More

    ಚುನಾವಣೆ ಅಕ್ರಮ; ನಗದು ಸೇರಿ 430 ಕೋಟಿ ಮೌಲ್ಯದ ವಸ್ತು ವಶ

    ಬೆಂಗಳೂರು: ಲೋಕಸಭೆ ಚುನಾವಣೆ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿರುವ ಚುನಾವಣಾ ಆಯೋಗ ರಾಜ್ಯದಲ್ಲಿ ಈವರೆಗೆ ನಗದು ಸೇರಿ 430 ಕೋಟಿ ರೂ. ಮೌಲ್ಯದ ವಸ್ತು ವಶಕ್ಕೆ ಪಡೆದಿದೆ.

    ಸೋಮವಾರ 6.34 ಕೋಟಿ ರೂ. ಒಳಗೊಂಡಂತೆ ಈವರೆಗೆ ಒಟ್ಟು 85.09 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈವರೆಗೆ 177.59 ಕೋಟಿ ಬೆಲೆಯ ಮದ್ಯ, 11.29 ಕೋಟಿ ಬೆಲೆಯ ಡ್ರಗ್ಸ್, 73.80 ಕೋಟಿ ರೂ. ಮೌಲ್ಯದ ಚಿನ್ನ, 1.18 ಕೋಟಿ ರೂ. ಮೊತ್ತದ ಬೆಳ್ಳಿ, 1.22 ಕೋಟಿ ರೂ. ಮೊಬಲಗಿನ ವಜ್ರ, 8.14 ಕೋಟಿ ರೂ. ಮೊತ್ತದ ಉಚಿತ ಉಡುಗೊರೆ, 72.30 ಕೋಟಿ ಮೊತ್ತದ ಇತರೆ ವಸ್ತುಗಳನ್ನು ಜಾಗೃತ ತಂಡಗಳು ಮುಟ್ಟುಗೋಲು ಹಾಕಿಕೊಂಡಿವೆ.

    ನಗದು, ಮದ್ಯ, ಡ್ರಗ್ಸ್, ಚಿನ್ನ,ಬೆಳ್ಳಿ, ವಜ್ರ ಹಾಗೂ ಉಚಿತ ಉಡುಗೊರೆಗಳಿಗೆ ಸಂಬಂಧಿಸಿದಂತೆ ಈವರೆಗೆ 2049 ಕೇಸು ದಾಖಲಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts