More

    ಕುವೆಂಪು ವಿವಿಯಲ್ಲಿ ಬಜೆಟ್ ಮಂಡನೆ

    ಶಿವಮೊಗ್ಗ: ಕುವೆಂಪು ವಿವಿಯ ವಿದ್ಯಾ ವಿಷಯಕ ಪರಿಷತ್‌ನಲ್ಲಿ 2024-25ನೇ ಸಾಲಿಗೆ 137.7 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದು, 1.85 ಕೋಟಿ ರೂ. ಕೊರತೆ ಬಜೆಟ್ ಇದಾಗಿದೆ. ಈ ಸಾಲಿನಲ್ಲಿ ಹೊಸದಾಗಿ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳದೇ ಬಾಕಿ ಉಳಿದಿರುವ ಕಾಮಗಾರಿಗಳನ್ನು ಮುಗಿಸುವ ಗುರಿ ಹೊಂದಲಾಗಿದೆ ಎಂದು ವಿವಿ ಹಣಕಾಸು ಅಧಿಕಾರಿ ಜಿ.ಬಂಗಾರಪ್ಪ ತಿಳಿಸಿದರು.

    ವಿದ್ಯಾ ವಿಷಯಕ ಪರಿಷತ್‌ನಲ್ಲಿ ಬಜೆಟ್ ಮಂಡಿಸಿದ ವಿವಿಯ ಹಣಕಾಸು ಅಧಿಕಾರಿ ಜಿ.ಬಂಗಾರಪ್ಪ, ಯುಯುಸಿಎಂಎಸ್ ತಂತ್ರಾಂಶವನ್ನು ಹಂತ ಹಂತವಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಈ ಸಾಲಿನಲ್ಲಿ 4ನೇ ಆವೃತ್ತಿಯ ನ್ಯಾಕ್ ಮಾನ್ಯತೆ ಪಡೆಯಬೇಕಿರುವುದರಿಂದ ಬೋಧನೆ ಮತ್ತು ಸಂಶೋಧನಾ ಕ್ಷೇತ್ರದ ಪ್ರಗತಿಯನ್ನು ಅನಾವರಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
    ಮೂಲಭೂತ ಸೌಕರ್ಯಗಳೊಂದಿಗೆ ಬೋಧನೆ ಮತ್ತು ಸಂಶೋಧನೆಗೆ ಅನುಗುಣವಾಗಿ ಶ್ರೇಣಿ ಲಭಿಸಿರುವುದರಿಂದ ಸಂಶೋಧನೆಗೆ ಮತ್ತು ಬೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಹೆಚ್ಚುವರಿ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯೊಂದಿಗೆ ಎಲ್ಲ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮುಂದುವರಿಸಲಾಗುತ್ತಿದೆ ಎಂದು ತಿಳಿಸಿದರು.
    ಹೆಚ್ಚುವರಿ ಅನುದಾನಕ್ಕೆ ಮನವಿ:ಹೆಚ್ಚುವರಿ ಅಭಿವೃದ್ಧಿಗಾಗಿ ಅನುದಾನ ಕೋರಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಹೊಸ ಕಟ್ಟಡದಲ್ಲಿ 22 ಕೊಠಡಿಗಳನ್ನು ನಿರ್ಮಿಸಿದ್ದು, ಶೀಘ್ರವೇ ಇದು ತರಗತಿಯ ಬಳಕೆಗೆ ಲಭ್ಯವಾಗಲಿದೆ. ರೂಸ ಯೋಜನೆಯಡಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಸತಿ ನಿಲಯವನ್ನು ನಿರ್ಮಿಸಲಾಗಿದೆ ಎಂದು ಬಂಗಾರಪ್ಪ ತಿಳಿಸಿದರು.
    ಸಭೆಯಲ್ಲಿ ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ಕುಲಸಚಿವ ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ.ಎಸ್.ಎಂ. ಗೋಪಿನಾಥ್ ಹಾಗೂ ವಿದ್ಯಾ ವಿಷಯಕ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.
    ಸ್ವೀಕೃತಿಯ ನಿರೀಕ್ಷೆ-135.88 ಕೋಟಿ ರೂ.
    ಒಟ್ಟು ವೆಚ್ಚ-137.74 ಕೋಟಿ ರೂ.
    ವಿತ್ತೀಯ ಕೊರತೆ-1.85 ಕೋಟಿ ರೂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts