More

    ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

    ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್​ಗೆ 1.60 ರೂ. ಮತ್ತು ಡೀಸೆಲ್ 1.59 ರೂ. ಏರಿಕೆಯಾಗಲಿದ್ದು, ಈ ಕುರಿತ ಅಧಿಸೂಚನೆ ಹೊರಬಿದ್ದಿದೆ.

    ರಾಜ್ಯದಲ್ಲಿ ತೆರಿಗೆ ಸಂಗ್ರಹಣೆ ಕುಂಠಿತ ಹಾಗೂ ಕೇಂದ್ರದಿಂದ ಪಾಲು ಪೂರ್ಣ ಬಾರದೆ ಇರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಸಂಪನ್ಮೂಲ ಕ್ರೋಡೀಕರಿಸಲು ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇ.32ರಿಂದ ಶೇ.35ಕ್ಕೆ ಮತ್ತು ಡೀಸೆಲ್ ಮೇಲಿನ ತೆರಿಗೆ ದರವನ್ನು ಶೇ.21ರಿಂದ 24ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರದ ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿತ್ತು. 2017ರಲ್ಲಿ ಶೇ. 35ರಷ್ಟು ಹೆಚ್ಚಳ ಮಾಡಲಾಗಿತ್ತು. ಬಳಿಕ ಶೇ. 32ಕ್ಕೆ ಇಳಿಸಲಾಗಿತ್ತು. ಇದೀಗ ಅದೇ ಆದೇಶವನ್ನು ಜಾರಿ ಮಾಡಲಾಗುತ್ತಿದೆ. ಡೀಸೆಲ್ ತೆರಿಗೆ ದರವನ್ನು ಶೇ. 21 ರಿಂದ 24ಕ್ಕೆ ಹೆಚ್ಚಳ ಮಾಡಿ ಆದೇಶ ಮಾಡಲಾಗಿದೆ.

    ಇದರೊಟ್ಟಿಗೆ ವಾಯುಯಾನ ಇಂಧನದ ತೆರಿಗೆ (ಶೇ.28), ಪೈಪ್ ಮೂಲಕ ಸರಬರಾಜಾಗುವ ಗ್ಯಾಸ್ (ಪಿಎನ್​ಜಿ) (ಶೇ.5.5) ದರವನ್ನೂ ಪರಿಷ್ಕರಿಸಲಾಗಿದೆ.

    ಬಿಎಸ್-6 ಇಂಧನ

    ಜಾಗತಿಕ ಮಟ್ಟದ ಯೂರೋ-6ಗೆ ಅನುಗುಣವಾಗಿ ಬಿಎಸ್-6 ಮಾನಕದ ಶುದ್ಧ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಏ.1ರಂದು ಆರಂಭವಾಗಲಿದೆ. ಇದರಿಂದ ತೈಲ ದರ ಲೀಟರ್​ಗೆ -ಠಿ; 1ರವರೆಗೆ ಹೆಚ್ಚಳ ಆಗುವ ಸಾಧ್ಯತೆ ಇದೆ. ಹೀಗಾಗಿ ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 2.5 ರೂ. ವರೆಗೂ ಏರಿಕೆ ಸಾಧ್ಯತೆ ಇದೆ.

    ನೋಂದಣಿ ಶುಲ್ಕ ಇಳಿಕೆ

    ಕೈಗೆಟುಕುವ ದರದ ಮನೆಗಳನ್ನು ಪ್ರೋತ್ಸಾಹಿಸಲು 20 ಲಕ್ಷ ರೂ.ಗಿಂತ ಕಡಿಮೆ ಮೌಲ್ಯದ ಅಪಾರ್ಟ್ ಮೆಂಟ್​ಗಳ ಮೊದಲನೇ ನೋಂದಣಿಗೆ ಮುದ್ರಾಂಕ ಶುಲ್ಕವನ್ನು ಶೇ.5ರಿಂದ ಶೇ.2ಕ್ಕೆ ಇಳಿಸಲು ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿತ್ತು. ಅದೂ ಏ.1ರಂದು ಅನುಷ್ಠಾನಕ್ಕೆ ಬರುತ್ತಿದೆ. ಮದ್ಯದ ಎಲ್ಲಾ 18 ಘೋಷಿತ ಬೆಲೆ ಸ್ಲ್ಯಾಬ್​ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕದ ದರಗಳನ್ನು ಹಾಲಿ ದರದ ಮೇಲೆ ಶೇ. 6ರಷ್ಟು ಹೆಚ್ಚಿಸಲು ಪ್ರಸ್ತಾಪಿಸಲಾಗಿದ್ದು, ಈ ಬಗ್ಗೆ ಅಧಿಕೃತ ಆದೇಶ ಹೊರಬಿದ್ದು ಅನುಷ್ಠಾನವಾಗಬೇಕಿದೆ. 12 ಕ್ಕಿಂತ ಹೆಚ್ಚು ಹಾಗೂ 20 ಆಸನಗಳನ್ನು ಮೀರದ ಪ್ರಯಾಣಿಕರನ್ನು ಕೊಂಡೊಯ್ಯುವ ಒಪ್ಪಂದ ವಾಹನಗಳಿಗೆ ಮೋಟಾರು ವಾಹನ ತೆರಿಗೆಯಲ್ಲಿ ತ್ರೖೆಮಾಸಿಕ ಪ್ರತಿ ಆಸನಕ್ಕೆ 900 ರೂ.ಗಳನ್ನು ನಿಗದಿಗೊಳಿಸಲು ಸಹ ಉದ್ದೇಶಿಸಲಾಗಿದೆ.

    ಚೀನಾದ ಮೊದಲ ಕರೊನಾ ಸೋಂಕಿತೆಯಿಂದ ಸ್ಫೋಟಕ ಮಾಹಿತಿ: ಜೀವಂತ ಪ್ರಾಣಿ ಮಾರುಕಟ್ಟೆ ವೈರಸ್​ ಹುಟ್ಟಿನ ಕೇಂದ್ರವಾಯಿತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts