More

    ವನ್ಯಜೀವಿಗಳ ವಸ್ತುಗಳಿದ್ದಲ್ಲಿ ಕೂಡಲೆ ಪ್ರಮಾಣಪತ್ರ ಪಡೆಯಿರಿ

    ಭದ್ರಾವತಿ: ಸಾರ್ವಜನಿಕರು ಹಾಗೂ ಸಂಘಸAಸ್ಥೆಗಳು ವನ್ಯಜೀವಿಗಳ ಚರ್ಮ, ಉಗುರು, ಕೂದಲು, ಗೊಂಬೆಗಳು ಹಾಗೂ ಟ್ರೋಫಿಗಳು ಸೇರಿದಂತೆ ಯಾವುದೇ ರೀತಿಯ ಪ್ರಾಣಿಗಳ ಅಂಗಾAಗಳನ್ನು ಮಾಲೀಕತ್ವದ ಪ್ರಮಾಣ ಪತ್ರವಿಲ್ಲದೆ ಇಟ್ಟುಕೊಂಡಿದ್ದಲ್ಲಿ ಕೂಡಲೆ ಸ್ಥಳೀಯ ವಲಯ ಅರಣ್ಯಾಽಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಽಕಾರಿಗಳು ಇಲ್ಲವೆ ಉಪ ಅರಣ್ಯ ಸಂರಕ್ಷಣಾಽಕಾರಿಗಳ ಕಚೇರಿಗೆ ತಲುಪಿಸುವಂತೆ ಉಪ ಅರಣ್ಯ ಸಂರಕ್ಷಣಾಽಕಾರಿ ಎಂ.ವಿ.ಆಶೀಷ್ ರೆಡ್ಡಿ ಮನವಿ ಮಾಡಿದರು.
    ಅಘೋಷಿತ ವನ್ಯಜೀವಿಗಳ ಅಂಗಾAಗಗಳನ್ನು ಮಾಲೀಕತ್ವದ ಪ್ರಮಾಣ ಪತ್ರವಿಲ್ಲದೆ ಇಟ್ಟುಕೊಳ್ಳುವಂತಿಲ್ಲ ಎಂದು ಸರ್ಕಾರದ ಆದೇಶವಿದೆ. ಆದರೆ ವನ್ಯಜೀವಿಗಳ ಅಂಗಾAಗಗಳನ್ನು ಬಳಸಿಕೊಂಡು ನಾಗರಿಕರು ರಿಂಗ್, ನೆಕ್ಲೇಸ್ ಇತರ ಆಭರಣಗಳನ್ನು ಮಾಡಿಸಿಕೊಂಡಿದ್ದಲ್ಲಿ ಇಲ್ಲವೆ ಅಲಂಕಾರಿಕ ವಸ್ತುಗಳಾಗಿ ಮನೆಯಲ್ಲಿ ಬಳಸುತ್ತಿದ್ದಲ್ಲಿ ಅದನ್ನು ಇಲಾಖೆಗೆ ಹಿಂದಿರುಗಿಸಲು 90 ದಿನಗಳ ಅಂದರೆ ಏ.10ರವರೆಗೂ ಗಡವು ನೀಡಲಾಗಿದೆ. ನಿಗದಿತ ದಿನಾಂಕದೊಳಗೆ ಇಲಾಖೆಗೆ ತಂದು ಒಪ್ಪಿಸಿದ್ದಲ್ಲಿ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸುವುದಿಲ್ಲ. ನಂತರ ಪತ್ತೆಯಾದಲ್ಲಿ 7 ವರ್ಷಗಳ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಽಸಲಾಗುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
    ಸಾರ್ವಜನಿಕರು ಮಾಹಿತಿ ಪಡೆದುಕೊಳ್ಳಲು ಅರಣ್ಯ ಇಲಾಖೆ ವೆಬ್‌ಸೈಟ್ ಗಮನಿಸಬಹುದಾಗಿದೆ. ಆ ವೆಬ್‌ಸೈಟಿನಲ್ಲಿ ನಿಮ್ಮಲ್ಲಿರುವ ವನ್ಯಜೀವಿಗಳ ಅಂಗಾAಗಗಳನ್ನು ಯಾವ ರೀತಿಯಲ್ಲಿ ಹಿಂದಿರುಗಿಸಬಹುದು ಎಂಬುದರ ಬಗ್ಗೆ ಸ್ಪಷ್ಟ÷ಮಾಹಿತಿ ಲಭ್ಯವಿದೆ. ವನ್ಯಜೀವಿಗಳ ವಸ್ತುಗಳನ್ನು ಹಿಂದಿರುಗಿಸಲು 1973ರಲ್ಲಿ ಮೊದಲ ಬಾರಿಗೆ ಅವಕಾಶ ನೀಡಲಾಗಿತ್ತು. 2003ರಲ್ಲಿ ಎರಡನೇ ಬಾರಿಗೆ ಅವಕಾಶ ನೀಡಿದ್ದು ಇದು ಮೂರನೇ ಹಾಗೂ ಕೊನೆಯ ಅವಕಾಶವಾಗಿದೆ. ಶಿಕ್ಷೆಗಳಿಂದ ಪಾರಾಗಲು ಈಗಲೇ ಹತ್ತಿರದ ಅರಣ್ಯ ಇಲಾಖೆಗಳ ಅಽಕಾರಿಗಳನ್ನು ಸಂಪರ್ಕಿಸುವAತೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಲ್ಲಿ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts