More

  ಬಲೂಚಿಸ್ತಾನದಿಂದ ಪೇರಿ ಕಿತ್ತ ಪಾಕಿಸ್ತಾನ ಸೇನಾಪಡೆ, ಮಿಲಿಟರಿ ಕಟ್ಟಡಗಳಿಗೆ ಬೆಂಕಿ

  ನವದೆಹಲಿ: ಬಲೂಚಿಸ್ತಾನದಲ್ಲಿದ್ದ ಪಾಕಿಸ್ತಾನಿ ಸೇನಾಪಡೆ ಯೋಧರು ತಮ್ಮ ಸಮಾನು ಸರಂಜಾಮುಗಳು, ಶಸ್ತ್ರಾಸ್ತ್ರಗಳನ್ನೆಲ್ಲ ಬಿಟ್ಟು ಪೇರಿ ಕಿತ್ತಿದ್ದಾರೆ. ಬಲೂಚಿಸ್ತಾನದಲ್ಲಿ ಪಾಕ್​ ಸೇನೆಯ ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡಿರುವುದು ಇದಕ್ಕೆ ಕಾರಣ.
  ಗಡಿಯಲ್ಲಿ ಪಾಕ್​ ಯೋಧರು ನಿರ್ಮಿಸಿಕೊಂಡಿದ್ದ ಹೊರಠಾಣೆಗಳ ಮೇಲೆ ಕಲ್ಲುತೂರಾಟ ಮಾಡಿರುವ ಪ್ರತಿಭಟನಾಕಾರರು, ಅವುಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೆ, ಆ ಪ್ರದೇಶದಲ್ಲಿರುವ ಮಿಲಿಟರಿ ಕಟ್ಟಡಗಳಿಗೂ ಬೆಂಕಿ ಹಚ್ಚಿದ್ದಾರೆ.

  ಪಾಕಿಸ್ತಾನ ಮತ್ತು ಬಲೂಚಿಸ್ತಾನದಲ್ಲಿ ವಾಸವಾಗಿರುವ ಬಲೂಚಿಸ್ತಾನಿಗಳು ಪಾಕ್​ ಮತ್ತು ಬಲೂಚಿಸ್ತಾನದ ನಡುವಿನ ಗಡಿರೇಖೆಗೆ ಅಧಿಕೃತ ಮಾನ್ಯತೆ ನೀಡಿಲ್ಲ. ಆದರೂ ಪಾಕಿಸ್ತಾನ ಸರ್ಕಾರ ಮಾತ್ರ ಈ ಗಡಿರೇಖೆಯ ಬಳಿ ಹೊರಠಾಣೆಗಳನ್ನು ನಿರ್ಮಿಸಿದ್ದಲ್ಲದೆ, ಹಲವು ಮಿಲಿಟರಿ ಕಟ್ಟಡಗಳನ್ನು ನಿರ್ಮಿಸಿತ್ತು. ಜತೆಗೆ, ಅಲ್ಲಿ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಯೋಧರು ಬಲೂಚಿಸ್ತಾನಿಗಳ ಮೇಲೆ ಭಾರಿ ದೌರ್ಜನ್ಯ ಎಸಗುತ್ತಿದ್ದರು. ಇದೆಲ್ಲದರಿಂದ ಬೇಸತ್ತಿದ್ದ ಬಲೂಚಿಸ್ತಾನಿಗಳು ಇದೀಗ ಪಾಕ್​ ಸೇನಾಪಡೆ ಮತ್ತು ಸರ್ಕಾರದ ವಿರುದ್ಧ ಸಿಡಿದೆದ್ದು ಪ್ರತಿಭಟನೆ ಮಾಡುತ್ತಿದ್ದಾರೆ.

  ಕಳೆದ ವಾರ ಪಾಕ್​ ಯೋಧರು ಈ ಪ್ರದೇಶದಲ್ಲಿನ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಕೊಂದಿದ್ದರು. ಈ ಘಟನೆ ಬಗ್ಗೆ ಬಲೂಚಿಸ್ತಾನದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಬಲೂಚಿಸ್ತಾನಿಗಳು ಮತ್ತು ಬಲೂಚಿಸ್ತಾನ ನ್ಯಾಷನಲ್​ ಪಾರ್ಟಿಯ (ಬಿಎನ್​ಪಿ) ಅಧ್ಯಕ್ಷ ಹಾಗೂ ಮಾಜಿ ಸಿಎಂ ಅಖ್ತರ್​ ಮೆಂಗಲ್​ ಈ ಹತ್ಯೆಗೆ ಸ್ಥಳೀಯ ಆಡಳಿತವೇ ಹೊಣೆ ಎಂದು ಆರೋಪಿಸಿ, ಪ್ರತಿಭಟನೆಗೆ ಮುಂದಾಗಿದ್ದಾರೆ.

  ಇದನ್ನೂ ಓದಿ: ದೇಶದ್ರೋಹದ ಆರೋಪಕ್ಕೆ ಒಳಗಾಗಿರುವ ಬೀದರ್​ ಶಾಲೆಯಿಂದ ಸ್ವಚ್ಛತಾ ಅಭಿಯಾನ

  ಸಾಯಿಸಿ, ಬಿಸಾಡು ತಂತ್ರ: ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಸೇನಾಪಡೆಗಳು ತಮ್ಮ ವಿರುದ್ಧ ಮಾತನಾಡುವವರನ್ನು, ತಮ್ಮ ದೌರ್ಜನ್ಯಗಳ ವಿರುದ್ಧ ಸಿಡಿದೇಳುವವರನ್ನು ಸಾಯಿಸಿ, ಬಿಸಾಡುವ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ.

  ಕೆಲದಿನಗಳ ಹಿಂದೆ ಪಾಕ್​ ವಿರುದ್ಧ ಸ್ವೀಡನ್​ನಿಂದ ಪ್ರಕಟವಾಗುವ ಬಲೂಚಿಸ್ತಾನ ಟೈಮ್ಸ್​ ಎಂಬ ಆನ್​ಲೈನ್​ ಪತ್ರಿಕೆಯ ಸಂಪಾದಕ ಸಾಜೀದ್​ ಹುಸೇನ್​ ಪಾಕಿಸ್ತಾನ ವಿರೋಧಿ ಲೇಖವನ್ನು ಪ್ರಕಟಿಸಿದ್ದರು. ಇದರಿಂದ ಸಿಟ್ಟಿಗೆದ್ದ ಪಾಕ್​ ಜನರು ಸ್ವೀಡನ್​ನಲ್ಲಿದ್ದ ಸಾಜೀದ್​ ಹುಸೇನ್​ ಅವರನ್ನು ಮಾರ್ಚ್​ 2ರಂದು ಅವರನ್ನು ಅಪಹರಿಸಿ, ಮೇ 2ರಂದು ಹತ್ಯೆ ಮಾಡಿದ್ದರು. ಅವರ ಶವವನ್ನು ಸ್ವೀಡನ್​ನ ಉಪ್ಸಾಲಾ ಎಂಬ ನಗರದ ಹೊರವಲಯದಲ್ಲಿ ಬಿಸಾಡಿ ಹೋಗಿದ್ದರು ಎನ್ನಲಾಗಿದೆ. ಇದು ಕೂಡ ಪ್ರತಿಭಟನೆಯ ಕಾವಿಗೆ ತುಪ್ಪ ಸುರಿದಿದೆ ಎಂದು ಹೇಳಲಾಗುತ್ತಿದೆ.

  ಆಭರಣ ಮಾಡಿಕೊಡುವೆ ಎಂದಾತನಿಗೆ 10 ಕಿಲೋ ಚಿನ್ನ ಕೊಟ್ಟ ಜ್ಯುವೆಲರಿ ಶಾಪ್ ಮಾಲೀಕ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts