More

    ಸರ್ಕಾರ ಮತ್ತು ಜನರ ನಿರ್ಲಕ್ಷ್ಯವೇ ಇಂದಿನ ಆರೋಗ್ಯ ಬಿಕ್ಕಟ್ಟಿಗೆ ಕಾರಣ: ಮೋಹನ್​ ಭಾಗವತ್​

    ನವದೆಹಲಿ: ಮೊದಲನೇ ಕರೊನಾ ವೈರಸ್​ ಅಲೆಯ ಬಳಿಕ ಜನರು ಮತ್ತು ಸರ್ಕಾರ ನಿರ್ಲಕ್ಷ್ಯ ವಹಿಸಿದ್ದೇ ಭಾರತದ ಇಂದಿನ ಬಿಕ್ಕಟ್ಟಿಗೆ ಕಾರಣ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್​ ಭಾಗವತ್​ ತಿಳಿಸಿದರು.

    ವೈದ್ಯರ ಎಚ್ಚರಿಕೆಯ ನಡುವೆಯೂ ಮೊದಲನೇ ಅಲೆಯ ತೀವ್ರತೆಯಿಂದ ಎಚ್ಚೆತ್ತುಕೊಳ್ಳದೇ ನಮ್ಮ ರಕ್ಷಣಾ ಕ್ರಮಗಳನ್ನು ಕೈಚೆಲ್ಲಿ ಕುಳಿತ್ತಿದ್ದರಿಂದ ಇಂದಿನ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಲ್ಲಿ ಸರ್ಕಾರ, ಆಡಳಿತ ಅಥವಾ ಸಾರ್ವಜನಿಕರು ಸೇರಿದಂತೆ ಪ್ರತಿಯೊಬ್ಬರ ನಿರ್ಲಕ್ಷ್ಯವು ಇದೆ ಎಂದು ಭಾಗವತ್​ ಹೇಳಿದರು.

    ಮೂರನೇ ಅಲೆ ಬರಲಿದೆ ಎಂದು ಎಚ್ಚರಿಸುತ್ತಿದ್ದಾರೆ. ಆದ್ದರಿಂದ ನಾವು ಅದರ ಬಗ್ಗೆ ಭಯಪಡಬೇಕೇ? ಅಥವಾ ವೈರಸ್ ವಿರುದ್ಧ ಹೋರಾಡಲು ಮತ್ತು ಗೆಲ್ಲಲು ಸರಿಯಾದ ಮನೋಭಾವ ಹೊಂದಬೇಕೆ? ಎಂದು ಪ್ರಶ್ನಿಸಿದ ಅವರು ಇಂತಹ ಸಂದರ್ಭದಲ್ಲಿ ಜನರಲ್ಲಿ ಕೋವಿಡ್​ ವಿರುದ್ಧ ಹೋರಾಡಲು ಆತ್ಮವಿಶ್ವಾಸ ಮತ್ತು ಧನಾತ್ಮಕತೆಯನ್ನು ತುಂಬಬೇಕು ಎಂದು ಸಲಹೆ ನೀಡಿದರು.

    ಪ್ರಸ್ತುತ ಎದುರಾಗಿರುವ ಕಠಿಣ ಪರಿಸ್ಥಿತಿಯನ್ನು ಮರೆಯದೇ ಒಂದು ಪಾಠವಾಗಿ ಪರಿಗಣಿಸಿ ಭವಿಷ್ಯದಲ್ಲಿ ಬರುವ ತೊಂದರೆಯನ್ನು ನಿವಾರಿಸುವತ್ತ ಸರ್ಕಾರ ಗಮನಹರಿಸಬೇಕು. ಇಂದಿನ ನಮ್ಮ ತಪ್ಪುಗಳನ್ನು ತಿದ್ದುಕೊಂಡು ಸಂಭವನೀಯ ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಬೇಕೆಂದು ಜನರಿಗೆ ಕರೆ ನೀಡಿದರು.

    ಜೀವನ ಮತ್ತು ಸಾವಿನ ಚಕ್ರ ಹೀಗೆ ಮುಂದುವರಿಯಲಿದೆ. ಇದು ನಮ್ಮನ್ನು ಭಯಗೊಳಿಸಲಾಗದು. ಈ ಸಂದರ್ಭಗಳೇ ನಮಗೆ ಭವಿಷ್ಯಕ್ಕಾಗಿ ತರಬೇತಿ ನೀಡುತ್ತವೆ. ಯಶಸ್ಸು ಅಂತಿಮವಲ್ಲ. ವೈಫಲ್ಯ ಮಾರಕವಲ್ಲ. ಪರಿಸ್ಥಿತಿಯೊಂದಿಗೆ ಮುಂದುವರಿಯುವ ಧೈರ್ಯ ಮಾತ್ರ ನಮಗೆ ಮುಖ್ಯವಾಗಿದೆ ಎನ್ನುತ್ತಾ ಜನರಲ್ಲಿ ಆತ್ಮಸ್ಥೈರ್ಯ ತುಂಬಿದರು. (ಏಜೆನ್ಸೀಸ್​)

    ಈ ರಾಶಿಯವರು ವಿಷಯ ಚಿಂತನೆ ಬಿಟ್ಟು ಹರಿಚಿಂತನೆ ಮಾಡಿ: ವಾರ ಭವಿಷ್ಯ

    ವೇದಾ ಕೃಷ್ಣಮೂರ್ತಿ ಕಡೆಗಣನೆಗೆ ಲೀಸಾ ಆಕ್ಷೇಪ

    ಒಂದೇ ಮನೆಯ ನಾಲ್ವರು ಕರೊನಾಗೆ ಬಲಿ; 2- 3 ದಿನಗಳ ಅಂತರದಲ್ಲಿ ಇಬ್ಬಿಬ್ಬರ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts