More

    ಹೆತ್ತವರ ಪಾದಪೂಜೆ ಮಾಡುವುದು ಶ್ಲಾಘನೀಯ

    ಅಕ್ಕಿಆಲೂರ: ಪಟ್ಟಣದ ಗಂಗಪ್ಪ ಧಾರವಾಡ ಗ್ರಾಮೀಣ ಗುರುಕುಲ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದ ನಿಮಿತ್ತ ಶನಿವಾರ ಏರ್ಪಡಿಸಿದ್ದ ಗುರುಕುಲ ಸಂಭ್ರಮ- 17 ಸಮಾರಂಭದಲ್ಲಿ ವಿದ್ಯಾರ್ಥಿಗಳು ತಂದೆ- ತಾಯಂದಿರ ಪಾದ ಪೂಜೆ ನೆರವೇರಿಸಿದರು.

    ವಿರಕ್ತಮಠದ ಶಿವಬಸವ ಸ್ವಾಮೀಜಿ ನೇತೃತ್ವದಲ್ಲಿ ಶಾಸ್ತ್ರಿಗಳು ಮಕ್ಕಳಿಗೆ ತಂದೆ- ತಾಯಂದಿರ ಪಾದ ಪೂಜೆಯ ವಿಧಿವಿಧಾನಗಳನ್ನು ಬೋಧಿಸಿದರು. ವೇದ ಶಾಸ್ತ್ರಗಳಲ್ಲಿ ತಂದೆ- ತಾಯಿ ಬಗ್ಗೆ ಇರುವ ಸಂಸ್ಕೃತ ಮಂತ್ರಗಳನ್ನು ಪಠಿಸುತ್ತ, ಹೆತ್ತವರ ಪಾದ ತೊಳೆದು ವಿಭೂತಿ, ಗಂಧ ಧರಿಸಿ ನಮಸ್ಕರಿಸಿ, ಪಾದೋಧಕ ಸ್ವೀಕರಿಸಿದರು.

    ನಂತರ ಹಮ್ಮಿಕೊಂಡ ಸಾಂಸ್ಕೃತಿಕ ಸಮಾರಂಭವನ್ನು ಉದ್ಘಾಟಿಸಿದ ಶಿವಬಸವ ಸ್ವಾಮೀಜಿ, ವಾರ್ಷಿಕ ಸ್ನೇಹ ಸಮ್ಮೇಳನದ ಹೆಸರಿನಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಹೆಜ್ಜೆ ಹಾಕುವ ಬದಲು ಕಣ್ಣಿಗೆ ಕಾಣುವ ದೇವರಾಗಿರುವ ಹೆತ್ತವರ ಪಾದಪೂಜೆ ಮಾಡಿಸಿರುವುದು ಶ್ಲಾಘನೀಯ ಕಾರ್ಯ ಎಂದರು.

    ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತಂದೆ- ತಾಯಂದಿರು ಮತ್ತು ಜನ್ಮ ನೀಡಿದ ಭೂಮಿಯನ್ನು ಪೂಜಿಸದ ವ್ಯಕ್ತಿ ಜೀವನದಲ್ಲಿ ಶ್ರೇಷ್ಠನಾಗಲು ಸಾಧ್ಯವಿಲ್ಲ ಎಂದರು.

    ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ ಪಾವಲಿ, ಕುಮಾರ ದೇಶಮುಖ, ಅಶೋಕ ಸಣ್ಣವಿರಪ್ಪನವರ, ಮಹೇಶ ಸಾಲವಟಗಿ, ಸಿದ್ಧಲಿಂಗೇಶ ತುಪ್ಪದ, ಮಲ್ಲಿಕಾರ್ಜುನ ಕಂಬಾಳಿ, ಷಣ್ಮುಖಪ್ಪ ಮುಚ್ಚಂಡಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts