More

    ಪರಾರಿಯಾಗಿದ್ದ ಆಫ್ಘಾನ್​ ಅಧ್ಯಕ್ಷ ಪತ್ತೆ: ಅಶ್ರಫ್​ ಘನಿ ಕುಟುಂಬವನ್ನು ಸ್ವಾಗತಿಸಿದ ಯುಎಇ

    ನವದೆಹಲಿ: ಇಡೇ ದೇಶವನ್ನು ತಾಲಿಬಾನ್ ಆಕ್ರಮಿಸಕೊಂಡ ಬೆನ್ನಲ್ಲೇ ಅಫ್ಘಾನಿಸ್ತಾನದಿಂದ ಪರಾರಿಯಾಗಿದ್ದ ಆಫ್ಘಾನ್​ನ ಮಾಜಿ ಅಧ್ಯಕ್ಷ ಅಶ್ರಫ್​ ಘನಿಗೆ ಯುನೈಟೆಡ್​ ಅರಬ್​ ಎಮಿರೆಟ್ಸ್ (ಯುಎಇ)​ ಮಾನವೀಯ ನೆಲೆಗಟ್ಟಿನಲ್ಲಿ ಬುಧವಾರ ಆತಿಥ್ಯವನ್ನು ನೀಡಿದೆ.

    ಯುಎಇ ವಿದೇಶಾಂಗ ಸಚಿವಾಲಯ ಮತ್ತು ಅಂತಾರಾಷ್ಟ್ರೀಯ ಸಹಕಾರ ಇಲಾಖೆಯು ಈ ವಿಚಾರವನ್ನು ಖಚಿತಪಡಿಸಿದೆ. ಆಫ್ಘಾನ್​ನ ಮಾಜಿ ಅಧ್ಯಕ್ಷ ಮತ್ತು ಅವರ ಕುಟುಂಬವನ್ನು ಮಾನವೀಯ ನೆಲೆಗಟ್ಟಿನಲ್ಲಿ ಸ್ವಾಗತಿಸುತ್ತದೆ ಎಂದು ಯುಎಇ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ತಾಲಿಬಾನಿಗಳು ಕಾಬೂಲ್​​ ಕಡೆ ಬರುತ್ತಿದ್ದಂತೆ ಅಶ್ರಫ್​ ಘನಿ ಭಾನುವಾರ ಅಫ್ಘಾನಿಸ್ತಾನದಿಂದ ಕಾಲ್ಕಿತ್ತರು. ಇದರ ಬೆನ್ನಲ್ಲೇ ಓಡಿಹೋಗಿದ್ದಕ್ಕೆ ಫೇಸ್​ಬುಕ್​ನಲ್ಲಿ ಸ್ಪಷ್ಟನೆ ನೀಡಿದ ಘನಿ, ತಾಲಿಬಾನ್​ ಜಯಿಸಿದೆ ಮತ್ತು ರಕ್ತದ ಪ್ರವಾಹವನ್ನು ತಪ್ಪಿಸಲು ಓಡಿಹೋಗಿದ್ದಾಗಿ ತಿಳಿಸಿದರು.

    ಬುಧವಾರದವರೆಗೂ ಘನಿ ಎಲ್ಲಿದ್ದಾರೆ ಎಂಬ ಮಾಹಿತಿ ಯಾರಿಗೂ ತಿಳಿದಿರಲಿಲ್ಲ. ಇದರ ನಡುವೆ ಘನಿ ಅವರು ತಜಕಿಸ್ತಾನ, ಉಜ್ಬೇಕಿಸ್ತಾನ ಅಥವಾ ಒಮನ್​ನಲ್ಲಿ ಇರಬಹುದು ಎಂದು ವರದಿಗಳಾಗಿದ್ದವು. ಇದೀಗ ಯುಎಇ ಅಧಿಕೃತವಾಗಿ ಹೇಳಿಕೆಯನ್ನೇ ಬಿಡುಗಡೆ ಮಾಡಿದ್ದು, ಘನಿ ಅವರಿಗೆ ಆತಿಥ್ಯವನ್ನು ನೀಡಿದೆ. (ಏಜೆನ್ಸೀಸ್​)

    ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣದಿಂದ ಶಶಿ ತರೂರ್​ ಖುಲಾಸೆ: ನಿಟ್ಟುಸಿರು ಬಿಟ್ಟ ಮಾಜಿ ಕೇಂದ್ರ ಸಚಿವ

    VIDEO| ಪಾಕ್​ ಟಿಕ್​ಟಾಕರ್​​ ಬಟ್ಟೆ ಹರಿದು, ಎಳೆದಾಡಿದ ನೂರಾರು ಯುವಕರು! ಭಯಾನಕ ವಿಡಿಯೋ ವೈರಲ್​

    ನಮಗೆ ಸಹಾಯ ಮಾಡಲು ಪ್ರಧಾನಿ ಮೋದಿಯಿಂದ ಮಾತ್ರ ಸಾಧ್ಯ: ಭಾರತದ ಮೇಲೆ ಆಫ್ಘಾನ್​ ಪ್ರಜೆಗಳ ಭರವಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts