More

    ಸರ್ಕಾರಿ ನೌಕರರ ಸಂಬಳವನ್ನು 10% ಇಳಿಸುತ್ತಂತೆ ಪಾಕಿಸ್ತಾನ!

    ಇಸ್ಲಾಮಾಬಾದ್​: ಶೆಹಬಾಜ್ ಷರೀಫ್​ ರಚಿಸಿದ ರಾಷ್ಟ್ರೀಯ ಮಿತವ್ಯಯ ಸಮಿತಿ(NAC), ಸರ್ಕಾರಿ ನೌಕರರ ವೇತನವನ್ನು ಪಾಕಿಸ್ತಾನದದಾದ್ಯಂತ 10% ರಷ್ಟು ಕಡಿತಗೊಳಿಸಲು ಪರಿಗಣಿಸುತ್ತಿದೆ.

    ಪಾಕಿಸ್ತಾನದ ಆರ್ಥಿಕತೆಯು ಪ್ರಸ್ತುತ ಅಲ್ಲಿ ಉಳಿರುವ ವಿದೇಶಿ ವಿನಿಮಯ ಮೀಸಲು ಅಪಾಯಕಾರಿ ಮಟ್ಟಕ್ಕೆ ತಲುಪಿದ್ದು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ (SBP) ಮೂರು ವಾರಗಳ ಆಮದುಗಳನ್ನು ಸರಿದೂಗಿಸಲು ಮಾತ್ರ ಸಾಕಾಗುತ್ತದೆ ಎಂದು ಹೇಳಿದೆ.

    NACಯ ಪ್ರಸ್ತುತ ಪ್ರಸ್ತಾಪಗಳಲ್ಲಿ ಸಚಿವಾಲಯಗಳು/ವಿಭಾಗಗಳ ವೆಚ್ಚವನ್ನು 15% ರಷ್ಟು ಕಡಿತಗೊಳಿಸುವುದು ಮತ್ತು ಜಿಯೋ ಟಿವಿ ಪ್ರಕಾರ ಫೆಡರಲ್ ಮಂತ್ರಿಗಳು, ರಾಜ್ಯ ಸಚಿವರು ಮತ್ತು ಸಲಹೆಗಾರರ ​​ಸಂಖ್ಯೆಯನ್ನು 78 ರಿಂದ 30 ಕ್ಕೆ ಇಳಿಸುವುದು ಕೂಡ ಸೇರಿದೆ.

    ಇಂದು ಶಿಫಾರಸುಗಳನ್ನು ಅಂತಿಮಗೊಳಿಸಲಿರುವ ಸಮಿತಿ, ತನ್ನ ವರದಿಯನ್ನು ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಕಳುಹಿಸುವ ನಿರೀಕ್ಷೆಯಿದೆ.

    “NAC ಮಂತ್ರಿಗಳು, ರಾಜ್ಯ ಸಚಿವರು, ಸಲಹೆಗಾರರು ಮತ್ತು ವಿಶೇಷ ಸಹಾಯಕರ ಸಂಖ್ಯೆಯನ್ನು 30ಕ್ಕೆ ಇಳಿಸಲು ಪ್ರಸ್ತಾಪಿಸುತ್ತಿದ. ಆದರೆ ಉಳಿದವರ ಸೇವೆ ಅಗತ್ಯವಿದ್ದಲ್ಲಿ, ಅವರಿಗೆ ರಾಷ್ಟ್ರೀಯ ಖಜಾನೆಯಿಂದ ಯಾವುದೇ ಸಂಪನ್ಮೂಲಗಳನ್ನು ನೀಡಬಾರದು. ಅವರು ತುರ್ತು ಸ್ಥಿತಿಯನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು” ಎಂದು ವರದಿಯಾಗಿದೆ. ಇಷ್ಟು ಗಂಭೀರ ಸ್ಥಿತಿ ಇರುವಾಗ ಪಾಕಿಸ್ತಾನದ ಸರ್ಕಾರಿ ನೌಕರರ ಸಂಬಳ: 10% ಕಡಿಮೆಯಾಗುವುದು ಎಂದರೆ ಅದರಲ್ಲಿ ಆಶ್ಚರ್ಯವಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts