More

    ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್‌ನಿಂದ ಜನರಿಗಿಲ್ಲ ಹೊರೆ!

    ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಮಂಡಿಸಿರುವ ಕೇಂದ್ರ ಬಜೆಟ್‌ನಲ್ಲಿ ಪೆಟ್ರೋಲ್ ಮೇಲೆ ಎರಡೂವರೆ ರೂಪಾಯಿ, ಡೀಸೆಲ್ ಮೇಲೆ ನಾಲ್ಕು ರೂಪಾಯಿ ಸೆಸ್ ವಿಧಿಸಿದ್ದರೂ ಅದರಿಂದ ಜನಸಾಮಾನ್ಯರ ಮೇಲೆ ಯಾವುದೇ ಹೊರೆ ಬೀಳುವುದಿಲ್ಲ! ಆಶ್ಚರ್ಯವಾದರೂ ಇದು ಸತ್ಯ. ಹೇಗೆ ಅಂತೀರಾ? ಇಲ್ಲಿದೆ ನೋಡಿ ವಿವರ.

    ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸಿರುವುದು ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿಯ ಉಪ ಕರ. ಇದಕ್ಕೆ ಎಐಡಿಸಿ ಎನ್ನುತ್ತಾರೆ. ಇದನ್ನು ಹೆಚ್ಚಿಸಿರುವ ಸಂದರ್ಭದಲ್ಲೇ ಮೂಲ ಅಬಕಾರಿ ಸುಂಕ (ಬಿಇಡಿ) ಮತ್ತು ವಿಶೇಷ ಹೆಚ್ಚುವರಿ ಅಬಕಾರಿ ಸುಂಕದ (ಎಸ್‌ಎಇಸಿ) ಪ್ರಮಾಣವನ್ನು ಇಳಿಸಿರುವುದರಿಂದ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ದರ ಏರಿಕೆ ಆಗುವುದಿಲ್ಲ. ಹಾಗಾಗಿ ಜನಸಾಮಾನ್ಯರ ಮೇಲೆ ಇದರ ಹೊರೆ ಬೀಳು ಪ್ರಶ್ನೆಯೇ ಉದ್ಭವಿಸುವುದಿಲ್ಲ.

    ಬ್ರಾಂಡ್‌ರಹಿತ ಪೆಟ್ರೋಲ್ ಮೇಲೆ ಬಿಇಡಿ ಇದುವರೆಗೆ ಪ್ರತಿ ಲೀಟರ್‌ಗೆ 2.98 ರೂ. ಮತ್ತು ಎಸ್‌ಎಇಸಿ 12 ರೂ. ಇತ್ತು. ಅವುಗಳನ್ನು ಕೇಂದ್ರ ಸರ್ಕಾರ ಕ್ರಮವಾಗಿ 1.4 ರೂ. ಮತ್ತು 11 ರೂ.ಗೆ ಇಳಿಸಿದೆ. ಬ್ರಾಂಡ್‌ರಹಿತ ಡೀಸೆಲ್ ಮೇಲೆ ಬಿಇಡಿ ಈವರೆಗೆ 4.83 ರೂ. ಮತ್ತು ಎಸ್‌ಎಇಸಿ 9 ರೂ. ಇತ್ತು. ಅವುಗಳನ್ನು ಕ್ರಮವಾಗಿ 1.8 ರೂ. ಮತ್ತು 8 ರೂ.ಗೆ ಇಳಿಸಲಾಗಿದೆ. ಒಟ್ಟಾರೆ ಅಬಕಾರಿ ಸುಂಕ ಇದುವರೆಗೆ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 14.98 ರೂ. ಮತ್ತು ಡೀಸೆಲ್ ಮೇಲೆ 13.83 ಇತ್ತು. ಅವು ಈಗ ಕ್ರಮವಾಗಿ 14.9 ರೂ. ಮತ್ತು 13.8 ರೂ. ಆಗಲಿವೆ. ಇದರಿಂದಾಗಿ ಸೆಸ್ ಏರಿಕೆಯಾದರೂ ಪೆಟ್ರೋಲ್, ಡೀಸೆಲ್ ಬೆಲೆ ಮುಕ್ತ ಮಾರುಕಟ್ಟೆಯಲ್ಲಿ ಏರಿಕೆಯಾಗುವುದಿಲ್ಲ. ಚಿನ್ನ ಹಾಗೂ ಮದ್ಯದ ಮೇಲಿನ ಸೆಸ್ ಏರಿಸಿದರೂ ಆಮದು ಮತ್ತು ಅಬಕಾರಿ ಸುಂಕದಲ್ಲಿ ಹೊಂದಾಣಿಕೆ ಮಾಡಿರುವುದರಿಂದ ಅವುಗಳ ಹೆಚ್ಚಿನ ಏರಿಳಿತ ಕಂಡುಬರುವುದಿಲ್ಲ.

    ಕೇಂದ್ರ ಬಜೆಟ್​| ಚುನಾವಣೆ ನಡೆಯುವ ಈ 4 ರಾಜ್ಯಗಳಿಗೆ ಮಾತ್ರ ಬಂಪರ್​ ಅನುದಾನ

    ಕೇಂದ್ರ ಬಜೆಟ್​: ಮನೆ ನಿರ್ಮಾಣದ ಕನಸುಳ್ಳವರಿಗೆ ಅಗ್ಗದ ಗೃಹಸಾಲ

    ಕೇಂದ್ರ ಬಜೆಟ್​: ಹಳೇ ವಾಹನಗಳಿಗೆ ಸ್ಕ್ರ್ಯಾಪಿಂಗ್​ ನೀತಿ ಜಾರಿ

    ಕೇಂದ್ರ ಬಜೆಟ್: 75 ವರ್ಷ ಮೇಲ್ಪಟ್ಟವರಿಗೆ ಆದಾಯ ತೆರಿಗೆಯಿಂದ ವಿನಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts