More

    ನಿತ್ಯ ಕಿರಿಕ್ ಪಾಕ್​ನಿಂದ ಮಾನವಹಕ್ಕು ಕುರಿತು ಉಪನ್ಯಾಸ ಬೇಕಿಲ್ಲ- ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ

    ಜಿನೇವಾ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕೌನ್ಸಿಲ್​ ಸಭೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತೀವ್ರ ವಾಗ್ದಾಳಿ ನಡೆಸಿತು. ಪಾಕಿಸ್ತಾನವು ಭಯೋತ್ಪಾದನೆಯ ಕೇಂದ್ರಬಿಂದುವಾಗಿದ್ದು, ಹಿಂದು, ಸಿಖ್​, ಕ್ರಿಶ್ಚಿಯನ್ಸ್ ಮತ್ತು ಇತರೆ ಅಲ್ಪಸಂಖ್ಯಾತರಿಗೆ ಸತತ ಕಿರುಕುಳ ನೀಡುತ್ತಿರುವ ಇಸ್ಲಾಮಾಬಾದ್​ನಿಂದ ಯಾರೂ ಮಾನವ ಹಕ್ಕು ಕುರಿತು ಉಪನ್ಯಾಸವನ್ನು ಬಯಸುತ್ತಿಲ್ಲ ಎಂದು ಭಾರತ ವಾಗ್ದಾಳಿ ನಡೆಸಿತು.

    ಮಾನವ ಹಕ್ಕುಗಳ ಕೌನ್ಸಿಲ್​ನ 45ನೇ ಸಭೆಯಲ್ಲಿ ಪಾಕಿಸ್ತಾನ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆಯನ್ನು ನೀಡಿದ ಭಾರತದ ಪ್ರತಿನಿಧಿ, ಪಾಕಿಸ್ತಾನ ಎಂತಹ ರಾಷ್ಟ್ರವೆಂದರೆ ವಿಶ್ವಸಂಸ್ಥೆಯ ನಿರ್ಬಂಧಿತ ಪಟ್ಟಿಯಲ್ಲಿರುವ ವ್ಯಕ್ತಿಗಳಿಗೆ ಪಿಂಚಣಿ ನೀಡುತ್ತಿದೆ. ಅದೂ ಅಲ್ಲದೆ, ಜಮ್ಮು-ಕಾಶ್ಮೀರದಲ್ಲಿ ಹೋರಾಡುವುದಕ್ಕೆ ಸಾವಿರಾರು ಉಗ್ರರಿಗೆ ತರಬೇತಿ ನೀಡುವ ಹತ್ತಾರು ಶಿಬಿರಗಳು ನಮ್ಮಲ್ಲಿವೆ ಎಂದು ಆ ದೇಶದ ಪ್ರಧಾನ ಮಂತ್ರಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇಂತಹ ದೇಶ ಭಯೋತ್ಪಾದನೆಯ ಕೇಂದ್ರ ಸ್ಥಾನವೇ ಹೊರತು ಬೇರೇನೂ ಅಲ್ಲ. ಟೆರರ್ ಫಂಡಿಂಗ್ ಅನ್ನು ನಿಲ್ಲಿಸುವುದು ಅದಕ್ಕೆ ಸಾಧ್ಯವಾಗಿಲ್ಲ. ಪಾಕಿಸ್ತಾನದಲ್ಲಿರುವ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳುವುದೂ ಆಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

    ಇದನ್ನೂ ಓದಿ: ಅಡವಿ ತುಡವಿ ಜೇನು ಹುಳು, ಸೀತಾಳೆ ಆರ್ಕಿಡ್​ಗೆ ರಾಜ್ಯಪಟ್ಟ?

    ಪಾಕಿಸ್ತಾನದಲ್ಲಿ ಸಾವಿರಾರು ಸಿಖ್ಖರು, ಹಿಂದುಗಳು ಮತ್ತು ಕ್ರಿಶ್ಚಿಯನ್​ ಅಲ್ಪಸಂಖ್ಯಾತ ಮಹಿಳೆಯರು ಮತ್ತು ಹುಡುಗಿಯನ್ನು ಅಪಹರಿಸಲಾಗುತ್ತಿದೆ. ಅವರನ್ನು ಬಲವಂತವಾಗಿ ಮತಾಂತರ ಮಾಡಿ ಮದುವೆ ಮಾಡುತ್ತಿದ್ದಾರೆ. ಬಲೂಚಿಸ್ತಾನದಲ್ಲಂತೂ ಬಲೂಚಿಗಳ ಸ್ಥಿತಿ ಶೋಚನೀಯ. ಒಂದು ದಿನ ಅಲ್ಲಿ ಬಲೂಚಿಗಳು ನೆಮ್ಮದಿಯಿಂದ ಬದುಕಲಾಗುತ್ತಿಲ್ಲ. ನಿತ್ಯವೂ ಪಾಕ್ ಸೇನಾ ಪಡೆಗಳು ಯಾರನ್ನಾದರೂ ಅಪಹರಿಸುವುದು, ಕಿರುಕುಳಕೊಡುವುದು ಮಾಡುತ್ತಲೇ ಇರುತ್ತದೆ ಎಂಬ ಅಂಶವನ್ನು ಮಾನವ ಹಕ್ಕುಗಳ ಕೌನ್ಸಿಲ್ ಸಭೆಯ ಗಮನಕ್ಕೆ ತಂದರು. (ಏಜೆನ್ಸೀಸ್)

    ಜಂಟಿ ಆಯುಕ್ತರೇ, ಪಾಲಿಕೆ ಮಾಜಿ ಸದಸ್ಯರ ಬೀಳ್ಕೊಡುಗೆ ಸಮಾರಂಭಕ್ಕೆ ಖರ್ಚು ಮಾಡಿದ ದುಡ್ಡು ಯಾರದ್ದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts