ಬೆಳ್ಮಣ್: ಇಲ್ಲೊಬ್ಬ ಅಣ್ಣ, ತಮ್ಮನ ಮನೆಗೆ ಬೆಂಕಿ ಇಟ್ಟು ಬಳಿಕ ಕಾರಿನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ದುರ್ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ಕುದ್ರುಟ್ಟುವಿನಲ್ಲಿ ನಿನ್ನೆ(ಬುಧವಾರ) ತಡರಾತ್ರಿ ನಡೆದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಸಚ್ಚೇರಿಪೇಟೆಯ ಕೃಷ್ಣ ಸಪಳಿಗ ಮೃತ ದುರ್ದೈವಿ. ಕೃಷ್ಣನ ಸಹೋದರನ ಹೆಸರು ಶೇಖರ ಸಪಳಿಗ. ಶೇಖರನ ಮನೆಯಲ್ಲಿ ಕೃಷ್ಣ ಮತ್ತು ಶೇಖರನ ಸಹೋದರಿಯ ಮಗಳ ಮದುವೆ ಹಿನ್ನೆಲೆ ಬುಧವಾರ ಮೆಹಂದಿ ಶಾಸ್ತ್ರ ನಡೆದಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೃಷ್ಣ, ರಾತ್ರಿ ತಮ್ಮನ ಮನೆಯಿಂದ ವಾಪಸ್ ತೆರಳಿದ್ದ.
ಬುಧವಾರ ತಡರಾತ್ರಿ ಡೆತ್ನೋಟ್ ಬರೆದಿಟ್ಟು, ಸಮೀಪದ ಕಟ್ಟಡವೊಂದಕ್ಕೆ ಅಂಟಿಸಿ ತಮ್ಮನ ಮನೆಗೆ ಬೆಂಕಿ ಹಚ್ಚಿ ಬಳಿಕ ಓಮಿನಿ ಕಾರಿನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಧಗಧಗಿಸುತ್ತಿದ್ದ ಕಾರು, ಕೃಷ್ಣನ ನರಳಾಟ ನೋಡಿ ಸ್ಥಳೀಯರು ಬೆಚ್ಚಿಬಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು. ಕೃಷ್ಣ ಮಾನಸಿಕವಾಗಿ ನೊಂದಿದ್ದ ಎನ್ನಲಾಗಿದೆ. ಇನ್ನೂ ಕೆಲವರು ಈ ಘಟನೆಗೆ ಜಮೀನು ವಿವಾದ ಕಾರಣ ಎನ್ನುತ್ತಿದ್ದಾರೆ. ಪೊಲೀಸ್ ತನಿಖೆ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.
ಬಿಎಚ್ ಸರಣಿ ನಂಬರ್ಗೆ ಡಿಮಾಂಡ್! ಯಾವ ರಾಜ್ಯಕ್ಕೆ ಹೋದರೂ ವಾಹನ ಸಂಖ್ಯೆ ಒಂದೇ; ರಾಜ್ಯದಲ್ಲಿ 4700 ನೋಂದಣಿ
ಅವನಿಗೆ ಪ್ಯಾಂಟ್ ಬಿಚ್ಚೋಕೆ ನಾನು ಹೇಳಿದ್ನಾ? ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ಆಕ್ರೋಶ