More

    ನಟಿಯಾಗುವ ಮುನ್ನ ಪರಿಣೀತಿ ಚೋಪ್ರಾ ಏನು ಮಾಡುತ್ತಿದ್ದರು ಗೊತ್ತಾ?

    ಮುಂಬೈ: ಪ್ರತಿಯೊಬ್ಬ ನಟ-ನಟಿ ಸಹ ಚಿತ್ರರಂಗಕ್ಕೆ ಬರುವುದಕ್ಕಿಂತ ಮುನ್ನ, ಬೇರೇನೋ ಕೆಲಸ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ನೇರವಾಗಿ ಚಿತ್ರರಂಗಕ್ಕೆ ಬಂದರೂ, ಅಲ್ಲಿ ಬೇರೇನೋ ಮಾಡಿಕೊಂಡು, ಅಭಿನಯದತ್ತ ವಾಲಿರುತ್ತಾರೆ. ನೇರವಾಗಿ ನಾಯಕ ಅಥವಾ ನಾಯಕಿಯಾದವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಬಹಳ ಕಡಿಮೆ ಎಂದೇ ಹೇಳಬೇಕು.

    ನಟಿಯಾಗುವ ಮುನ್ನ ಪರಿಣೀತಿ ಚೋಪ್ರಾ ಏನು ಮಾಡುತ್ತಿದ್ದರು ಗೊತ್ತಾ?

    ಇದನ್ನೂ ಓದಿ: ‘ಟಾಯ್ಲೆಟ್​’ ನಂತರ ಅಕ್ಷಯ್​ ಅಭಿನಯದ ಇನ್ನೊಂದು ಚಿತ್ರಕ್ಕೆ ನಾಯಕಿಯಾದ ಭೂಮಿ

    ಈಗ್ಯಾಕೆ ಈ ವಿಷಯವೆಂದರೆ, ನಟಿ ಪರಿಣೀತಿ ಚೋಪ್ರಾ ಸಹ ಅದೇ ಸಾಲಿಗೆ ಸೇರಿದವರು. ಇಂದು ಅವರು ಬಾಲಿವುಡ್​ನ ಬೇಡಿಕೆಯ ನಟಿ ಇರಬಹುದು. ಆದರೆ, ಅದಕ್ಕೂ ಮುನ್ನ ಅವರು ಚಿತ್ರರಂಗದಲ್ಲಿ ಬೇರೇನೋ ಕೆಲಸ ಮಾಡುತ್ತಿದ್ದರು. ಆ ಕೆಲಸ ಏನು ಎಂದು ಪರಿಣೀತಿ ಇದೀಗ ಹೇಳಿಕೊಂಡಿದ್ದಾರೆ.

    ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ನಟಿಯಾಗುವ ಮುನ್ನ ಅನೂಷ್ಕಾ ಶರ್ಮ ಅವರ ಪಿಆರ್​ಓ ಆಗಿದ್ದ ವಿಷಯವನ್ನು ಬಿಚ್ಚಿಟ್ಟಿದ್ದಾರೆ.

    ಇದನ್ನೂ ಓದಿ: ವಿಶ್ವನಾಥನ್​ ಆನಂದ್​ ಜತೆಗೆ ಚೆಸ್​ ಆಡಲಿದ್ದಾರೆ ಆಮೀರ್​ ಖಾನ್​!

    ‘ನಾನು ಮೊದಲು ಯಶ್​ರಾಜ್​ ಫಿಲಂಸ್​ನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದೆ. ಅದರಲ್ಲೂ ಅನೂಷ್ಕಾ ಶರ್ಮ ಅವರ ಪಿಆರ್​ಓ ಆಗಿದ್ದೆ. ಮೂರು ತಿಂಗಳ ಕಾಲ ಅವರ ಜತೆಗಿದ್ದೆ. ಆ ಸಂದರ್ಭದಲ್ಲಿ ಅವರ ಸಂದರ್ಶನಗಳನ್ನು ಫಿಕ್ಸ್​ ಮಾಡುತ್ತಿದ್ದವಳು ನಾನೇ. ಆ ನಂತರ ‘ಲೇಡೀಸ್​ ವರ್ಸಸ್​ ರಿಕ್ಕಿ ಬೆಹ್ಲ್​’ ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿತು. ಅನೂಷ್ಕಾ ಶರ್ಮ ಅವರ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದ ನಾನು, ಮೂರೇ ತಿಂಗಳಲ್ಲಿ ಅವರ ಸಹನಟಿಯಾದೆ’ ಎಂದು ನೆನಪಿಸಿಕೊಂಡಿದ್ದಾರೆ ಪರಿಣೀತಿ.

    ಕೆಲವೊಂದನ್ನು ತೋರಿಸಿ, ಕೆಲವೊಂದನ್ನು ಮುಚ್ಚಿಕೊಳ್ಳಬೇಕಾಗುತ್ತೆ! ಹಾಟ್​ ಬ್ಯೂಟಿ ಹೆಬ್ಬಾ ಪಟೇಲ್ ಬೋಲ್ಡ್​ ಹೇಳಿಕೆ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts