More

    ಮುಂದಿನ ವಾರದಿಂದ ‘ಫ್ಯಾಂಟಮ್​’ ಚಿತ್ರೀಕರಣ ಶುರು!

    ಸುದೀಪ್​ ಅಭಿನಯದ ‘ಫ್ಯಾಂಟಮ್​’ ಚಿತ್ರದ ಚಿತ್ರೀಕರಣ ಜುಲೈ ಒಂದರಿಂದ ಪ್ರಾರಂಭವಾಗಲಿದೆ ಎಂದು ಹೇಳಲಾಗಿತ್ತು. ಆ ನಂತರ ಅದು ಜುಲೈ 6ಕ್ಕೆ ಎಂದು ಹೇಳಲಾಯಿತು. ಎಲ್ಲಾ ಅಂದುಕೊಂಡಂತೆ, ಎರಡು ದಿನಗಳಿಂದ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಇದೀಗ ಚಿತ್ರದ ಶೂಟಿಂಗ್​ನಲ್ಲಿ ಬದಲಾವಣೆಯಾಗಿದ್ದು, ಮುಂದಿನ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

    ಇದನ್ನೂ ಓದಿ: VIDEO|ಸೈಂಟಿಫಿಕ್ ಫಿಕ್ಷನ್ ಸಿನಿಮಾದ ನಾಯಕಿ: ಈಕೆ ಜಗತ್ತಿನ ಮೊದಲ ಎಐ ಆರ್ಟಿಸ್ಟ್​!

    ಈ ಸಂಬಂಧ ಇನ್ನೆರೆಡು ದಿನಗಳಲ್ಲಿ ತಂತ್ರಜ್ಱರು ಹೈದರಾಬಾದ್​ಗೆ ಪ್ರಯಾಣ ಬೆಳೆಸಲಿದ್ದಾರೆ. ಅದಾಗಿ ಎರಡು ದಿನಗಳಿಗೆ ಕಲಾವಿದರು ಸಹ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಆ ನಂತರ ಕ್ವಾರಂಟೈನ್​ ಮುಗಿಸಿ, ಚಿತ್ರತಂಡ ಮುಂದಿನ ವಾರದಿಂದ ಚಿತ್ರೀಕರಣ ಪ್ರಾರಂಭಿಸಲಿದೆ ಎಂದು ನಿರ್ಮಾಪಕ ಜಾಕ್​ ಮಂಜು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ವಿಶೇಷವೆಂದರೆ, ಚಿತ್ರಕ್ಕಾಗಿ ಹೈದರಾಬಾದ್​ನ ಅನ್ನಪೂರ್ಣ ಸ್ಟುಡಿಯೋದ ಮೂರು ಫ್ಲೋರ್​ಗಳನ್ನು ಬುಕ್ ಮಾಡಲಾಗಿದೆ. ಈ ಫ್ಲೋರ್​ಗಳಲ್ಲಿ ಕಾಡಿನ ಸೆಟ್​ ನಿರ್ಮಿಸಲಾಗುತ್ತಿದೆ. ಬರೀ ಕಾಡಷ್ಟೇ ಅಲ್ಲ, ಜಲಪಾತ, ಸೇತುವೆ, ಗುಡಿಸಲುಗಳು ಇವೆಲ್ಲಾ ಈ ಸೆಟ್​ಗಳಲ್ಲಿ ನಿರ್ಮಾಣವಾಗಲಿದೆ. ಈ ಪೈಕಿ ಒಂದು ಫ್ಲೋರ್​ 18 ಸಾವಿರ ಚದುರಡಿಗಳಷ್ಟು ಇದ್ದು, ಇಲ್ಲಿ ಬಹಳಷ್ಟು ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಕಾಡಿನ ಸೆಟ್​ ಆದ್ದರಿಂದ, ರಾಜಮಂಡ್ರಿಯಿಂದ 50 ಲಕ್ಷ ಮೌಲ್ಯದ ಗಿಡಗಳನ್ನು ತರಿಸಲಾಗಿದೆ. ಈ ಗಿಡಗಳನ್ನು ಬಳಸಿಕೊಂಡು, ಕಾಡಿನ ಸೆಟ್​ ನಿರ್ಮಿಸಲಾಗುತ್ತಿದೆ.

    ಈಗಾಗಲೇ ಕಳೆದ ಕೆಲವು ದಿನಗಳಿಂದ ಕೆಲಸಗಾರರು, ಈ ಸೆಟ್​ನ ನಿಮಾರ್ಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಸೆಟ್​ ಕೆಲಸಗಳು ಅಂತಿಮ ಹಂತಕ್ಕೆ ತಲುಪಿದ್ದು, ಮುಂದಿನ ವಾರದಿಂದ ಇದೇ ಸೆಟ್​ನಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಕೋವಿಡ್​ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ, ವಿಶೇಷ ಎಚ್ಚರಿಕೆಗಳನ್ನು ತೆಗೆದುಕೊಂಡು ಚಿತ್ರೀಕರಣ ಮಾಡಲಾಗುತ್ತದೆ ಎಂದು ಜಾಕ್​ ಮಂಜು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ನಾಲ್ಕು ವರ್ಷಗಳಿಂದ ನೋಡಿಲ್ಲ, ಮಾತಾಡಿಲ್ಲ … ಸಂಜಯ್​ ಲೀಲಾ ಬನ್ಸಾಲಿ ಸ್ಪಷ್ಟನೆ

    ‘ಫ್ಯಾಂಟಮ್​’ ಚಿತ್ರವನ್ನು ಶಾಲಿನಿ ಆರ್ಟ್ಸ್​ನಡಿ ನಿರ್ಮಾಣ ಮಾಡಲಾಗುತ್ತಿದ್ದು, ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆಯುವುದರ ಜತೆಗೆ ನಿರ್ದೇಶನ ಮಾಡುತ್ತಿದ್ದಾರೆ ‘ರಂಗಿತರಂಗ’ ಖ್ಯಾತಿಯ ಅನೂಪ್​ ಭಂಡಾರಿ. ಚಿತ್ರದಲ್ಲಿ ಸುದೀಪ್​ ಅವರು ವಿಕ್ರಾಂತ್​ ರೋಣ ಎಂಬ ಪಾತ್ರ ಮಾಡುತ್ತಿದ್ದು, ಜತೆಗೆ ನಿರೂಪ್​ ಭಂಡಾರಿ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಪ್ರಭಾಸ್​ಗೆ ಸಿಕ್ತು ಹೊಸ ಬಿರುದು … ಏನಿರಬಹುದು ಹೇಳಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts