡುತ್ತಿದ್ದಾರೆ. ಇಲ್ಲಿ ಸಮಯ ಕಳೆಯುವುದರಿಂದ ಸಾಮಾಜಿಕ ಅಂತರ ಕಾಪಾಡುವ ಜತೆಗೆ ಪರಿಸರದ ಅದ್ಭುತ ಅನುಭವ ಪಡೆಯಲು ಸಾಧ್ಯ ಎನ್ನುತ್ತಾರೆ ವಿವೇಕ್ ಆಳ್ವ.

    ಗುಡಿಸಲಿನ ಸುತ್ತ ಬಿಸಿಲಿನಿಂದ ಹಾಗೂ ರಕ್ಷಣೆ ದೃಷ್ಟಿಯಿಂದ ಶ್ಯಾಡೋ ನೆಟ್ ಹಾಕಲಾಗಿದೆ. ಗುಡಿಸಲು ಏರಲು ಏಣಿ ಅಳವಡಿಸಲಾಗಿದ್ದು, ವಿದ್ಯುತ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಹಕ್ಕಿಗಳ ಚಿಲಿಪಿಲಿ ಕೇಳುತ್ತ ಪುಸ್ತಕ ಓದುವುದು, ಸಂಗೀತ ಆಲಿಸುವ ಜತೆಗೆ ಪ್ರಕೃತಿ ವೀಕ್ಷಣೆ ಮಾಡುತ್ತಾರೆ.

    ಕೂಲಿ ಕಾರ್ಮಿಕರಿಗೆ ಮದ್ಯ ಹಂಚಿ ಆ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ್ದವರ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts