More

    ವೇದಾ ಕೃಷ್ಣಮೂರ್ತಿ ಕಡೆಗಣನೆಗೆ ಲೀಸಾ ಆಕ್ಷೇಪ

    ನವದೆಹಲಿ: ಕರ್ನಾಟಕದ ಆಲ್ರೌಂಡರ್ ವೇದಾ ಕೃಷ್ಣಮೂರ್ತಿ ಅವರನ್ನು ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಪರಿಗಣಿಸದ ಬಗ್ಗೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕಿ ಲೀಸಾ ಸ್ಥಳೇಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ವೇದಾ ಕೃಷ್ಣಮೂರ್ತಿ ಅವರ ತಾಯಿ ಹಾಗೂ ಸಹೋದರಿ ಕೇವಲ ಎರಡು ವಾರಗಳ ಅಂತರದಲ್ಲಿ ಕೋವಿಡ್-19ನಿಂದ ಮೃತಪಟ್ಟಿದ್ದರು. ಇಂಗ್ಲೆಂಡ್ ಪ್ರವಾಸಕ್ಕೆ ವೇದಾ ಅವರನ್ನು ಪರಿಗಣಿಸದಿರುವ ಬಗ್ಗೆ ಬಿಸಿಸಿಐ ಮೊದಲೇ ಅವರಿಗೆ ತಿಳಿಸಿದಂತಿಲ್ಲ. ಮೊದಲೇ ನೋವಿನಲ್ಲಿರುವ ಆಟಗಾರ್ತಿಯನ್ನು ಸಂಪರ್ಕಿಸಿ ಇಂಗ್ಲೆಂಡ್ ಪ್ರವಾಸದಿಂದ ಕೈಬಿಡುತ್ತಿರುವ ಬಗ್ಗೆ ಮಾಹಿತಿ ನೀಡಬೇಕಿತ್ತು ಎಂದು ಲೀಸಾ ಸ್ಥಳೇಕರ್ ಹೇಳಿದ್ದಾರೆ. ಇಂಥ ಸಂದರ್ಭದಲ್ಲಿ ಬಿಸಿಸಿಐ ನಡೆದುಕೊಂಡ ರೀತಿ ಸರಿಯಾಗಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಸಿಟ್ಟಾದ ಟೆನಿಸ್ ತಾರೆ ಜೋಕೊವಿಕ್ ಕೋರ್ಟ್‌ನಲ್ಲಿ ಮಾಡಿದ್ದೇನು ಗೊತ್ತೇ?

    ಪ್ರವಾಸದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಏಕೈಕ ಟೆಸ್ಟ್, ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಚಿಕ್ಕಮಗಳೂರಿನ ಕಡೂರಿನ ವೇದಾ ಕೃಷ್ಣಮೂರ್ತಿ ತಮ್ಮ ಕುಟುಂಬಕ್ಕೆ ಕೋವಿಡ್ ಆಘಾತ ನೀಡಿದ್ದರೂ ಸಾಮಾಜಿಕ ಜಾಲತಾಣಗಳ ಮೂಲಕ ಇತರಿಗೆ ನೆರವು ನೀಡಬೇಕೆಂದು ಸಮಾಜ ಮುಖಿ ಕೆಲಸದಲ್ಲಿ ತೊಡಗಿದ್ದಾರೆ. ವೇದಾ ಕೃಷ್ಣಮೂರ್ತಿ 48 ಏಕದಿನ ಹಾಗೂ 76 ಟಿ20 ಪಂದ್ಯಗಳನ್ನಾಡಿದ್ದಾರೆ. ಲೀಸಾ, ಅಂತಾರಾಷ್ಟ್ರೀಯ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಸಾವಿರ ರನ್, 100 ವಿಕೆಟ್ ಕಬಳಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ.

    ಕುಸ್ತಿಪಟು ಸುಶೀಲ್ ಕುಮಾರ್ ವಿರುದ್ಧ ಜಾಮೀನುರಹಿತ ವಾರೆಂಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts