ಕಡೂರು(ಚಿಕ್ಕಮಗಳೂರು): ತಂದೆ-ತಾಯಿ ಇಲ್ಲದಿದ್ದರೂ, ಅಜ್ಜಿಯ ಆಸರೆಯಲ್ಲಿ ಓದಿ ಏನಾದರೂ ಸಾಧನೆ ಮಾಡಬೇಕೆಂಬ ವಿದ್ಯಾರ್ಥಿಯ ಛಲಕ್ಕೆ ಆರೋಗ್ಯದ ಸಮಸ್ಯೆ ಸವಾಲಾಗಿದೆ. ಇದೂ ಸಾಲದೆಂಬಂತೆ ಬಾಲಕನ ಕನಸು ನನಸಾಗಲು ಸಹೃದಯಿಗಳು ನೀಡಿದ ನೆರವಿನ ಹಣವನ್ನು ಬ್ಯಾಂಕ್ ಅಧಿಕಾರಿಗಳು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪಟ್ಟಣದ ಹಳೇಪೇಟೆಯ ಸಿದ್ದೇದೇವರ ಗುಡಿಬೀದಿಯ ಹತ್ತನೇ ತರಗತಿ ವಿದ್ಯಾರ್ಥಿ ಮನೋಜ್ ಹಠಾತ್ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ಸೊಂಟದ ಸ್ವಾಧೀನ ಕಳೆದುಕೊಂಡಿದ್ದಾನೆ.
ತಂದೆ-ತಾಯಿ ಇಬ್ಬರೂ ಇಲ್ಲದ ಮೊಮ್ಮಗನ ಚಿಕಿತ್ಸೆಗಾಗಿ ಅಜ್ಜಿ ಇಂದ್ರಮ್ಮ, ಸ್ವಸಹಾಯ ಸಂಘ ಹಾಗೂ ಬ್ಯಾಂಕ್ಗಳಿಂದ ತೆಗೆದುಕೊಂಡ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಲಾಗದೆ ಪರಿತಪಿಸುತ್ತಿದ್ದಾರೆ. ಈ ನಡುವೆ ದಾನಿಗಳು ಮನೋಜ್ ಚಿಕಿತ್ಸೆಗೆ ನೆರವಾಗಲು ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುತ್ತಿದ್ದು, ಈ ಹಣವನ್ನು ಬ್ಯಾಂಕ್ ಅಧಿಕಾರಿಗಳು ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಇದು ಅಜ್ಜಿ-ಮೊಮ್ಮಗನ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.
ಬಿಎಚ್ ಸರಣಿ ನಂಬರ್ಗೆ ಡಿಮಾಂಡ್! ಯಾವ ರಾಜ್ಯಕ್ಕೆ ಹೋದರೂ ವಾಹನ ಸಂಖ್ಯೆ ಒಂದೇ; ರಾಜ್ಯದಲ್ಲಿ 4700 ನೋಂದಣಿ
ಅವನಿಗೆ ಪ್ಯಾಂಟ್ ಬಿಚ್ಚೋಕೆ ನಾನು ಹೇಳಿದ್ನಾ? ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ಆಕ್ರೋಶ