More

    ಹೊಟ್ಟೆಯ ಗ್ಯಾಸ್​​ ಸಮಸ್ಯೆ ಪರಿಹರಿಸಲು ‘ಪರಿಪೂರ್ಣ ಪವನಮುಕ್ತಾಸನ’

    ಹೊಟ್ಟೆಯ ಗ್ಯಾಸ್​​ ಸಮಸ್ಯೆ ನಿವಾರಿಸಲು ಅತ್ಯಂತ ಉಪಯುಕ್ತವಾದ ಆಸನವೆಂದರೆ ಪರಿಪೂರ್ಣ ಪವನಮುಕ್ತಾಸನ. ಪವನ ಎಂದರೆ ಗಾಳಿ, ಮುಕ್ತ ಎಂದರೆ ಖಾಲಿ, ಆಸನ ಎಂದರೆ ದೇಹದ ನಿಲುಮೆ. ದೇಹದಲ್ಲಿರುವ ಅನಗತ್ಯವಾದ ವಾಯುವನ್ನು ಹೊರಗೆ ತಳ್ಳಲು ಸಹಾಯಕವಾದಂತಹ ಆಸನವಿದು. ಈ ಆಸನಕ್ಕೆ ವಿಂಡ್​ ರಿಲೀಸಿಂಗ್ ಪೋಸ್​ ಎಂಬ ಹೆಸರಿದೆ.

    ಪ್ರಯೋಜನಗಳು: ಹೊಟ್ಟೆಯೊಳಗಿನ ಎಲ್ಲಾ ಭಾಗಕ್ಕೆ ವ್ಯಾಯಾಮ ದೊರಕಿ, ಜೀರ್ಣಶಕ್ತಿ ವೃದ್ಧಿಯಾಗುತ್ತದೆ. ಪೃಷ್ಠದ ಭಾಗದ ಮತ್ತು ಸುತ್ತಮುತ್ತಲಿನ ಕೀಲುಗಳು ಬಲಗೊಳ್ಳುತ್ತವೆ. ಚೆನ್ನಾಗಿ ರಕ್ತ ಪರಿಚಲನೆಯಾಗುತ್ತದೆ. ಸಮರ್ಪಕ ಹಸಿವು ಉಂಟಾಗುತ್ತದೆ. ಹೊಟ್ಟೆಯಲ್ಲಿನ ಅಜೀರ್ಣವಾಯು ಬಿಡುಗಡೆಯಾಗಿ, ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಕೈಕಾಲು, ಸೊಂಟ, ಭುಜ ಮತ್ತು ಕುತ್ತಿಗೆಗೆ ಮೃದುವಾದ ವ್ಯಾಯಾಮ ದೊರೆಯುತ್ತದೆ. ಮಧುಮೇಹ ನಿಯಂತ್ರಣಕ್ಕೂ ಈ ಆಸನ ಸಹಕಾರಿ.

    ಇದನ್ನೂ ಓದಿ: ಗ್ಯಾಸ್ಟ್ರಿಕ್ ಸಮಸ್ಯೆಗೆ, ಮಧುಮೇಹ ನಿಯಂತ್ರಣಕ್ಕೆ ಇದು ಬಲು ಉಪಯುಕ್ತ!

    ಮಾಡುವ ವಿಧಾನ : ಜಮಖಾನದ ಮೇಲೆ ಅಂಗಾತ ಮಲಗಿ, ಕಾಲುಗಳನ್ನು ಜೋಡಿಸುವುದು. ಎರಡೂ ಕೈಗಳ ಸಹಾಯದಿಂದ ಎರಡೂ ಕಾಲುಗಳನ್ನು ಮಡಿಸಿ, ಹಿಡಿದುಕೊಳ್ಳಬೇಕು. ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಗಲ್ಲವನ್ನು ಮಂಡಿಗೆ ಸ್ಪರ್ಶಿಸಬೇಕು. ಈ ಸ್ಥಿತಿಯಲ್ಲಿ ಸ್ವಲ್ಪಹೊತ್ತು ಸಹಜ ಉಸಿರಾಟ ನಡೆಸಬೇಕು. ಉಸಿರನ್ನು ಬಿಡುತ್ತಾ ನಿಧಾನವಾಗಿ ಕಾಲನ್ನು ಬಿಟ್ಟು ವಿಶ್ರಮಿಸಬೇಕು.

    ದೈಹಿಕ ಅಸಿಡಿಟಿ, ಸ್ಲಿಪ್​ ಡಿಸ್ಕ್​, ಹರ್ನಿಯಾ, ಮುಟ್ಟಿನ ತೊಂದರೆ ಇರುವವರು ಈ ಆಸನವನ್ನು ಮಾಡಬಾರದು, ಅತಿಯಾದ ಸೊಂಟ ನೋವು ಅಥವಾ ಕುತ್ತಿಗೆ ನೋವು ಇರುವವರೂ ಮಾಡಬಾರದು.

    ಮೀನಿನಂತೆ ಚುರುಕಾಗಲು ಈ ಯೋಗಾಸನ ಸಹಕಾರಿ!

    ಸೊಂಟ ಮತ್ತು ಬೆನ್ನು ನೋವು ತಡೆಯಲು ಈ ಯೋಗಾಸನ ಉಪಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts