More

    ಗ್ಯಾಂಗ್​ ಲೀಡರ್​ ಆದ ವಿನಯ್​ ರಾಜಕುಮಾರ್​; ‘ಪೆಪೆ’ ಮುಕ್ತಾಯ

    ಬೆಂಗಳೂರು: ವಿನಯ್​ ರಾಜಕುಮಾರ್​ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ನಾಲ್ಕು ವರ್ಷಗಳೇ ಆಗಿವೆ. 2018ರಲ್ಲಿ ಬಿಡುಗಡೆಯಾದ ‘ಅನಂತು v/s ನುಸ್ರುತ್’ ಚಿತ್ರವೇ ಕೊನೆ. ಆ ನಂತರ ವಿನಯ್​, ‘ಗ್ರಾಮಾಯಣ’, ‘ಅದೊಂದಿತ್ತು ಕಾಲ’ ಮತ್ತು ‘ಪೆಪೆ’ ಎಂಬ ಚಿತ್ರಗಳಲ್ಲಿ ನಟಿಸಿದ್ದಾರಾದರೂ, ಆ ಯಾವುದೇ ಚಿತ್ರಗಳು ಬಿಡುಗಡೆಯಾಗಿಲ್ಲ.

    ಇದನ್ನೂ ಓದಿ: ‘ಸಿರಿ ಲಂಬೋದರ ವಿವಾಹ’ಕ್ಕೆ ರಮೇಶ್ ಅರವಿಂದ್ ಸಾಥ್​; ದುಬೈನಲ್ಲಿ ಚಿತ್ರದ ಪ್ರೀಮಿಯರ್​

    ಗ್ಯಾಂಗ್​ ಲೀಡರ್​ ಆದ ವಿನಯ್​ ರಾಜಕುಮಾರ್​; 'ಪೆಪೆ' ಮುಕ್ತಾಯಇದೀಗ ‘ಪೆಪೆ’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಚಿತ್ರತಂಡ ಕುಂಬಳಕಾಯಿ ಒಡೆದಿದೆ. ಶ್ರೀಲೇಶ್ ಎಸ್ ನಾಯರ್ ನಿರ್ದೇಶನಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಕ್ಲೈಮ್ಯಾಕ್ಸ್​ ಚಿತ್ರೀಕರಣ ಇತ್ತೀಚೆಗೆ ಸಕಲೇಶಪುರದಲ್ಲಿ ಮುಕ್ತಾಯವಾಗಿದ್ದು, ಸಾಹಸ ನಿರ್ದೇಶಕ ರವಿವರ್ಮಾ ಸಂಯೋಜಿಸಿರುವ ಕ್ಲೈಮ್ಯಾಕ್ಸ್​ ಫೈಟ್​ ಮೂಲಕ ಚಿತ್ರೀಕರಣ ಮುಕ್ತಾಯವಾಗಿದೆ.

    ಇದೊಂದು ಆಕ್ಷನ್​ ಥ್ರಿಲ್ಲರ್​ ಚಿತ್ರವಾಗಿದ್ದು, ಈ ಚಿತ್ರದಲ್ಲಿ ವಿನಯ್​ ಮೊದಲ ಬಾರಿಗೆ ಗ್ಯಾಂಗ್​ಲೀಡರ್​ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಹೊಡೆದಾಟ, ರಕ್ತಪಾತವಿದ್ದು, ಟೀಸರ್​ ಮತ್ತು ಪೋಸ್ಟರ್​ಗಳಲ್ಲಿ ವಿನಯ್​ ಕಂಡು ದೊಡ್ಮನೆ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ.

    ‘ಪೆಪೆ’ ಚಿತ್ರದಲ್ಲಿ ಮೆದಿನಿ ಕೆಳಮನಿ, ಯಶ್ ಶೆಟ್ಟಿ, ಕಾಜಲ್ ಕುಂದರ್, ಅರುಣಾ ಬಾಲರಾಜ್, ನವೀನ್ ಡಿ ಪಡಿಲ್, ಬಾಲಾ ರಾಜ್ವಾಡಿ ಮುಂತಾದವರು ನಟಿಸಿದ್ದು, ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಮತ್ತು ಪೂರ್ಣಚಂದ್ರ ತೇಜಸ್ವಿ ಸಂಗೀತವಿದೆ.

    ಇದನ್ನೂ ಓದಿ: ಗರ್ಲ್​​ಫ್ರೆಂಡ್​ ಜತೆಗೆ ಹೊಸ ಮನೆಗೆ ಶಿಫ್ಟ್​ ಆಗುತ್ತಾರಾ ಹೃತಿಕ್​ ರೋಶನ್​?

    ಕೊಡಗು, ಸಕಲೇಶಪುರ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿರುವ ‘ಪೆಪೆ’ ಚಿತ್ರವನ್ನು ಉದಯ್ ಮತ್ತು ಶ್ರೀರಾಮ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

    ಅಪ್ಪನ ವಯಸ್ಸಿನ ನಟನ ಜತೆಗೆ ಸೋನಾಕ್ಷಿ ಸಿನ್ಹಾ ನಟನೆ? ಆ ಹೀರೋ ಯಾರು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts