More

    ಅಫ್ಘಾನಿಸ್ತಾನ ಮೇಲೆ ಪಾಕ್​ ವಾಯುದಾಳಿ: 8 ಜನರು ದಾರುಣ ಸಾವು

    ಕಾಬೂಲ್​: ರಷ್ಯಾ-ಉಕ್ರೇನ್‌ ಮಧ್ಯೆ ಯುದ್ಧದ ಬಳಿಕ ಅಫ್ಘಾನಿಸ್ತಾನ ಮೇಲೆ ಪಾಕಿಸ್ತಾನವು ಎರಡು ವಾಯುದಾಳಿ ಮಾಡಿದ್ದು, ಎಂಟು ಜನ ಮೃತಪಟ್ಟಿದ್ದಾರೆ. ಇದು ಮತ್ತೆರಡು ರಾಷ್ಟ್ರಗಳ ನಡುವಿನ ಸಮರಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

    ಇದನ್ನೂ ಓದಿ:  ಬಾಯ್‌ಫ್ರೆಂಡ್‌ಗಿಂತ ಶ್ರೀಮಂತೆ ಸ್ಮೃತಿ ಮಂದಾನ: ಇವ್ರಿಗೆ ‘ಬಾಯ್ ಫ್ರೆಂಡ್’ ಇದಾನಾ ಎಂದ್ರು ಆರ್‌ಸಿಬಿ ಫ್ಯಾನ್ಸ್!

    ಅಫ್ಘಾನಿಸ್ತಾನದ ಖೋಸ್ಟ್‌ ಹಾಗೂ ಪಕ್ತಿಕಾ ಪ್ರಾಂತ್ಯಗಳ ಮೇಲೆ ಪಾಕಿಸ್ತಾನವು ಎರಡು ವಾಯುದಾಳಿ ನಡೆಸಿದೆ. ಐವರು ಮಹಿಳೆಯರು, ಮೂವರು ಮಕ್ಕಳು ಸೇರಿ ಎಂಟು ಮಂದಿ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ತಾಲಿಬಾನ್ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. 2021ರಲ್ಲಿ ತಾಲಿಬಾನ್ ಸರ್ಕಾರವು ಅಧಿಕಾರವನ್ನು ವಶಪಡಿಸಿಕೊಂಡ ನಂತರ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಗಡಿ ಉದ್ವಿಗ್ನತೆ ಹೆಚ್ಚಿದೆ. ಇಸ್ಲಾಮಾಬಾದ್ ಉಗ್ರಗಾಮಿ ಗುಂಪುಗಳು ನೆರೆಯ ದೇಶದಿಂದ ನಿಯಮಿತವಾಗಿ ದಾಳಿ ನಡೆಸುತ್ತಿವೆ ಎಂದು ಹೇಳಿಕೊಂಡಿದೆ.

    ಸೋಮವಾರ ಬೆಳಗಿನ ಜಾವ 3:00 ಗಂಟೆಗೆ ಪಾಕ್ ಗಡಿಯ ಸಮೀಪವಿರುವ ಖೋಸ್ಟ್ ಮತ್ತು ಪಕ್ಟಿಕಾ ಪ್ರಾಂತ್ಯಗಳಲ್ಲಿ ಪಾಕಿಸ್ತಾನ ವಿಮಾನವು ನಾಗರಿಕರ ಮನೆಗಳ ಮೇಲೆ ಬಾಂಬ್ ದಾಳಿ ನಡೆಸಿದೆ ಎಂದು ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಾಲಿಬಾನ್ ಸರ್ಕಾರವು ಈ ದಾಳಿಗಳನ್ನು ಬಲವಾಗಿ ಖಂಡಿಸಿದ್ದು, ಈ ಅಜಾಗರೂಕ ಕ್ರಮವನ್ನು ಅಫ್ಘಾನಿಸ್ತಾನದ ಸಾರ್ವಭೌಮತ್ವದ ಉಲ್ಲಂಘನೆ ಮತ್ತು ದಾಳಿ ಎಂದು ಕರೆಯುತ್ತದೆ” ಎಂದು ಅವರು ಹೇಳಿದರು.

    ಅಫ್ಘಾನಿಸ್ತಾನ ಮೇಲೆ ಪಾಕ್​ ವಾಯುದಾಳಿ: 8 ಜನರು ದಾರುಣ ಸಾವು

    ಪಾಕ್ ದಾಳಿ ಮಾಡುವುದನ್ನು ನಾವು ಸಹಿಸುವುದಿಲ್ಲ. ಪಾಕಿಸ್ತಾನದ ದಾಳಿಯನ್ನು ನಾವು ಖಂಡಿಸುತ್ತೇವೆ ಹಾಗೂ ಅಫಘಾನಿಸ್ತಾನದ ಭದ್ರತೆಯ ವಿಚಾರದಲ್ಲಿ ನಾವು ಎಂದಿಗೂ ರಾಜಿ ಆಗುವುದಿಲ್ಲ ಎಂದು ತಾಲಿಬಾನ್‌ ಆಡಳಿತ ತಿಳಿಸಿದೆ. ಹಾಗೆಯೇ, ಇದರ ಪರಿಣಾಮವನ್ನು ಪಾಕಿಸ್ತಾನ ಎದುರಿಸಲಿದೆ ಎಂದು ತಾಲಿಬಾನ್‌ ಆಡಳಿತವು ಎಚ್ಚರಿಕೆ ನೀಡಿದೆ.

    ಪಾಕ್‌ ಪ್ರತಿದಾಳಿ?: ಪಾಕ್​ ಹಾಗೂ ಅಫ್ಘಾನಿಸ್ತಾನ ಮಧ್ಯೆ ಮೊದಲಿನಿಂದಲೂ ಬಿಕ್ಕಟ್ಟಿದೆ. ಕಳೆದ ಶನಿವಾರ (ಮಾರ್ಚ್‌ 16) ಪಾಕಿಸ್ತಾನದಲ್ಲಿರುವ ಸೇನಾ ನೆಲೆಯ ಮೇಲೆ ದಾಳಿ ನಡೆದಿತ್ತು. ಅಪರಿಚಿತರು ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ 7 ಸೈನಿಕರು ಮೃತಪಟ್ಟಿದ್ದರು. ಇದರ ಹಿಂದೆ ಅಫ್ಘಾನಿಸ್ತಾನ ಕೈವಾಡ ಇದೆ ಎಂಬುದರ ಕುರಿತು ಮಾಹಿತಿ ಪಡೆದ ಪಾಕಿಸ್ತಾನವು ದಾಳಿಗೆ ಪ್ರತಿಯಾಗಿ ಅಫ್ಘಾನಿಸ್ತಾನದ ಮೇಲೆ ವಾಯುದಾಳಿ ನಡೆಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮೊದಲು, ಸೇನಾ ನೆಲೆಯ ಮೇಲೆ ನಡೆದ ದಾಳಿ ಕುರಿತು ಪಾಕಿಸ್ತಾನವು ಅಧಿಕೃತ ಮಾಹಿತಿ ನೀಡಿರಲಿಲ್ಲ.

    ದಾಳಿ ನಿರಾಕರಿಸಿದ್ದ ತಾಲಿಬಾನ್‌: ಪಾಕ್ ಹಾಗೂ ಅಫ್ಘಾನಿಸ್ತಾನದ ಮಧ್ಯೆ ಆಗಾಗ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ. ಪಾಕಿಸ್ತಾನದಲ್ಲಿರುವ ಉಗ್ರರು ಆಫ್ಘನ್‌ ಮೇಲೆ, ಆಫ್ಘನ್‌ನಲ್ಲಿರುವ ತಾಲಿಬಾನಿಗಳು ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತವೆ. ಇದರ ಭಾಗವಾಗಿಯೇ ಅಫಘಾನಿಸ್ತಾನದಲ್ಲಿರುವ ಪಾಕಿಸ್ತಾನಿ ತಾಲಿಬಾನಿಗಳು ಪಾಕ್‌ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದವು. ಆದರೆ, ಅಫ್ಘಾನಿಸ್ತಾನವು ಇದನ್ನು ನಿರಾಕರಿಸಿತ್ತು. ತನ್ನ ದೇಶವನ್ನು ನಿಯಂತ್ರಿಸಿಕೊಳ್ಳಲು ಆಗದ ಪಾಕಿಸ್ತಾನ ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ಮಾಡುವುದು ಸರಿಯಲ್ಲ” ಎಂದು ತಾಲಿಬಾನ್‌ ಆಡಳಿತ ಸ್ಪಷ್ಟಪಡಿಸಿತ್ತು.

    ತಾಲಿಬಾನ್‌ ಸರ್ಕಾರಕ್ಕೆ ಪಾಕ್​ ಎಚ್ಚರಿಕೆ: ನಮ್ಮ ಗಡಿ, ಮನೆ ಅಥವಾ ದೇಶವನ್ನು ಪ್ರವೇಶಿಸಿ ಭಯೋತ್ಪಾದನೆ ಎಸಗುವವರು ಯಾರೇ ಆಗಿರಲಿ ಅಥವಾ ಯಾವ ದೇಶದವರು ಆಗಿರಲಿ ನಾವು ಅವರಿಗೆ ಬಲವಾಗಿ ಪ್ರತ್ಯುತ್ತರ ನೀಡುತ್ತೇವೆ ಎಂದು ಪಾಕಿಸ್ತಾನ ನಿರ್ಧರಿಸಿದೆ ಎಂದು ಸೈನಿಕರ ಅಂತ್ಯಕ್ರಿಯೆಯ ಪ್ರಾರ್ಥನೆಯಲ್ಲಿ ಭಾಗವಹಿಸಿದ ಲೆಫ್ಟಿನೆಂಟ್ ಕರ್ನಲ್ ಹೇಳಿದ್ದಾರೆ.

    ಗಡಿಯುದ್ದಕ್ಕೂ ಇರುವ ಪ್ರದೇಶಗಳು ಪಾಕಿಸ್ತಾನದ ಸ್ವದೇಶಿ-ಬೆಳೆದ ತಾಲಿಬಾನ್ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ನಂತಹ ಉಗ್ರಗಾಮಿ ಗುಂಪುಗಳಿಗೆ ಬಹಳ ಹಿಂದಿನಿಂದಲೂ ಭದ್ರಕೋಟೆಯಾಗಿದೆ, ಇದು ಅಫ್ಘಾನಿಸ್ತಾನದೊಂದಿಗೆ ರಂಧ್ರವಿರುವ ಗಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

    ಬಾಯ್‌ಫ್ರೆಂಡ್‌ಗಿಂತ ಶ್ರೀಮಂತೆ ಸ್ಮೃತಿ ಮಂದಾನ: ಇವ್ರಿಗೆ ‘ಬಾಯ್ ಫ್ರೆಂಡ್’ ಇದಾನಾ ಎಂದ್ರು ಆರ್‌ಸಿಬಿ ಫ್ಯಾನ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts