More

    ಕ್ಷಮೆ ಕೇಳಿಲ್ಲ, ಕೇಳೋದೂ ಇಲ್ಲ … ಪಾಯಲ್​ ಖಡಕ್​ ಉತ್ತರ

    ಮುಂಬೈ: ‘ನಾನು ಯಾರಲ್ಲೂ ಕ್ಷಮೆ ಕೇಳಿಲ್ಲ. ಕೇಳೋದೂ ಇಲ್ಲ. ಏಕೆಂದರೆ, ನಾನು ಯಾವ ತಪ್ಪನ್ನೂ ಮಾಡಿಲ್ಲ ಅಥವಾ ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿಲ್ಲ. ಅನುರಾಗ್​ ನನ್ನ ಬಳಿ ಏನು ಹೇಳಿದ್ದರೋ ಅದನ್ನೇ ಹೇಳಿದ್ದೇನೆ’ ಎಂದು ನಟಿ ಪಾಯಲ್​ ಘೋಶ್​ ಹೇಳಿದ್ದಾರೆ.

    ಇದನ್ನೂ ಓದಿ: ಜೈಲಿನಲ್ಲಿ ರಿಯಾ ಏನ್​ ಮಾಡ್ತಿದ್ರಂತೆ ಗೊತ್ತಾ? ಅವರ ವಕೀಲರು ಹೇಳ್ತಾರೆ ಕೇಳಿ …

    ಕಳೆದ ತಿಂಗಳಷ್ಟೇ, ನಟ-ನಿರ್ದೇಶಕ ಅನುರಾಗ್​ ಕಶ್ಯಪ್​ ವಿರುದ್ಧ ನಟಿ ಪಾಯಲ್​ ಘೋಶ್​ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದರು. ಈ ಸಂದರ್ಭದಲ್ಲಿ ಅನುರಾಗ್​ ಕಶ್ಯಪ್​ ಖುದ್ದು ತಮ್ಮ ಬಳಿ ತಮಗೆ ನಟಿಯರಾದ ರಿಚಾ ಚಡ್ಢಾ, ಮಾಹಿ ಗಿಲ್​ ಮತ್ತು ಹ್ಯೂಮಾ ಖುರೇಷಿ ಮುಂತಾದವರು ಸಹಕರಿಸಿದ್ದಾಗಿ ಹೇಳಿಕೊಂಡಿದ್ದರು.

    ಈ ಪ್ರಕರಣದಲ್ಲಿ ತಮ್ಮ ಹೆಸರನ್ನು ಅನಾವಶ್ಯಕವಾಗಿ ಎಳೆದುತಂದಿದ್ದಕ್ಕಾಗಿ ಪಾಯಲ್​ ಮೇಲೆ ಮುಂಬೈ ಹೈಕೋರ್ಟ್​ನಲ್ಲಿ ರಿಚಾ ಮಾನನಷ್ಟ ಮೊಕ್ಕದ್ದಮೆಯನ್ನು ಹೂಡಿದ್ದಾರೆ. ಯಾವ್ಯಾವುದೋ ವಿಚಾರಕ್ಕೆ ತಮ್ಮನ್ನು ಎಳೆದು ತಂದಿರುವುದರ ಜತೆಗೆ, ಹೆಸರಿಗೆ ಮಸಿ ಬಳಿಯುವುದಕ್ಕೆ ಪ್ರಯತ್ನಿಸಿದ್ದಿಕ್ಕೆ ಒಂದು ಕೋಟಿ 10 ಲಕ್ಷ ರೂಪಾಯಿಗಳನ್ನು ಕಟ್ಟಿಕೊಡಬೇಕು ಎಂದು ಕೇಸ್​ ಹಾಕಿದ್ದರು.

    ಈ ಸಂಬಂಧ ಬುಧವಾರ ನ್ಯಾಯಾಲಯದಲ್ಲಿ ಪಾಯಲ್​ ಕ್ಷಮೆ ಕೇಳಿದ್ದಾರೆ ಎಂದು ಅವರ ವಕೀಲರು ಹೇಳಿದ್ದಾರೆ ಎಂದು ಸುದ್ದಿಯಾಗಿತ್ತು. ಪಾಯಲ್​ ಅವರು ತಾವು ರಿಚಾ ವಿರುದ್ಧ ನೀಡಿರುವ ಹೇಳಿಕೆಯನ್ನು ಹಿಂಪಡೆಯುವುದಕ್ಕೆ ಸಿದ್ಧರಾಗಿರುವುದರ ಜತೆಗೆ, ಕ್ಷಮೆಯನ್ನೂ ಕೇಳಿದ್ದಾರೆ ಎಂದು ಪಾಯಲ್​ ಪರ ವಕೀಲ ನಿತಿನ್​ ಸಾತ್​ಪುಟೆ ಅವರು ನ್ಯಾಯಾಲಯಕ್ಕೆ ಹೇಳಿದ್ದಾರೆ ಎಂದು ಹೇಳಲಾಗಿತ್ತು.

    ಇದನ್ನೂ ಓದಿ: ಕೆ.ಕಲ್ಯಾಣ್​ ಕುಟುಂಬದಲ್ಲಿ ಮರಳಿದ ಸಂತಸ: ವಿಚ್ಛೇದನ ವಾಪಸ್​ ಪಡೆಯಲು ಪತ್ನಿ ನಿರ್ಧಾರ?

    ಆದರೆ, ಇದು ಅಪ್ಪಟ ಸುಳ್ಳು ಎಂದು ಪಾಯಲ್​ ಹೇಳಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, ‘ನಾನು ಕ್ಷಮೆ ಕೇಳಿಲ್ಲ. ನನಗೂ ರಿಚಾಗೂ ಸಂಬಂಧವಿಲ್ಲ. ಕಷ್ಟದಲ್ಲಿರುವಾಗ ಮಹಿಳೆಯರು ಪರಸ್ಪರ ಒಬ್ಬರಿಗೊಬ್ಬರು ಹೆಗಲು ನೀಡಬೇಕು. ನಾನು ರಿಚಾ ವಿರುದ್ಧ ಯಾವುದೇ ಕೆಟ್ಟ ಮಾತೂ ಆಡಿಲ್ಲ. ನನ್ನ ಹೋರಾಟವೇನಿದ್ದರೂ ಅನುರಾಗ್​ ಕಶ್ಯಪ್​ ವಿರುದ್ಧ. ಆತನ ನಿಜವಾದ ಮುಖವನ್ನು ಜಗತ್ತಿಗೆ ತೋರಿಸುವುದಕ್ಕೆ ಹೊರಟಿದ್ದೇನೇ ಹೊರತು ಬೇರೆ ಯಾರ ವಿರುದ್ಧವೂ ಪೈಪೋಟಿ ಮಾಡುವುದಕ್ಕೆ ನನಗೆ ಇಷ್ಟವಿಲ್ಲ’ ಎಂದು ಅವರು ಹೇಳಿದ್ದಾರೆ.

    ಪ್ರಾಣಕ್ಕಿಂತ ಕೊಟ್ಟ ಮಾತು ದೊಡ್ಡದು … ಕಂಗನಾ ಹೀಗೆ ಹೇಳಿದ್ದು ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts