More

    ದೇವಸ್ಥಾನ ಮುಚ್ಚಿದ್ದರೂ ಕೇಳದ ಜನ! ಕರೊನಾ ಕೊಲ್ಲುತ್ತಿದ್ದರೂ ಕಾಲಜ್ಞಾನ ಮರೆಯದ ಭಕ್ತರು

    ವಿಜಯಪುರ: ಕರೊನಾ ನಾಡಿನಾದ್ಯಂತ ಹಬ್ಬುತ್ತಿದೆ. ಪ್ರತಿದಿನ ನೂರಾರು ಜನರು ಸೋಂಕಿಗೆ ಬಲಿಯಾಗುತ್ತಿದ್ದಾರೆ. ಹೀಗಿರುವಾಗಲೂ ಜನರು ಕಾಲಜ್ಞಾನ ಕೇಳಲು ಗುಂಪು ಗುಂಪಾಗಿ ಬಂದಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಸದಾಶಿವ ಅಜ್ಜನ ದೇವಸ್ಥಾನದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಕಾಲಜ್ಞಾನವನ್ನು ಕೇಳಲು ವಿವಿಧ ಹಳ್ಳಿಗಳ ಜನರು ಗುಂಪು ಗುಂಪಾಗಿ ಬಂದಿದ್ದಾರೆ. “ಈವರೆಗೂ ಕಾಲಜ್ಞಾನದ ಪ್ರಕಾರವೇ ಪ್ರಪಂಚದಲ್ಲಿ ನಡೆಯಿತ್ತಿದೆ. ಹೀಗಾಗಿ ಕರೊನಾ ತಡೆಯವ ಶಕ್ತಿಯೂ ಸದಾಶಿವ ಅಜ್ಜನಿಗೆ ಇದೆ” ಎಂದು ಜನರು ಹೇಳುತ್ತಿದ್ದಾರೆ.

    ಪ್ರತಿ ಸೋಮವಾರ ಈ ದೇವಸ್ಥಾನಕ್ಕೆ ಸುತ್ತಮುತ್ತಲಿನ ಹಳ್ಳಿಯ ಜನರು ಕಾಲ್ನಡಿಗೆಯಲ್ಲಿ ಬರುತ್ತಿದ್ದಾರೆ. ದೇವಸ್ಥಾನದ ಬಳಿಯೇ ಅಂಬಲಿ ಮಾಡಿ ಸವಿಯುತ್ತಿದ್ದಾರೆ. ಲಾಕ್​ಡೌನ್​ನಿಂದಾಗಿ ದೇವಸ್ಥಾನದ ತೆರೆದಿಲ್ಲವಾದರೂ ದೇವಸ್ಥಾನದ ಹೊಸ್ತಿಲಿಗೇ ಜನ ಪೂಜೆ ಮಾಡಿ ತೆರಳುತ್ತಿದ್ದಾರೆ. ಈ ಬಗ್ಗೆ ಈವರೆಗೆ ಯಾವುದೇ ಅಧಿಕಾರಿಗಳೂ ಕ್ರಮ ತೆಗೆದುಕೊಂಡಿಲ್ಲ ಎನ್ನಲಾಗಿದೆ.

    ಅಡ್ಡಾದಿಡ್ಡಿ ಓಡಾಡಿದವರನ್ನ ಎಳೆದೊಯ್ದು ಕರೊನಾ ಟೆಸ್ಟ್ ಮಾಡಲು ಪ್ರಯತ್ನಿಸಿದ ಬಿಬಿಎಂಪಿ ಅಧಿಕಾರಿಗಳು! ಇದೆಂಥಾ ನ್ಯಾಯವೆಂದು ನೆಟ್ಟಿಗರ ಪ್ರಶ್ನೆ

    ಕಾರು ಮಾರೋಕೆ ಫೋಟೋ ಹಾಕುವಾಗ ಗುಪ್ತಾಂಗದ್ದೂ ಫೋಟೋ ಹಾಕಿಬಿಟ್ಟ! ಮಾರಾಟ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts