More

    ಹಾರುವ ತಟ್ಟೆಗಳ ತನಿಖೆಗೆ ಪೆಂಟಗನ್ ಕ್ರಮ: ಚೀನಾ ಬೇಹುಗಾರಿಕೆ ಕುರಿತು ಅನುಮಾನ

    ವಾಷಿಂಗ್ಟನ್: ‘ಹಾರುವ ತಟ್ಟೆಗಳು’ ಎಂದೇ ಜನಜನಿತವಾಗಿರುವ ಅಪರಿಚಿತ ಹಾರುವ ವಸ್ತುಗಳ (ಯುಎಫ್​ಒ) ನಿಗಾ ಮತ್ತು ಈ ಕುರಿತ ತನಿಖೆಗೆ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್, ನೌಕಾ ಪಡೆಯ ಸುಪರ್ದಿಯಲ್ಲಿ ಹೊಸ ಕಾರ್ಯ ಪಡೆಯನ್ನು ರಚಿಸಿದೆ. ಯುಎಫ್​ಒಗಳು ಚೀನಾದ ಪತ್ತೇದಾರಿಕೆ ಕಾಯಗಳಿರಬಹುದೆಂಬ ಅನುಮಾನ ಅಮೆರಿಕವನ್ನು ಕಾಡುತ್ತಿದೆ.

    ಯುಎಪಿಟಿಎಫ್ ಹೆಸರಿನ ಈ ಕಾರ್ಯ ಪಡೆ, ಹಾರುವ ತಟ್ಟೆಗಳ ಕುರಿತ ಅರಿವನ್ನು ಸುಧಾರಿಸಲು ಮತ್ತು ಅವುಗಳ ಮೂಲ ತಿಳಿದುಕೊಳ್ಳಲು ನೆರವಾಗಲಿದೆ ಎಂದು ಪೆಂಟಗನ್ ವಕ್ತಾರೆ ಸುಸಾನ್ ಗೌಫ್ ಶುಕ್ರವಾರ ತಿಳಿಸಿದ್ದಾರೆ.

    ಇದನ್ನೂ ಓದಿ: ಹಿಂದು ಉತ್ತರಾಧಿಕಾರ ಕಾಯ್ದೆ ಪೂರ್ವಾನ್ವಯವಾಗುತ್ತೆ; ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಸಮಾನ ಅಧಿಕಾರ; ಸುಪ್ರೀಂ ಕೋರ್ಟ್​ ತೀರ್ಪು 

    ಸಣ್ಣ ಪರಕೀಯ ಹಸಿರು ದಾಳಿಕೋರರಿಗಿಂತ ‘ಅಪರಿಚಿತ ವೈಮಾನಿಕ ವಿದ್ಯಮಾನ’ದ ಕುರಿತೇ (ಯುಎಪಿ) ಅಮೆರಿಕದ ಮಿಲಿಟರಿಗೆ ನಿಜವಾಗಿಯೂ ಕಳವಳಕಾರಿಯಾಗಿದೆ. ಅಮೆರಿಕದ ವೈಮಾನಿಕ ವಲಯದಲ್ಲಿ ಅಕ್ರಮವಾಗಿ ಕಂಡು ಬರುವ ಯಾವುದೇ ಕಾಯಗಳನ್ನು ಪೆಂಟಗನ್ ಗಂಭೀರವಾಗಿ ಪರಿಗಣಿಸುತ್ತದೆ ಎಂದಿದ್ದಾರೆ.

    ಸುರೇಶ್ ರೈನಾ ಕೂಡ ವಿದಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts