More

    ಪಾಕ್​ ಸೇನೆಯ ಬೇಡಿಕೆ ಕೇಳಿ ಬೆಚ್ಚಿಬಿದ್ದ ಪ್ರಧಾನಿ ಇಮ್ರಾನ್!

    ನವದೆಹಲಿ: ಜಗತ್ತಿನ ಎಲ್ಲ ದೇಶಗಳಲ್ಲೂ ಕೋವಿಡ್​-19 ಮಣಿಸುವ ಹೋರಾಟ ನಡೆಯುತ್ತಿದೆ. ಆದರೆ, ಪಾಕಿಸ್ತಾನ ಸೇನೆಯು ಸಿಬ್ಬಂದಿ ವೇತನ ಹೆಚ್ಚಿಸಿಕೊಳ್ಳುವಲ್ಲಿ ಬಿಜಿಯಾಗಿದೆ. ಕರೊನಾ ಲಾಕ್​ಡೌನ್​ನಿಂದಾಗಿ ಏಪ್ರಿಲ್​ನಲ್ಲೇ ಸುಮಾರು 11,000 ಕೋಟಿ ರೂ. ನಷ್ಟ ಅನುಭವಿಸಿರುವ ಪಾಕಿಸ್ತಾನಕ್ಕೆ ಸೇನೆಯ ಬೇಡಿಕೆ ಪರಿಗಣಿಸುವ ಆರ್ಥಿಕ ಶಕ್ತಿಯೂ ಇಲ್ಲ, ಇತ್ತ ಬೇಡಿಕೆ ನಿರಾಕರಿಸುವ ಧೈರ್ಯವೂ ಇಲ್ಲ!

    ಇದನ್ನೂ ಓದಿ ಇದು ಸ್ಟೈಲ್ ಅಲ್ಲ; ಪ್ಯಾಚಪ್ … ಅಮಿತಾಭ್ ಬಿಚ್ಚಿಟ್ಟ ಯಾರಿಗೂ ಗೊತ್ತಿಲ್ಲದ ರಹಸ್ಯ!

    ಮಹಾಮಾರಿ ಕರೊನಾಗೆ ಇಡೀ ಜಗತ್ತೇ ತಲ್ಲಣಗೊಂಡಿದೆ. ಕೋಟ್ಯಂತರ ಮಂದಿ ಕೆಲಸ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಖಾಸಗಿ ಮಾತ್ರವಲ್ಲ, ಸರ್ಕಾರಿ ಉದ್ಯೋಗಿಗಳಿಗೆ ಹಲವೆಡೆ ಸ್ಯಾಲರಿಯೇ ಆಗಿಲ್ಲ. ಖಾಸಗಿ ವಲಯದ ಬಹುತೇಕ ಉದ್ಯೋಗಿಗಳ ಕೈ ಮೇಲೆ ವೇತನ ಕಡಿತದ ಬರೆ ಅಚ್ಚೊತ್ತಿದೆ. ನಿರುದ್ಯೋಗ ಸಮಸ್ಯೆ ತಲೆದೋರಿದೆ. ಇದು ಪಾಕಿಸ್ತಾನಕ್ಕೂ ಹೊರತಾಗಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಶೇ.20 ಸಂಬಳ ಹೆಚ್ಚಳಕ್ಕೆ 6,367 ಕೋಟಿ ರೂ. ಮೀಸಲಿಡಬೇಕು ಎಂದು ಪಾಕ್​ ಸರ್ಕಾರಕ್ಕೆ ಮನವಿ ಸಲ್ಲಿಸಿ ಅಲ್ಲಿನ ಸೇನೆ ಒತ್ತಾಯಿಸಿದೆ.

    ಪಾಕ್​ ಸೇನೆಯ ಬೇಡಿಕೆ ಕೇಳಿ ಬೆಚ್ಚಿಬಿದ್ದ ಪ್ರಧಾನಿ ಇಮ್ರಾನ್!ಪಾಕಿಸ್ತಾನದಲ್ಲಿ ಕರೆನ್ಸಿ ಕುಸಿತ ಮತ್ತು ಹಣದುಬ್ಬರ ಹೆಚ್ಚುತ್ತಿದ್ದು, ಆರ್ಥಿಕತೆ ತೀವ್ರ ಹದಗೆಟ್ಟಿದೆ. ಇಂತಹ ಸಂದರ್ಭದಲ್ಲಿ ವೇತನ ಹೆಚ್ಚಳ ಸಾಧ್ಯವಿಲ್ಲ ಎಂದು​ ಪ್ರಧಾನಿ ಇಮ್ರಾನ್ ಖಾನ್​ ಹೇಳಿದ್ದರಾದರೂ ಇದಕ್ಕೆ ಒಪ್ಪದ ಸೇನೆಯು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಸದ್ಯ ಈಗಿರುವ ವೇತನದಲ್ಲಿ ಸೈನಿಕರು ತಮ್ಮ ಮನೆಯ ಖರ್ಚು-ವೆಚ್ಚ ನಿಭಾಯಿಸಲು ಆಗುತ್ತಿಲ್ಲ ಎಂದಿದೆ. ಬ್ರಿಗೇಡಿಯರ್ ಶ್ರೇಣಿಯ ಅಧಿಕಾರಿಗಳಿಗೆ ಶೇ.5 ಮತ್ತು ಸೈನಿಕರಿಗೆ ಶೇ.10 ವೇತನ ಹೆಚ್ಚಿಸುವುದಾಗಿ ಈ ಹಿಂದೆ ಸರ್ಕಾರ ಭರವಸೆ ನೀಡಿತ್ತು. ಈಗ ವೇತನ ಹೆಚ್ಚಳ ಮಾಡಿ ಎಂದು ಪಟ್ಟು ಹಿಡಿದಿದೆ.

    ಇದನ್ನೂ ಓದಿ  700 ಕಿ.ಮೀ. ದೂರದ ಸ್ವಗ್ರಾಮಕ್ಕೆ ಗರ್ಭಿಣಿ ಪತ್ನಿ, ಮಗಳ ಹೊತ್ತು ಸಾಗಿದ್ದೇ ರೋಚಕ ಕಥೆ!

    ಪಾಕ್​ ದೇಶದ ಬಹುತೇಕ ವ್ಯವಹಾರಗಳನ್ನೂ ತನ್ನ ಹಿಡಿತದಲ್ಲೇ ಇಟ್ಟುಕೊಂಡಿರುವ ಸೇನೆಯು ಭಾರತದ ಗಡಿಯಲ್ಲಿ ದಾಳಿ ನಡೆಸಲೆಂದೇ ಸಾಕಷ್ಟು ಹಣ ಮೀಸಲಿಟ್ಟಿದೆ. 2016ರ ವರದಿಯೊಂದರ ಪ್ರಕಾರ ಪಾಕಿಸ್ತಾನ ಸೇನೆಯು ಆ ದೇಶದ ಖಾಸಗಿ ವಲಯದಲ್ಲಿ 100 ಬಿಲಿಯನ್ ಡಾಲರ್ ಗೂ ಹೆಚ್ಚಿನ ಹಣ ಹೂಡಿಕೆ ಮಾಡಿದೆಯಂತೆ!

    ಬ್ಯಾಂಕಿಂಗ್, ಆಹಾರ, ಚಿಲ್ಲರೆ ವ್ಯಾಪಾರ, ಸೂಪರ್‌ಸ್ಟೋರ್, ಸಿಮೆಂಟ್, ರಿಯಲ್ ಎಸ್ಟೇಟ್, ವಸತಿ ನಿರ್ಮಾಣ, ವಿಮಾ ಸಂಸ್ಥೆಗಳಿಗೆ ಖಾಸಗಿ ಭದ್ರತಾ ಸೇವೆ… ಹೀಗೆ ವಿವಿಧ ವಲಯದಲ್ಲೂ ಪಾಕ್​ ಸೇನೆ ವ್ಯವಹಾರ ನಡೆಸುತ್ತಿದೆ. ಈಗ ತೈಲ ವ್ಯವಹಾರಕ್ಕೂ ಪ್ರವೇಶಿಸುವ ಆಲೋಚನೆ ಹೊಂದಿದೆ. ಇಷ್ಟೆಲ್ಲ ವ್ಯವಹಾರ ನಡೆಸುವ​ ಸೇನೆಯು ದೇಶದ ಬಜೆಟ್​ಗೆ ಲಾಭದಾಯಕವಾಗೇನೂ ಇಲ್ಲ. ಸರ್ಕಾರದಿಂದಲೇ ಲಕ್ಷಾಂತರ ಕೋಟಿ ರೂ. ಅನುದಾನ ಪಡೆಯುತ್ತಿದೆ.

    ಇದನ್ನೂ ಓದಿ ತಂದೆಯನ್ನೇ ಬರ್ಬರವಾಗಿ ಹತ್ಯೆಗೈದಿದ್ದ ಮೂವರು ಸಹೋದರಿಯರ ಬೆನ್ನಿಗೆ ನಿಂತ ಕೋರ್ಟ್​, ತನಿಖಾ ಸಮಿತಿ!

    ಮಹಾಮಾರಿ ಕರೊನಾದಿಂದ ತತ್ತರಿಸಿರುವ ಪಾಕಿಸ್ತಾನದಲ್ಲಿ 33 ಸಾವಿರ ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, 700ಕ್ಕೂ ಮಂದಿ ಬಲಿಯಾಗಿದ್ದಾರೆ. ಕರೊನಾ ವೈರಸ್​ ಬಿಕ್ಕಟ್ಟು ನಿಭಾಯಿಸಲು ಈ ದೇಶಕ್ಕೆ ಯುರೋಪಿಯನ್ ಒಕ್ಕೂಟ 163 ಮಿಲಿಯನ್ ಡಾಲರ್, ಯುಎಸ್​​ 8 ಮಿಲಿಯನ್ ಡಾಲರ್ ನೆರವು ನೀಡಿದೆ.

    ಪಾಕಿಸ್ತಾನ ಇನ್​ಸ್ಟಿಟ್ಯೂಟ್​ ಆಫ್ ಡೆವಲಪ್​ಮೆಂಟ್ ಎಕನಾಮಿಕ್ಸ್ ಪ್ರಕಾರ ಲಾಕ್​ಡೌನ್​ನಿಂದಾಗಿ ಕಳೆದ ಏಪ್ರಿಲ್​ನಲ್ಲಿ ಈ ದೇಶ ಸುಮಾರು 11 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದೆಯಂತೆ. ಇಂತಹ ದುಸ್ಥಿತಿಯಲ್ಲೂ ಅಲ್ಲಿನ ಸೇನೆ ಸ್ಯಾಲರಿ ಹೆಚ್ಚಳಕ್ಕೆ ಡಿಮಾಂಡ್​ ಮಾಡುತ್ತಿರುವುದು ಸರ್ಕಾರಕ್ಕೆ ‘ಬೆಂಕಿಯಿಂದ ಬಾಣಲೆಗೆ ಬಿದ್ದಂತೆ’.

    ಇದನ್ನೂ ಓದಿ 20ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಬೆಂಗಳೂರಿನಿಂದ ವಿಶಾಖಪಟ್ಟಣಂಗೆ ಕಾಲ್ನಡಿಗೆ, ಒಡಿಶಾಗೆ ಸೈಕಲ್ ಸವಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts