ಪರಾರಿಯಾಗಿದ್ದ ಆಫ್ಘಾನ್​ ಅಧ್ಯಕ್ಷ ಪತ್ತೆ: ಅಶ್ರಫ್​ ಘನಿ ಕುಟುಂಬವನ್ನು ಸ್ವಾಗತಿಸಿದ ಯುಎಇ

ನವದೆಹಲಿ: ಇಡೇ ದೇಶವನ್ನು ತಾಲಿಬಾನ್ ಆಕ್ರಮಿಸಕೊಂಡ ಬೆನ್ನಲ್ಲೇ ಅಫ್ಘಾನಿಸ್ತಾನದಿಂದ ಪರಾರಿಯಾಗಿದ್ದ ಆಫ್ಘಾನ್​ನ ಮಾಜಿ ಅಧ್ಯಕ್ಷ ಅಶ್ರಫ್​ ಘನಿಗೆ ಯುನೈಟೆಡ್​ ಅರಬ್​ ಎಮಿರೆಟ್ಸ್ (ಯುಎಇ)​ ಮಾನವೀಯ ನೆಲೆಗಟ್ಟಿನಲ್ಲಿ ಬುಧವಾರ ಆತಿಥ್ಯವನ್ನು ನೀಡಿದೆ. ಯುಎಇ ವಿದೇಶಾಂಗ ಸಚಿವಾಲಯ ಮತ್ತು ಅಂತಾರಾಷ್ಟ್ರೀಯ ಸಹಕಾರ ಇಲಾಖೆಯು ಈ ವಿಚಾರವನ್ನು ಖಚಿತಪಡಿಸಿದೆ. ಆಫ್ಘಾನ್​ನ ಮಾಜಿ ಅಧ್ಯಕ್ಷ ಮತ್ತು ಅವರ ಕುಟುಂಬವನ್ನು ಮಾನವೀಯ ನೆಲೆಗಟ್ಟಿನಲ್ಲಿ ಸ್ವಾಗತಿಸುತ್ತದೆ ಎಂದು ಯುಎಇ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ತಾಲಿಬಾನಿಗಳು ಕಾಬೂಲ್​​ ಕಡೆ ಬರುತ್ತಿದ್ದಂತೆ ಅಶ್ರಫ್​ ಘನಿ ಭಾನುವಾರ ಅಫ್ಘಾನಿಸ್ತಾನದಿಂದ ಕಾಲ್ಕಿತ್ತರು. … Continue reading ಪರಾರಿಯಾಗಿದ್ದ ಆಫ್ಘಾನ್​ ಅಧ್ಯಕ್ಷ ಪತ್ತೆ: ಅಶ್ರಫ್​ ಘನಿ ಕುಟುಂಬವನ್ನು ಸ್ವಾಗತಿಸಿದ ಯುಎಇ