More

    ಬಲೂಚಿಸ್ತಾನದಲ್ಲಿ ಮಾನವಹಕ್ಕುಗಳ ಆಯೋಗದ ವೆಬ್​ಸೈಟ್ ಬ್ಲಾಕ್​ ಮಾಡಿದ ಪಾಕ್​ ಸರ್ಕಾರ

    ಬಲೂಚಿಸ್ತಾನ: ಪಾಕಿಸ್ತಾನದ ಅಧಿಕಾರಿಗಳು ಹ್ಯೂಮನ್​ ರೈಟ್ಸ್​ ಕಮಿಷನ್ ಆಫ್ ಬಲೂಚಿಸ್ತಾನದ ಅಧಿಕೃತ ವೆಬ್​ಸೈಟನ್ನು ಅನಿರ್ದಿಷ್ಟಾವಧಿಗೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮ ಸಂಸ್ಥೆ ಬಲೂಚಿಸ್ತಾನ್​ ಪೋಸ್ಟ್​ ವರದಿ ಮಾಡಿದೆ.

    ಇದನ್ನೂ ಓದಿ:  ಪತ್ರಕರ್ತೆಯರಿಬ್ಬರಿಗೆ ಚೀನಾ ತೋರಿಸಿದ ಅಮೆರಿಕ ಅಧ್ಯಕ್ಷ – ಸುದ್ದಿಗೋಷ್ಠಿ ಅರ್ಧಕ್ಕೇ ಖತಂ!

    ಇದರಂತೆ, ಲಾಭೋದ್ದೇಶ ರಹಿತ ಮಾನವ ಹಕ್ಕುಗಳ ಸಂಘಟನೆ ಎಂದು ಹೇಳಿಕೊಳ್ಳುತ್ತಿರುವ ಈ ಕಮಿಷನ್​ ಬಲೂಚಿಸ್ತಾನದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯಾಚರಿಸುತ್ತಿತ್ತು. ಈ ಸಂಘಟನೆ ಸ್ವೀಡನ್​, ಬ್ರಿಟನ್​, ಫ್ರಾನ್ಸ್ ಮತ್ತು ಇತರೆ ಕೆಲವು ದೇಶಗಳಲ್ಲೂ ಕಾರ್ಯಾಚರಿಸುತ್ತಿದೆ. ಬಲೂಚಿಸ್ತಾನದ ಮೂಲೆ ಮೂಲೆಗಳಲ್ಲಿ ನಡೆಯುವ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿ ಅದರ ವರದಿಯನ್ನು ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವ ಕೆಲಸವನ್ನು ಮಾಡುತ್ತಿತ್ತು. ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸುವ ಸಲುವಾಗಿಯೇ ಈ ಸಂಘಟನೆ ಬಲೂಚಿಸ್ತಾನದಾದ್ಯಂತ ತನ್ನ ಬೆಂಬಲಿಗರು ಮತ್ತು ಸ್ವಯಂಸೇವಕರ ಜಾಲವನ್ನೇ ರಚಿಸಿಕೊಂಡಿತ್ತು.

    ಇದನ್ನೂ ಓದಿ: 533 ಜನರಿಗೆ COVID19 ಕೊಟ್ಟವ ಒಬ್ಬನೇ- ಘಾನಾದ ಅಧ್ಯಕ್ಷರ ಕಳವಳ !

    ಈಗ ಈ ಸಂಘಟನೆಯ ವೆಬ್​ಸೈಟ್ ಬ್ಲಾಕ್ ಆಗಿದ್ದು, ಅದರಲ್ಲಿ ಪಾಕಿಸ್ತಾನ ಸರ್ಕಾರದ ಸಂದೇಶ ಪ್ರದರ್ಶಿಸಲ್ಪಡುತ್ತಿದೆ. ಹುಷಾರಾಗಿ ಜಾಲಾಡಿ, ನೀವು ಪಾಕಿಸ್ತಾನದಲ್ಲಿ ನಿಷೇಧಿಸಲ್ಪಟ್ಟ ವಿಷಯಗಳನ್ನು ಜಾಲಾಡುತ್ತಿದ್ದೀರಿ ಎಂಬ ಎಚ್ಚರಿಕೆ ಸಂದೇಶ ಕಾಣುತ್ತದೆ. ಬಲೂಚಿಸ್ತಾನದಲ್ಲಿ ಮಾಧ್ಯಮದ ಮೇಲೆ ನಿರ್ಬಂಧ, ನಿಷೇಧ ಪದೇಪದೇ ಆಗುತ್ತಿದ್ದು, ಅಲ್ಲಿ ಸ್ವತಂತ್ರವಾಗಿ, ನಿರ್ಭೀತವಾಗಿ ಪತ್ರಿಕೋದ್ಯಮ ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದರತ್ತ ವರದಿ ಬೊಟ್ಟುಮಾಡಿದೆ.

    ಇದನ್ನೂ ಓದಿ: VIDEO: “ಸಿಂಗಂ” ಸ್ಟಂಟ್​ ಪ್ರದರ್ಶಿಸಿದ ಮಧ್ಯಪ್ರದೇಶದ ಪೊಲೀಸ್ ಅಧಿಕಾರಿಯನ್ನೂ ಬಿಡಲಿಲ್ಲ ಕಾನೂನು!

    ಅನೇಕ ಸಂಘಟನೆಗಳು, ಮಾಧ್ಯಮ ಸಂಸ್ಥೆಗಳು ಈ ವಿಷಯವನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದು, ಬಲೂಚಿಸ್ತಾನದಲ್ಲಿ ಪ್ರಿವೆನ್ಶನ್​ ಆಫ್ ಇಲೆಕ್ಟ್ರಾನಿಕ್​ ಕ್ರೈಮ್ಸ್ ಆ್ಯಕ್ಟ್​ ಇನ್ ಬಲೂಚಿಸ್ತಾನ್ ಬಹಳಷ್ಟು ದುರ್ಬಳಕೆ ಆಗುತ್ತಿದೆ. ಪತ್ರಕರ್ತರನ್ನು, ಮಾನವ ಹಕ್ಕು ಕಾರ್ಯಕರ್ತರನ್ನು, ರಾಜಕೀಯ ಬಂಡಾಯಗಾರರನ್ನು ಈ ಕಾಯ್ದೆ ಬಳಸಿಯೇ ಚಿತ್ರಹಿಂಸೆ ನೀಡಲಾಗುತ್ತಿದೆ ಎಂಬ ಆರೋಪ ಪಾಕಿಸ್ತಾನ ಸರ್ಕಾರದ ಮೇಲಿದೆ. (ಏಜೆನ್ಸೀಸ್​)

    ಐಎಸ್​ಐಎಸ್ ಕಮಾಂಡರ್ ಜಿಯಾ ಉಲ್ ಹಕ್ ಸೇರಿ ಮೂವರು ಪ್ರಮುಖರು ಆಫ್ಘನ್​ನಲ್ಲಿ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts