More

    ಜನೌಷಧ ದಿನಾಚರಣೆ: ಮಂಗಳೂರಿನ ವೈದ್ಯ ಡಾ. ಪದ್ಮನಾಭ ಕಾಮತ್‌ಗೆ ಮೋದಿ ಪ್ರಶಂಸೆ

    ಉಡುಪಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾಷ್ಟ್ರದಾದ್ಯಂತ ಜನೌಷಧಿ ದಿನಾಚರಣೆ ಪ್ರಯುಕ್ತ ಜರುಗಿದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಂಗಳೂರಿನ ವೈದ್ಯ, ಕೆಎಂಸಿ ಆಸ್ಪತ್ರೆ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ‌ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರ ಸನಿಹದ ಜನೌಷಧ ಕೇಂದ್ರದಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಭಾರತೀಯ ಜನೌಷಧಿ ಪರಿಯೋಜನೆಯ ಜನೌಷಧ ಬಳಕೆಯ ಬಗ್ಗೆ ಅರಿವು ಮೂಡಿಸಲು ಜನೌಷಧ ದಿನಾಚರಣೆ ಆಚರಿಸುತ್ತಿದೆ ಎಂದ ಪ್ರಧಾನಿ ನರೇಂದ್ರ ಡಾ. ಪದ್ಮನಾಭ ಕಾಮತ್ ಅವರ ವೈದ್ಯಕೀಯ ಸೇವೆ ನಾಡಿನ ಎಲ್ಲ ವೈದ್ಯರಿಗೆ ಮಾದರಿಯಾಗಲಿ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಡಾ.ಪದ್ಮನಾಭ ಕಾಮತ್ ಅವರು ಪ್ರಧಾನಿ ಮೋದಿ ಅವರಲ್ಲಿ ತಮ್ಮ ಕಾರ್ಯ ಚಟುವಟಿಕೆ ಮತ್ತು ಜನೌಷಧ ಬಗ್ಗೆ ಇರುವ ಒಲವು, ಸಾರ್ವಜನಿಕರಿಗೆ ಇದರಿಂದ ಆಗುತ್ತಿರುವ ಒಳಿತಿನ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

    ನಾವು ಮಂಗಳೂರು ಮತ್ತು ಉಡುಪಿಯ ಜನೌಷಧ ಕೇಂದ್ರಗಳಲ್ಲಿ ಕೆಲವು ಕಡೆ ಉಚಿತವಾಗಿ ಇಸಿಜಿ ಯಂತ್ರ ಇರಿಸಿ ಉಚಿತ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ಕೇಂದ್ರ ಸರ್ಕಾರ ಜನೌಷಧ ಕೇಂದ್ರಗಳಲ್ಲಿ ಉಚಿತ ಇಸಿಜಿ ಪರೀಕ್ಷೆ ಇಂಥದ್ದೊಂದು ಮಾದರಿ ಯೋಜನೆ ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಿ ಅವರಿಗೆ ಸಲಹೆ ನೀಡಿದರು.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ‘ಮೋದಿ ಕಿ ದುಕಾನ್’​ನಲ್ಲಿ ​​ಕೈಗೆಟಕುವ ಬೆಲೆಯಲ್ಲಿ ಔಷಧಿಗಳು

    ಮಗಳ ಹೆಸರೇ ಮನೆಯ ಹೆಸರು! ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ ಹೊಸ ವರಸೆ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts