ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ 74ನೇ ಗಣರಾಜ್ಯೋತ್ಸವದಲ್ಲಿ ವಿವಿಧ ಶಾಲಾ ಮಕ್ಕಳು ದೇಶಭಕ್ತಿ ಸಾರುವ ಗೀತೆಗಳಿಗೆ ಮನಮೋಹಕವಾಗಿ ನೃತ್ಯ ರೂಪಕ ಮಾಡಿದರು. ಉತ್ತರಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯ 750 ವಿದ್ಯಾರ್ಥಿಗಳಿಂದ ‘ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್’ ಹಾಡಿಗೆ ನೃತ್ಯರೂಪ ಮಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಶುರುವಾಯಿತು. ‘ನಮ್ಮ ಭಾರತ ಭಾಗ್ಯವಿದಾತ – ರೈತ’ ಹಾಡಿಗೆ ಬಿಬಿಎಂಪಿ ಸಂಯುಕ್ತ ಪದವಿಪೂರ್ವ ಕಾಲೇಜು ಮಾಗಡಿ ರಸ್ತೆ ಮತ್ತು ಬಿಬಿಎಂಪಿ ಪ್ರೌಢಶಾಲೆ ವಿಜಯನಗರದ 650 ವಿದ್ಯಾರ್ಥಿಗಳಿಂದ ನೃತ್ಯ ನಮನ. ಲಗ್ಗೆರೆಯ ಸರ್ಕಾ ಶಾಲೆ, ವಿಷ್ಣು ಇಂಟರ್ ನ್ಯಾಷನಲ್ ಸ್ಕೂಲ್ನ 600 ವಿದ್ಯಾರ್ಥಿಗಳು ‘ಭಾರತಾಂಬೆ ನಿನ್ನ ಜನ್ಮ ದಿನ’ ಹಾಡಿಗೆ ನೃತ ಮಾಡಿದರು. ಮಕ್ಕಳ ನೃತ್ಯ ರೂಪಕ ವಿಜಯವಾಣಿಯ ಫೋಟೋಗ್ರಾಫರ್ ಸುಧೀಂದ್ರ ಶ್ರೀರಂಗರಾಜು ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ…
ಕಾರ್ಕಳದಲ್ಲಿ ತಡರಾತ್ರಿ ಘೋರ ದುರಂತ: ತಮ್ಮನ ಮನೆಗೆ ಕೊಳ್ಳಿ ಇಟ್ಟು ಬಳಿಕ ಕಾರಿನಲ್ಲೇ ಪೆಟ್ರೋಲ್ ಸುರಿದುಕೊಂಡು ಅಣ್ಣ ಸಾವು!
ಸೊಂಟದ ಸ್ವಾಧೀನವಿಲ್ಲದ ವಿದ್ಯಾರ್ಥಿಗೆ ಸಂಕಷ್ಟ: ದಾನಿಗಳು ನೀಡಿದ ನೆರವಿನ ಹಣ ಬ್ಯಾಂಕ್ ಸಾಲಕ್ಕೆ ಜಮಾ! ತಬ್ಬಲಿ ಮಗುವಿಗೆ ಇದೆಂಥಾ ಕಷ್ಟ?
ಬಿಎಚ್ ಸರಣಿ ನಂಬರ್ಗೆ ಡಿಮಾಂಡ್! ಯಾವ ರಾಜ್ಯಕ್ಕೆ ಹೋದರೂ ವಾಹನ ಸಂಖ್ಯೆ ಒಂದೇ; ರಾಜ್ಯದಲ್ಲಿ 4700 ನೋಂದಣಿ