More

    ವಿಶ್ವ ಛಾಯಾಗ್ರಹಣ ದಿನದ ಆಚರಣೆ ಆರಂಭವಾಗಿದ್ದು ಹೇಗೆ…? ಆಗಸ್ಟ್ 19 ವರ್ಲ್ಡ್ ಫೋಟೋಗ್ರಫಿ ಡೇ

    | ಎಚ್.ಬಿ. ಮಂಜುನಾಥ

    1289ರ ಸುಮಾರಿಗೆ ಕಲಾವಿದರಾದ ರೋಗರ್ ಬ್ಯಾಕೋನ್, ಲಿಯೊನಾಡೋ ಡಾವಿಂಚಿ, ಆಲ್ಬರ್ಟ್ ಮೊದಲಾದವರು ದೃಶ್ಯ ಚಿತ್ರಗಳನ್ನು ರಚಿಸಲು ಪ್ಲೇವುಡ್‌ನ ಕತ್ತಲು ಕೋಣೆಯೊಂದನ್ನು ಮಾಡಿ ಅದರ ಒಂದು ಪಾರ್ಶ್ವದಲ್ಲಿ ಕಿರುರಂಧ್ರ ಮಾಡಿ ಅದರಿಂದ ಪ್ರತಿಫಲನವಾಗುವ ಅಸ್ಪಷ್ಟ ಚಿತ್ರ (ಕ್ಯಾನ್‌ವಾಸ್ ಮೇಲೆ) ವನ್ನು ಚಾರ್‌ಕೋಲ್‌ನಿಂದ ರೀ ಸ್ಕೆಚ್ ಮಾಡಿಕೊಂಡು ಪೇಂಟಿಂಗ್ ರಚಿಸುತ್ತಿದ್ದರು.

    ‘ಕ್ಯಾಮರಾ’ ಎಂದರೆ ಕತ್ತಲು, ಅಬ್‌ಸ್ಕುರಾ ಎಂದರೆ ಕೋಣೆ. ಹೀಗೆ ಕ್ಯಾಮರಾ ಅಬ್‌ಸ್ಕುರಾ ಬಂದದ್ದಕ್ಕೆ ಸುಮಾರು 1550ರ ಹೊತ್ತಿಗೆ ‘ಗಾರ್ಡಾನೋ’ ಎಂಬುವವ ಬೈಕಾನ್‌ವೆಕ್ಸ್ ಲೆನ್ಸ್ ಕೂರಿಸಿ ಚಿತ್ರ ಸ್ಪಷ್ಟವಾಗುವಂತೆ ಮಾಡಿದ. ಈ ಕ್ಯಾಮರಾ ಅಬ್‌ಸ್ಕುರಾವೇ ಪರಿಷ್ಕರಣೆ ಗೊಳ್ಳುತ್ತಾ ಕ್ಯಾಮರಾ ಆಯ್ತು. 1826 ರ ವೇಳೆಗೆ ಇದನ್ನು ಸಂಶೋಧಕ ನೈಸ್‌ಫೋರ್ ನಿಪ್ಸೆ ಪೋಟೋಗ್ರಫಿಗೆ ಅಳವಡಿಸಿದ.

    ಪೋಟೋ ಅಂದರೆ ಬೆಳಕು, ಗ್ರಫಿ ಎಂದರೆ ಚಿತ್ರ. ಹೀಗೆ ಮೂಡಿದ ಚಿತ್ರಗಳು ಸ್ಥಿರವಾಗುವಂತೆ ಮಾಡಿದ ರಾಸಾಯನಿಕ ಪ್ರಯೋಗಗಳಲ್ಲಿ ನೈಸ್‌ಫೋರ್ ನಿಪ್ಸೆ ಮತ್ತು ಡಾಗರೆಯವರ ಸೂತ್ರವು ಫ್ರಾನ್ಸ್‌ನ ವಿಜ್ಞಾನ ಅಕಾಡೆಮಿಯಲ್ಲಿ ಮಾನ್ಯತೆ ಪಡೆಯಿತು. ಅದನ್ನು 1839 ಆಗಸ್ಟ್ 19 ರಂದು ವಿಶ್ವಕ್ಕೆ ಸಮರ್ಪಿಸಲಾಯ್ತು. ಇದೇ ದಿನವನ್ನೇ ವಿಶ್ವ ಛಾಯಾಗ್ರಹಣ ದಿನ ಎಂದು ಆಚರಿಸಲಾಗುತ್ತಿದೆ.

    ಫೋಟೋಗ್ರಫಿಯಿಂದಾಗಿಯೇ ಸಿನಿಮಾಟೋಗ್ರಫಿ ಹುಟ್ಟಿತು. ಟೆಲಿವಿಷನ್ ಅವಿಷ್ಕಾರಕ್ಕೂ ಫೋಟೋಗ್ರಫಿ ಹಾಗೂ ಕ್ಯಾಮರಾ ಪ್ರೇರಣೆಯಾಯ್ತು. ಎಕ್ಸ್‌ರೇ ಮುಂತಾದಕ್ಕೂ ಫೋಟೋಗ್ರಫಿ ತಂತ್ರಜ್ಞಾನ ಸಹಾಯಕವಾಯ್ತು. ವಿದ್ಯನ್ಮಾನ ಉಪಕರಣಗಳ ಮೈಕ್ರೋ ಸರ್ಕ್ಯೂಟ್ ಬೋರ್ಡ್ ತಯಾರಿಸುವಲ್ಲೂ, ಪತ್ರಿಕಾ ಮುದ್ರಣ ರಂಗದಲ್ಲೂ ಫೋಟೋಗ್ರಫಿ ತಂತ್ರಜ್ಞಾನದ ಪಾತ್ರವಿದೆ. ಬಾಹ್ಯಾಕಾಶ ಉಪಗ್ರಹಗಳಲ್ಲೂ ಕ್ಯಾಮರಾಗಳ ಪಾತ್ರ ಮಹತ್ವದ್ದಾಗಿದೆ. ವಿಶ್ವ ಛಾಯಾಗ್ರಹಣ ದಿನಾಚರಣೆ ಕೇವಲ ಛಾಯಾಗ್ರಹಕರಿಗಷ್ಟೇ ಅಲ್ಲ, ಪ್ರಪಂಚದ ಎಲ್ಲ ಕ್ಷೇತ್ರಗಳವರೂ ಆಚರಿಸಬೇಕಾದದ್ದು.

    ಎಚ್.ಬಿ. ಮಂಜುನಾಥ ದಾವಣಗೆರೆಯ ಹಿರಿಯ ಪತ್ರಿಕಾ ಛಾಯಾ ಗ್ರಾಹಕ, ವ್ಯಂಗ್ಯ ಚಿತ್ರಕಾರ, ಫ್ರೀಲಾನ್ಸ್ ಪತ್ರಕರ್ತ. ಸುಮಾರು ಇಪ್ಪತ್ತು ಸಾವಿರದಷ್ಟು ವ್ಯಂಗ್ಯ ಚಿತ್ರಗಳು, ಹದಿನೆಂಟು ಸಾವಿರದಷ್ಟು ಛಾಯಾಚಿತ್ರಗಳು, ಹದಿನೈದು ಸಾವಿರದಷ್ಟು ವರದಿ, ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕರ್ನಾಟಕ ಮಾಧ್ಯಮ ಅಕಾಡೆಮಿಯು 2007ರಲ್ಲಿ ಪ್ರಶಸ್ತಿ ನೀಡಿದೆ. ಕರ್ನಾಟಕ ರಾಜ್ಯ ಸರ್ಕಾರವು 2017ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಇವರ ತಂದೆ ಕೀರ್ತಿಶೇಷ ಭುಜಂಗರಾಯ ಶಾಸ್ತ್ರೀಯವರು ದಾವಣಗೆರೆಯಲ್ಲಿ ಮೊಟ್ಟಮೊದಲ ಫೋಟೋ ಸ್ಟುಡಿಯೋ ಸ್ಥಾಪಿಸಿದವರು. ಅವರು ಸ್ವಾತಂತ್ರೃಪೂರ್ವದಲ್ಲಿ ಬ್ರಿಟಿಷ್ ಮಿಲಿಟರಿಯ ಪೋಟೋಗ್ರಾಫರ್ ಸಹ ಆಗಿದ್ದರು. 1934ರ ಮಾರ್ಚ್ 2 ರಂದು ಮಹಾತ್ಮಾ ಗಾಂಧೀ ದಾವಣಗೆರೆಗೆ ಬಂದಾಗ ಇವರ ತಂದೆಯವರೇ ಫೋಟೋ ತೆಗೆದಿದ್ದಂತೆ. ಆ ಫೋಟೋ ಮತ್ತು ನೆಗೆಟಿವ್‌ಗಳನ್ನು ಬ್ರಿಟಿಷ್ ಮಿಲಿಟರಿಗೆ ಕೊಡಲಾಗಿತ್ತಂತೆ.

    ಮಗುವಿನ ಶಸ್ತ್ರಚಿಕಿತ್ಸೆಗಾಗಿ ಒಲಿಂಪಿಕ್ಸ್ ಪದಕ ಹರಾಜು! ಖರೀದಿಸಿದವರು ನೀಡಿದ ಟ್ವಿಸ್ಟ್ ಏನು ಗೊತ್ತೇ?

    ಪರಾರಿಯಾಗಿದ್ದ ಆಫ್ಘಾನ್​ ಅಧ್ಯಕ್ಷ ಪತ್ತೆ: ಅಶ್ರಫ್​ ಘನಿ ಕುಟುಂಬವನ್ನು ಸ್ವಾಗತಿಸಿದ ಯುಎಇ

    VIDEO| ಪಾಕ್​ ಟಿಕ್​ಟಾಕರ್​​ ಬಟ್ಟೆ ಹರಿದು, ಎಳೆದಾಡಿದ ನೂರಾರು ಯುವಕರು! ಭಯಾನಕ ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts