More

    ಅಡವಿ ತುಡವಿ ಜೇನು ಹುಳು, ಸೀತಾಳೆ ಆರ್ಕಿಡ್​ಗೆ ರಾಜ್ಯಪಟ್ಟ?

    ಬೆಂಗಳೂರು: ಅಡವಿ ತುಡವಿ ಜೇನು ಹುಳುವಿಗೆ ರಾಜ್ಯ ಕೀಟ ಹಾಗೂ ಸೀತಾಳೆ ಆರ್ಕಿಡ್​ಗೆ ರಾಜ್ಯ ಸಸ್ಯ ಸ್ಥಾನಮಾನ ನೀಡಬೇಕೆಂಬ ಶಿಫಾರಸು ಜಾರಿಗೆ ತರಲು ಅರಣ್ಯ ಇಲಾಖೆ ಮುಖ್ಯಸ್ಥರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ.

    ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ನೇತೃತ್ವದ ನಿಯೋಗ ಮಂಗಳವಾರ ಯಡಿಯೂರಪ್ಪರನ್ನು ಭೇಟಿ ಆಗಿ, ವನ್ಯಜೀವಿ ಕಾಯ್ದೆ ಅನ್ವಯ ಅಡವಿ ತುಡವಿ ಜೇನು ಹುಳು ಹಾಗೂ ಸೀತಾಳೆ ಆರ್ಕಿಡ್​ಗೆ ರಾಜ್ಯಪಟ್ಟ ನೀಡಬೇಕಾದ ಔಚಿತ್ಯ ವಿವರಿಸಿತು. ಇದನ್ನೂ ಓದಿ: ಅಲಿಬಾಬಾ ಸರ್ವರ್‌ಗಳಿಂದ ಭಾರತೀಯ ಡೇಟಾ ಕಳವು, ಚೀನಾಕ್ಕೆ ರವಾನೆ!

    ಪರಿಸರ, ಕೃಷಿಗೆ ಪೂರಕ: ಸಂಶೋಧಕರು ಗುರುತಿಸಿದ ಪ್ರಕಾರ ಅಡವಿ ತುಡವಿ ಜೇನು ಹುಳು ‘ಪರಿಸರ ಆರೋಗ್ಯ ಸೂಚಕ’. ಕಾಡಿನ ಜೇನು ಸಂಕುಲ ಉಳಿಸಿ, ಪರಾಗಸ್ಪರ್ಶ ಹೆಚ್ಚಿಸಬೇಕು. ಇದರಿಂದ ಅರಣ್ಯ ಅಭಿವೃದ್ಧಿಯಾಗಿ, ರೈತರು ಜೇನು ಸಾಕಣೆ ಮಾಡಿ ಆದಾಯ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ಕೃಷಿ ಹಾಗೂ ಕಾಡು ಬೆಳೆ ಬೀಜೋತ್ಪಾದನೆ ಹೆಚ್ಚಿಸಲು ಜೇನು ಸಂತತಿ ಕೊಡುಗೆ ಅಪಾರವಾದದ್ದು ಎಂದು ಅನಂತ ಹೆಗಡೆ ತಿಳಿಸಿದರು. ರಾಜ್ಯ ಆರ್ಕಿಡ್ ಸೊಸೈಟಿ ಅಧ್ಯಕ್ಷ ಡಾ.ಶಶಿಧರ, ಕೇಂದ್ರ ಸರ್ಕಾರದ ಕೃಷಿ ಸಂಶೋಧನಾ ಮಂಡಳಿಯ ಕೀಟ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಭಕ್ತವತ್ಸಲಂ, ಮಂಡಳಿ ಸದಸ್ಯ ಕಾರ್ಯದರ್ಶಿ ಪುನೀತ್ ಪಾಠಕ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಗೋಗಿ, ಪ್ರೀತಂ, ಕಾರ್ತಿಕ್ ಇತರರಿದ್ದರು.

    ಅಭಿವೃದ್ಧಿ ಕಾರ್ಯಕ್ಕಾಗಿ 33000 ಕೋಟಿ ರೂ. ಸಾಲ ಪಡೆಯಲಿದೆ ರಾಜ್ಯ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts