More

    ಹೃದ್ರೋಗಕ್ಕೆ ಚಿಕಿತ್ಸೆ ನೀಡಿ ಜೀವ ಉಳಿಸಿದ ವೈದ್ಯರ ಹೃದಯವನ್ನೇ ಗೆದ್ದ ರೋಗಿ!

    ಮಂಗಳೂರು: ‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತಿದೆ. ಜೀವ ಉಳಿಯುವಂತೆ ಚಿಕಿತ್ಸೆ ನೀಡುವ ವೈದ್ಯರನ್ನು ಹಲವರು ದೇವರೆಂದೇ ಭಾವಿಸುತ್ತಾರೆ. ಅಂಥ ಚಿಕಿತ್ಸೆ ಪಡೆದವರೊಬ್ಬರು ವೈದ್ಯರನ್ನು ದೇವರೆಂಬಂತೆ ಧನ್ಯತಾಭಾವದಿಂದ ನೋಡಿದ ದೃಶ್ಯದ ಫೋಟೋ ಹಲವರ ಮನ ಸೆಳೆದಿದೆ.

    ಇಂಥದ್ದೊಂದು ಸನ್ನಿವೇಶ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಕಂಡುಬಂದಿದೆ. ಇಲ್ಲಿನ ಕೆಎಂಸಿ ಆಸ್ಪತ್ರೆಯ ಇಂಟರ್​ವೆನ್ಷನಲ್​ ಕಾರ್ಡಿಯೊಲಜಿಸ್ಟ್​ ಡಾ.ಪದ್ಮನಾಭ ಕಾಮತ್​ ಅವರು ತಮ್ಮಿಂದ ಚಿಕಿತ್ಸೆ ಪಡೆದವರೊಬ್ಬರು ಕೃತಜ್ಞತೆ ಸಲ್ಲಿಸಿದ ಪರಿಯನ್ನು ಫೋಟೋ ಮೂಲಕ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ. ಮೂರು ವಾರಗಳ ಹಿಂದೆ ಹೃದ್ರೋಗಕ್ಕೆ ತಮ್ಮಿಂದ ಚಿಕಿತ್ಸೆ ಪಡೆದವರೊಬ್ಬರು ಚೇತರಿಸಿಕೊಂಡು ಬಂದು ನಡೆದುಕೊಂಡ ರೀತಿಗೆ ಅವರು ಮನಸೋತಿದ್ದಾರೆ.

    ಇದನ್ನೂ ಓದಿ: ಜನೌಷಧ ದಿನಾಚರಣೆ: ಮಂಗಳೂರಿನ ವೈದ್ಯ ಡಾ. ಪದ್ಮನಾಭ ಕಾಮತ್‌ಗೆ ಮೋದಿ ಪ್ರಶಂಸೆ

    ನಾವು ಇವರಿಗೆ ಆ್ಯಂಜಿಯೋಪ್ಲಾಸ್ಟಿ ಮಾಡಿ ಚಿಕಿತ್ಸೆ ನೀಡಿದ್ದೆವು. ಜೀವ ಉಳಿಸಿದ ಕೆಲಸ ಮಾಡಿದ್ದಕ್ಕೆ ಇವರು ನಮಗೆ ದೇವರ ಪ್ರಸಾದ ತಂದುಕೊಟ್ಟಿದ್ದಲ್ಲದೆ, ಸಾಷ್ಟಾಂಗ ನಮಸ್ಕಾರ ಮಾಡಲು ಬಂದರು. ಇಂಥದ್ದೊಂದು ಕೃತಜ್ಞತೆ ವ್ಯಕ್ತವಾಗಿದ್ದಕ್ಕೆ ಪ್ರತಿಯಾಗಿ ನಾನು ನನ್ನೆಲ್ಲ ರೋಗಿಗಳಿಗೆ ಶಿರಬಾಗುತ್ತೇನೆ, ಇದು ನಮ್ಮ ಶ್ರೇಷ್ಠ ಭಾರತೀಯ ಸಂಸ್ಕೃತಿ ಎಂದು ಅವರು ತಮ್ಮ ಭಾವನೆ ಹಂಚಿಕೊಂಡಿದ್ದಾರೆ.

    ಒಮಿಕ್ರಾನ್​ ಸೋಂಕು ಹರಡುವಿಕೆ ಡೆಲ್ಟಾಗಿಂತ 3 ಪಟ್ಟು ಅಧಿಕ; ಜಿಲ್ಲಾಮಟ್ಟದಲ್ಲೇ ಜಾಗ್ರತೆ ವಹಿಸುವಂತೆ ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts