More

    ಈ ರಾಶಿಯವರು ವಿಷಯ ಚಿಂತನೆ ಬಿಟ್ಟು ಹರಿಚಿಂತನೆ ಮಾಡಿ: ವಾರ ಭವಿಷ್ಯ

    ಮೇಷ

    ಈ ಸಂವತ್ಸರದ ನಾಯಕತ್ವವು ಸುಬ್ರಹ್ಮಣ್ಯ(ಕುಜ) ದೇವರ ಕೈಯಲ್ಲಿ ಇದ್ದರೂ ದ್ವಾದಶ ಮಾಸಗಳನ್ನು ಆಳುವವನು ಮಹಾವಿಷ್ಣುವೇ. ಷಣ್ಮುಖನನ್ನು, ನಾರಾಯಣನನ್ನು ಪ್ರಾರ್ಥಿಸಿದಲ್ಲಿ ಎಲ್ಲವನ್ನೂ ಗಳಿಸಬಹುದು. ಚೈತ್ರದಲ್ಲಿ ಕೃಷ್ಣ ಸ್ವರೂಪವಿದ್ದರೆ, ವೈಶಾಖ ಮಾಸದಲ್ಲಿ ಅನಂತೋ ಜನಾರ್ದನ. 11ರ ಗುರು ನಿಮಗೆ ಎಲ್ಲವನ್ನೂ ಕೊಟ್ಟು ನೋಡುತ್ತಾನೆ. ಮುಂದೆ ಸಾಗಿ ಸಂಕಲ್ಪ ಈಡೇರಿಸಿಕೊಳ್ಳಿ.

    ವೃಷಭ

    ರವಿಯು ವೃಷಭ ರಾಶಿಯಲ್ಲಿದ್ದು , ಶುಕ್ರನು ಸ್ವಕ್ಷೇತ್ರದಲ್ಲಿದ್ದು ಮೇ 26ಕ್ಕೆ ಬುಧನು ಬಂದು ಸೇರುತ್ತಾನೆ. ಅಲ್ಲೇ ರಾಹುವೂ ಇದ್ದು ಎಲ್ಲವೂ ವಿಶ್ವವನ್ನೇ ನೋಡುತ್ತಿವೆೆ. ನೀವು ಏನೂ ಮಾಡಲಾಗುವುದಿಲ್ಲ. ಬೇಕು ಎಂಬ ಶಬ್ದಕ್ಕೆ ಅಳತೆಯಿಲ್ಲ. ಪುಣ್ಯವು ಲಯವಾಗುವುದು. ಪಾಪವು ಬಂದು ಸೇರುವುದೂ ಗೊತ್ತಾಗುವುದಿಲ್ಲ. ಅನಂತ ಪದ್ಮನಾಭನನ್ನು ಪೂಜಿಸಿ.

    ಮಿಥುನ

    ಮೇ 26ಕ್ಕೆ ಬುಧನು ಸ್ವಕ್ಷೇತ್ರಕ್ಕೆ ಬಂದು ಕುಜನ ವೈರತ್ವವನ್ನು ಸಹಿಸಿಕೊಳ್ಳಬೇಕಾಗುತ್ತದೆ. 9ರ ಗುರು ಇರುವುದರಿಂದ ಮನುಷ್ಯ ಪ್ರಯತ್ನದಲ್ಲಿ ಎಲ್ಲವೂ ನಡೆಯುವುದಿಲ್ಲ. ದೈವ ಸಹಾಯ ಬೇಕು. ಆರೋಗ್ಯದ ಬಗ್ಗೆ ಎಚ್ಚರವಿರಲಿ- ಅಷ್ಟಮ ಶನಿ ಕಾರ್ಯಜಯ ಕೊಡುವುದಿಲ್ಲ. ಆದ ಕೆಲಸಕ್ಕೆ ತೃಪ್ತಿಯಿಂದಿದ್ದು, ಅನಂತವಾಗಿ ನಾರಾಯಣನನ್ನು ಭಜಿಸಿ. ಕೃಷ್ಣಾಷ್ಟೋತ್ತರ ಪಠಿಸಿ.

    ಕಟಕ

    7,8,11ನೇ ಮನೆಯಲ್ಲಿ ಗ್ರಹಗಳ ಅನುಕೂಲವಿರುವುದಿಲ್ಲ. ಆದರೆ ರವಿಯು ತಾಪವನ್ನು ತಂದೊಡ್ಡುತ್ತಾನೆ. ವಿಷಯ ಚಿಂತನೆ ಬಿಟ್ಟು ಹರಿಚಿಂತನೆಯನ್ನು ಮಾಡಿ. ಉಮಾಮಹೇಶ್ವರನ ಸ್ತೋತ್ರ ನಿತ್ಯವೂ ಪಠಿಸಿ. ಅವನೇ ದಾರಿ ತೋರಿ ಸೌಖ್ಯದಿಂದಿಡುತ್ತಾನೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. 16,17,18 ಶುಭಫಲ ದೊರೆಯುತ್ತದೆ.

    ಸಿಂಹ

    ಸಿಂಹ ರಾಶಿಯ ಸೂರ್ಯನು 10ರಲ್ಲಿ ಬಂಧು ಶುಕ್ರ-ರಾಹುವಿನ ಸಂಪರ್ಕ ಇರುವುದು ಶುಭಾಶುಭಗಳನ್ನು ಸೂಚಿಸುತ್ತದೆ. ಏಕಾದಶದಲ್ಲಿ ಬುಧನಿದ್ದಾನೆ. ವ್ಯಾಪಾರ ವಹಿವಾಟು ತೃಪ್ತಿಕರವಾಗಿ ಸಾಗಿ, ಗ್ರಹಗಳು ಒಳ್ಳೆಯ ಸ್ಥಾನದಲ್ಲಿದ್ದರೂ ಫಲವನ್ನು ನೀಡುವುದಿಲ್ಲ. ನಿಮಗೂ ನಿಮ್ಮ ಬಂಧು- ಬಾಂಧವರಿಗೂ, ಲೋಕಕ್ಕೂ ಪ್ರಾರ್ಥನೆ ಇರಲಿ. ಸೂರ್ಯನಾರಾಯಣ ಅಷ್ಟೋತ್ತರ ಪಠಿಸಿ.

    ಕನ್ಯಾ

    ಪಂಚಮದಲ್ಲಿ ಶನಿ, 6ರ ಗುರು ಇದ್ದಲ್ಲೇ ಇದ್ದು, ಯಾವ ವಿಶೇಷ ಬದಲಾವಣೆಯನ್ನು ತರಲಾರದು. ಅಂದರೆ ನಿಮ್ಮ ದೈವಸೂಚನೆ ಇದ್ದುದ್ದಕ್ಕೆ ತೃಪ್ತಿ ಇಟ್ಟುಕೊಂಡು ನಿರಂತರ ದೈವಭಕ್ತಿಯಲ್ಲಿ ಮುನ್ನಡೆಯಿರಿ ಎಂಬ ಎಚ್ಚರಿಕೆಯ ಕಾಲವಿದು. ಶನಿಪಿಪ್ಪಲಾ ಸ್ತೋತ್ರ ಪಠಿಸಿ. ದತ್ತನನ್ನು ಪ್ರಾರ್ಥಿಸಿ. 20,21,22 ರಂದು ನೆನಸಿದ ಕಾರ್ಯಗಳು ನಡೆಯುತ್ತವೆೆ.

    ತುಲಾ

    ಶ್ರೀಂ ಸೇತುಭೂಪಾಲ ಸಂಹಾರ ಪ್ರವೀಣೇ ಚಂದ್ರಲಾಂಬಿಕೇ| ನಮಸ್ತುಭ್ಯಂ ಶಿವೇ ಶಾಂತೇ

    ತ್ವಯ ಭಕ್ತಿಂ ಪ್ರಯಚ್ಛನ ||

    ಶುಕ್ರನು ಸ್ವಕ್ಷೇತ್ರದಲ್ಲಿದ್ದು, ರಾಹುವು ಅಲ್ಲೇ ಇರುವುದರಿಂದ ಚಂದ್ರಲಾಂಬಾದೇವಿಯೇ ಈ ವಾರ ನಿಮ್ಮನ್ನು ಕಾಪಾಡುತ್ತಾಳೆ. ದೇವಿಯನ್ನು ಭಜಿಸಿ. ಕಾರ್ಯ ಸಾಧಿಸಿ. ವಿನಾಕಾರಣ ಒತ್ತಡ ಬಂದರೂ ಅದರ ಹಿಂದೆ ಉದ್ದೇಶವಿರುತ್ತದೆ. ಸರ್ವತೋಮುಖ ಬೆಳವಣಿಗೆಗೆ ಪಂಚಮ ಗುರುವಿದ್ದಾನೆ.

    ವೃಶ್ಚಿಕ

    ರಾಶಿಯಲ್ಲಿ ಕೇತುವಿರುವುದರಿಂದ ಧನಸಂಕಟ ಪ್ರಾಣಕಂಟಕ ಎರಡೂ ಒಂದೇ. ನಮಗೆ ದಾರಿತೋರುವವನು ಭಗವಂತನೇ. ನಿಮ್ಮ ಧನಸಂಕಟಕ್ಕೆ ‘ಕುಬೇರ ತ್ವಂ ಧನಾಧೀಶ ಗೃಹೇ ತೇ ಕಮಲಾ ಸ್ಥಿತಾ| ತಾಂ ದೇವೀಂ ಪ್ರೇಷಯಾಶು ತ್ವಂ ಮದ್ ಗೃಹೇತೇ ನಮೋ ನಮಃ|| ಕುಂ ಕುಬೇರಾಯ ನಮಃ||’ ಎಂದು ಪ್ರಾರ್ಥಿಸಿ. ಪ್ರಾಣಕಂಟಕಕ್ಕೆ ಗಣಪತಿಯನ್ನು ನಿತ್ಯ ಪೂಜಿಸಿ. 16,17,18, 22ರಂದು ನಿಮಗೆ ಶುಭ.

    ಧನು

    ರಾಶ್ಯಾಧಿಪತಿ ಗುರುವು ತೃತೀಯದಲ್ಲಿರುವುದರಿಂದ ಗುರುವಿನ ಕರುಣೆ ಇದೆೆ. ಕಷ್ಟನಷ್ಟಗಳನ್ನು ಸರಿದೂಗಿಸಲು ದೈವವು ಬೇಕು. ಯಾವ ಮನುಷ್ಯನು ತನ್ನ ಮನಸ್ಸಿನ ಯೋಚನಾ ಲಹರಿ ಕಟ್ಟಿಹಾಕಿ ದೈವವನ್ನು ನಂಬಿ ಸಾಗುತ್ತಾನೋ, ಅವನೇ ನಾಯಕನಾಗುತ್ತಾನೆ. ಗಣಪತಿಯನ್ನು ಪ್ರಾರ್ಥಿಸಿ. ಗುರುಚರಿತ್ರೆಯ ಸಾರವನ್ನು ತೆಗೆದು ಇನ್ನೊಬ್ಬರಿಗೂ ಗುರುಕೃಪೆ ಬರುವಂತೆ ಉಪದೇಶ ಮಾಡಿ.

    ಮಕರ

    ಮಕರ ರಾಶಿಗೆ ಶನಿಯು ಅಲ್ಲೇ ಇದ್ದು, ಮುಖದ ಕಾಂತಿಯನ್ನು ಬಾಡಿಸಿದರೂ, ದ್ವಿತೀಯ ಗುರುವು ಅಲ್ಪಸ್ವಲ್ಪ ಚೈತನ್ಯ ತುಂಬುತ್ತಾನೆ. ಜನ್ಮ ಶನಿಯ ಸಾಗುವಿಕೆಯಲ್ಲಿ ಎಲ್ಲ ಕಷ್ಟಗಳು ದೂರವಾಗುವುದಿಲ್ಲ. ವಿಷ್ಣು ಸಹಸ್ರನಾಮ, ಶನಿ ಅಷ್ಟೋತ್ತರವನ್ನು ಪಠಿಸಿ ಸಂತಸ-ಸುಖಕ್ಕೂ ದಾರಿಯಾಗುತ್ತದೆ.

    ಕುಂಭ

    ಜನ್ಮದಲ್ಲಿ ಗುರುಬಂಧು ನಿಮ್ಮ ಕಿಲುಬನ್ನುತೆಗೆಯುತ್ತಿದ್ದಾನೆ. ಮಾಡಿದ ಪಾಪಗಳು ಬಂಡೆಯಾಗಿ ನಿಂತಿದೆ. ಅದರೊಂದಿಗೆ ದ್ವಾದಶ ಶನಿಯ ಸಂಚಾರ. ಸಂಕಟ ಬಂದಾಗ ಬೆಳಕು ಬರಬೇಕಾದರೆ ಪರಿಪರಿಯಾದ ದೇವತಾ ಪ್ರಾರ್ಥನೆಯೇ ನಿಮ್ಮ ಮೂಲ ಧ್ಯೇಯವಾಗಬೇಕು. ಲಲಿತಾ ಸಹಸ್ರನಾಮ ಪಾರಾಯಣ ಮಾಡಿ. ಮನಸ್ಸು ಶಾಂತವಾಗಿರುತ್ತದೆ.

    ಮೀನ

    ದ್ವಾದಶ ಗುರು. ಏಕಾದಶ ಶನಿ. ಶನಿಯು ಉತ್ಸಾಹ ಧೈರ್ಯ ಕೊಡುವುದರಲ್ಲಿ ನಿರತನಾದರೆ. 12ರ ಗುರುವು ಅದರ ನಿರ್ವಹಣೆಗೆ ಬಿಡುವುದಿಲ್ಲ. ಶುಭಫಲಕ್ಕೆ ಗುರುವಿನ ಕರುಣೆ ಬೇಕು. ಕುಲದೇವರನ್ನು ಪ್ರಾರ್ಥಿಸಿ. ಗುರು ಎಂದರೆ ಜನ್ಮ ಕೊಟ್ಟ ತಂದೆ-ತಾಯಿಗಳೇ. ಅವರ ಆಶೀರ್ವಾದ ಪಡೆದು ಮುಂದೆ ಸಾಗಿರಿ. ಬೃಹಸ್ಪತಿ ಅಷ್ಟೋತ್ತರವನ್ನೂ ಪಠಿಸಿ. ಭಗವದ್ಗೀತೆಯ 11ನೇ ಅಧ್ಯಾಯ ಪಾರಾಯಣ ಮಾಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts