More

    60 ವರ್ಷ ಮೇಲ್ಪಟ್ಟವರಲ್ಲಿ ಈ ಸರ್ಟಿಫಿಕೇಟ್​ ಇದ್ದರಷ್ಟೇ ಬೂಸ್ಟರ್​ ಡೋಸ್!

    ನವದೆಹಲಿ: ಒಮಿಕ್ರಾನ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಎರಡೂ ಡೋಸ್​ ಲಸಿಕೆ ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂಬುದಾಗಿ ನಾನಾ ರೀತಿಯಲ್ಲಿ ಷರತ್ತು ಹಾಕಲಾಗುತ್ತಿರುವುದರಿಂದ ಎರಡನೇ ಡೋಸ್​ಗೆ ಹಲವರು ಚುರುಕಿನಿಂದ ಧಾವಿಸುತ್ತಿದ್ದಾರೆ. ಇನ್ನು ಕೆಲವೆಡೆ ಬೂಸ್ಟರ್ ಡೋಸ್ ಅಗತ್ಯ ಎನ್ನುವಂಥ ವಿಷಯಗಳು ಹರಿದಾಡುತ್ತಿವೆ.

    ಈ ಮಧ್ಯೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿನ್ನೆ ಮಹತ್ವದ ಘೋಷಣೆಯೊಂದನ್ನು ಹೊರಡಿಸಿದ್ದಾರೆ. ಅದೇನೆಂದರೆ ಜ.3ರಿಂದ 15ರಿಂದ 18ರ ವಯೋಮಾನದವರಿಗೆ ಲಸಿಕೆ ನೀಡಲಾಗುವುದು ಎಂದು ಹೇಳಿದ್ದಾರೆ. ಆ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೂ ಸುರಕ್ಷೆ ಒದಗಿಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದಿದ್ದಾರೆ.

    ಇದನ್ನೂ ಓದಿ: 25 ಸಾವಿರಕ್ಕೂ ಅಧಿಕ ಮಾತ್ರೆ ತಿಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಗುಂಡು ಹೊಡೆದುಕೊಂಡು ಬಿಇಒ ಆತ್ಮಹತ್ಯೆ!

    ಈ ಎಲ್ಲದರಿಂದಾಗಿ ಲಸಿಕೆ ಲಭ್ಯತೆ ಕಷ್ಟವಾದರೂ ಅಚ್ಚರಿ ಏನಿಲ್ಲ. ಇನ್ನು 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್​ ಸೂಕ್ತ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ ಯಾರು ಬೇಕಾದರೂ ಬೂಸ್ಟರ್ ಡೋಸ್ ತೆಗೆದುಕೊಳ್ಳುವ ಹಾಗಿಲ್ಲ. ಅದಕ್ಕೊಂದು ಷರತ್ತು ಇರುವುದು ಕೂಡ ಬಹಿರಂಗಗೊಂಡಿದೆ. ಬೂಸ್ಟರ್ ಡೋಸ್ ಪಡೆಯಲಿಚ್ಛಿಸುವ 60 ವರ್ಷ ಮೇಲ್ಪಟ್ಟವರು ಕೆಲವು ನಿಗದಿತ ರೋಗಗಳ ಪೈಕಿ ಕನಿಷ್ಠ 2ರಿಂದ 3 ರೋಗಗಳಿಂದ ಬಳಲುತ್ತಿರುವ ಅಂದರೆ ಕೊಮಾರ್ಬಿಡಿಟಿ ಇರುವ ಕುರಿತು ಪ್ರಮಾಣಪತ್ರ ಹೊಂದಿರಬೇಕು. ಅಂಥವರಿಗೆ ಮಾತ್ರ ಬೂಸ್ಟರ್ ಡೋಸ್ ಕೊಡಲಾಗುವುದು ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಡಾ.ಆರ್​.ಎಸ್​.ಶರ್ಮಾ ತಿಳಿಸಿದ್ದಾರೆ.

    ನೀನೇ ಸಾಕಿದ ಗಿಣಿ ನಿನ್ನ ಹದ್ದಾಗಿ ಕುಕ್ಕಿತಲ್ಲೋ..; ಆರ್​ಟಿಐ ಕಾರ್ಯಕರ್ತನನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಮಹಿಳಾ ಅಧಿಕಾರಿ!?

    ಗಂಡ-ಹೆಂಡತಿ ಜಗಳದ ದುರ್ಲಾಭ ಪಡೆಯಲು ಯತ್ನಿಸಿದ ಪೊಲೀಸ್​; ಇನ್​ಸ್ಪೆಕ್ಟರ್​-ಎಎಸ್​ಐ ವಿರುದ್ಧ ದಾಖಲಾಯಿತು ಎಫ್​​ಐಆರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts