More

    ಚುನಾವಣಾ ಅಕ್ರಮ; ನಗದು ಸೇರಿ 374.19 ಕೋಟಿ ಮೌಲ್ಯದ ವಸ್ತು ವಶ

    ಬೆಂಗಳೂರು: ಲೋಕಸಭೆ ಚುನಾವಣೆ ಅಕ್ರಮಗಳ ಮೇಲೆ ತೀವ್ರ ನಿಗಾ ಇಟ್ಟಿರುವ ಚುನಾವಣಾ ಆಯೋಗ ಈವರೆಗೆ 55.23 ಕೋಟಿ ರೂ. ನಗದು ಸೇರಿದಂತೆ ಒಟ್ಟು 374.19 ಕೋಟಿ ರೂ. ಮೊತ್ತದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದಿದೆ.

    ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿ ಯಾನೇಕಲ್‌ನಲ್ಲಿ ಸೋಮವಾರ 2.45 ಕೋಟಿ ರೂ. ನಗದು , ಧಾರವಾಡದಲ್ಲಿ 2.02 ಕೋಟಿ ರೂ. ಬೆಂಗಳೂಋಉ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 10 ಲಕ್ಷ ಮೌಲ್ಯದ ಡ್ರಗ್ಸ್, ಕಡೂರಿನಲ್ಲಿ 13.10 ಲಕ್ಷ ರೂ. ನಗದು, ಮಂಗಳೂರಿನಲ್ಲಿ 11.68 ಲಕ್ಷ ರೂ. ನಗದು, ಬ್ಯಾಡಗಿಯಲ್ಲಿ 75 ಲಕ್ಷ ರೂ., ಕಾಗವಾಡ ಚೆಕ್ ಪೋಸ್ಟ್ ನಲ್ಲಿ 16.05 ರೂ. ವಶಕ್ಕೆ ಪಡೆಯಲಾಗಿದೆ.

    ಅಬಕಾರಿ ಇಲಾಖೆ ಕಾರ್ಯಾಚರಣೆ:

    ಬೆಂಗಳೂರು ಮಾಗಡಿ ಮುಖ್ಯ ರಸ್ತೆಯಲ್ಲಿ 27.46 ಲಕ್ಷ ಮೌಲ್ಯದ ಮದ್ಯ, ಬೆಂಗಳೂರು ನಗರದ ವೈಟ್‌ಫೀಲ್ಡ್‌ನಲ್ಲಿ ಇನ್ ಲ್ಯಾಂಡ್ ಕಂಟೈನರ್ ಡಿಪೋದಲ್ಲಿ 29.33 ಲಕ್ಷ ಮೌಲ್ಯದ ಮದ್ಯ, ಕುಶಾಲನಗರ ತಾಲೂಕು ಸುಂದರ್ ನಗರ ಗ್ರಾಮದಲ್ಲಿ 53.15 ಲಕ್ಷ, ಚಿಕ್ಕಬಳ್ಳಾಪುರ ತಾಲೂಕು ಜಡಲತಿಮನಹಳ್ಳಿಯಲ್ಲಿ 44.04 ಲಕ್ಷ, ಬೆಂಗಳೂರು ನಗರ ಜಿಲ್ಲೆ ದೊಡ್ಡಕಮ್ಮನಹಳ್ಳಿಯಲ್ಲಿ 29.50 ಲಕ್ಷ, ಕೊಪ್ಪಳದಲ್ಲಿ 59 ಲಕ್ಷ. ಉಡುಪಿ ತಾಲೂಕು ಮಣಿಪಾಲದಲ್ಲಿ 46.39 ಲಕ್ಷ, ಬೆಂಗಳೂರು ನಗರ ಜಿಲ್ಲೆ ಬಾಗಲಗುಂಟೆಯಲ್ಲಿ 27.43 ಲಕ್ಷ, ಬೆಂಗಳೂರು ನಗರ ಜಿಲ್ಲೆ ಬಾಗಲಗುಂಟೆಯಲ್ಲಿ 49.88 ಲಕ್ಷ, ಬೆಂಗಳೂರು ನಗರದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 49.88 ಲಕ್ಷ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

    ಯಾವುದು? ಎಷ್ಟು ಎಷ್ಟು?

    170.58 ಕೋಟಿ ಮೌಲ್ಯದ ಮದ್ಯ, 10.39 ಕೋಟಿ ಬೆಲೆಯ ಡ್ರಗ್ಸ್, 56.86 ಕೋಟಿ ಮೌಲ್ಯದ ಚಿನ್ನ, 1.13 ಕೋಟಿ ಬೆಲೆಯ ಬೆಳ್ಳಿ, 7.78 ಕೋಟಿ ಬೆಲೆಯ ಉಚಿತ ಉಡುಗೊರೆ, 72.13 ಕೋಟಿ ಮೌಲ್ಯದ ಇತರೆ ವಸ್ತುಗಳನ್ನು ಜ್ತು ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts