More

    700 ಕಿ.ಮೀ. ದೂರದ ಸ್ವಗ್ರಾಮಕ್ಕೆ ಗರ್ಭಿಣಿ ಪತ್ನಿ, ಮಗಳ ಹೊತ್ತು ಸಾಗಿದ್ದೇ ರೋಚಕ ಕಥೆ!

    ಭೋಪಾಲ್​: ಕರೊನಾ ಲಾಕ್​ಡೌನ್​ಗೆ ಸಿಲುಕಿದ್ದ ಲಕ್ಷಾಂತರ ವಲಸೆ ಕಾರ್ಮಿಕರ ಪೈಕಿ ಹಲವರು ಕಾಲ್ನಡಿಗೆಯಲ್ಲೇ ನೂರಾರು ಕಿ.ಲೋ. ದೂರದ ತಮ್ಮ ರಾಜ್ಯಗಳಿಗೆ ವಾಪಸ್​ ಹೋಗಿದ್ದಾರೆ. ಆ ಪೈಕಿ ಕೆಲವರು ಇನ್ನೂ ಮನೆ ಸೇರುವ ಸನಿಹದಲ್ಲಿದ್ದಾರೆ. ಇದೇ ರೀತಿ ಹುಟ್ಟೂರು ಸೇರಿಕೊಳ್ಳುವ ತವಕದಲ್ಲಿ ಕಾಲ್ನಡಿಗೆಯಲ್ಲಿ ಹೊರಟ ಯುವ ಕಾರ್ಮಿಕನೊಬ್ಬ ಗರ್ಭಿಣಿ ಪತ್ನಿ ಮತ್ತು ಮಗಳನ್ನು ನಡೆಸದಂತೆ ಮನೆ ಸೇರಿಸಿದ್ದೇ ಒಂದು ರೋಚಕ ಕಥೆ! ಈತ ಅವರನ್ನು ಕರೆತಂದ ಚಿತ್ರಣ ವೈರಲ್​ ಆಗಿದ್ದು, ಪ್ರಶಂಸೆಗಳ ಸುರಿಮಳೆ ಬರುತ್ತಿವೆ.

    ಇದನ್ನೂ ಓದಿ ಟಿವಿಗೇ ಅಕ್ಷತೆ ಹಾಕಿ ಮಗ-ಸೊಸೆಗೆ ಆಶೀರ್ವದಿಸಿದ ತಂದೆ-ತಾಯಿ!

    ಕೆಲಸ ಅರಸಿಕೊಂಡು ಹೈದರಾಬಾದ್​ಗೆ ಬಂದಿದ್ದ ಮಧ್ಯಪ್ರದೇಶ ಮೂಲದ ರಾಮು, ಪತ್ನಿ ಧನ್ವಂತ ಮತ್ತು ಮಗಳು ಅನುರಾಗಿಣಿ ಜತೆ ಅಲ್ಲೇ ವಾಸವಿದ್ದ. ಲಾಕ್​ಡೌನ್​ ಘೋಷಣೆ ಪರಿಣಾಮ ಅತ್ತ ಕೆಲಸವೂ ಇಲ್ಲದೆ, ಇತ್ತ ಹಣವೂ ಇಲ್ಲದೆ ಕಂಗೆಟ್ಟಿದ್ದ. ಕೊನೆಗೆ 700 ಕಿ.ಮೀ. ದೂರದಲ್ಲಿರುವ ಹುಟ್ಟೂರಿಗೆ ವಾಪಸ್​ ಹೋಗಲು ನಿರ್ಧರಿಸಿ ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಹೆಂಡತಿ ಜತೆ ಹೊರಟೇಬಿಟ್ಟ.

    700 ಕಿ.ಮೀ. ದೂರದ ಸ್ವಗ್ರಾಮಕ್ಕೆ ಗರ್ಭಿಣಿ ಪತ್ನಿ, ಮಗಳ ಹೊತ್ತು ಸಾಗಿದ್ದೇ ರೋಚಕ ಕಥೆ!ಗರ್ಭಿಣಿಯಾಗಿದ್ದ ಪತ್ನಿ ಹೆಚ್ಚು ದೂರ ನಡೆಯುವ ಸ್ಥಿತಿಯಲ್ಲಿರಲಿಲ್ಲ. ಇದನ್ನರಿತ ರಾಮು, ದಾರಿಯಲ್ಲಿ ಸಿಕ್ಕ ಮರದ ಕಟ್ಟಿಗೆಯಿಂದ ಚಿಕ್ಕ ಬಂಡಿ ಮಾಡಿ ಅದರ ಮೇಲೆ ಹೆಂಡತಿ ಮತ್ತು ಮಗಳನ್ನು ಕೂರಿಸಿ, ಬಂಡಿ ಎಳೆಯುತ್ತ ಊರಿನತ್ತ ಸಾಗಿದ. ಈ ವೇಳೆ ಅವರಿಗೆ ಸರಿಯಾಗಿ ಆಹಾರವೂ ಸಿಕ್ಕಿರಲಿಲ್ಲ. ಮಕ್ಕಳ ಆಟಿಕೆಯಂತಿರುವ ಮರದ ಬಂಡಿ ಮೇಲೆ ಕೂರಿಸಿಕೊಂಡು ನೂರಾರು ಕಿ.ಮೀ. ದೂರ ಎಳೆದುಕೊಂಡೇ ಬಂದ ಅವನ ಸಾಹಸ ಕಂಡ ಜನರು ಬೆರಗಾಗಿದ್ದಾರೆ.

    ಇದನ್ನೂ ಓದಿ ಕರೊನಾ ಗೆದ್ದ 113 ವರ್ಷದ ಅಜ್ಜಿ ..!

    ರಾಮು ಕುಟುಂಬ ಮಹಾರಾಷ್ಟ್ರದ ಗಡಿ ಮೂಲಕ ಮಧ್ಯಪ್ರದೇಶದ ಬಾಲಘಾಟ್‌ ಜಿಲ್ಲೆ ಪ್ರವೇಶಿಸುತ್ತಿದ್ದಂತೆ ಸ್ಥಳದಲ್ಲಿದ್ದ ಉಪ ವಿಭಾಗೀಯ ಅಧಿಕಾರಿ ನಿತೇಶ್ ಭಾರ್ಗವ ನೇತೃತ್ವದ ಪೊಲೀಸ್ ತಂಡ ಆ ಮೂವರಿಗೂ ಬಿಸ್ಕತ್​, ಊಟ, ನೀರು ನೀಡಿ ಉಪಚರಿಸಿತು. ರಾಮು ಮಗಳಿಗೆ ಹೊಸ ಚಪ್ಪಲಿ ಕೊಟ್ಟು ಮಾನವೀಯತೆ ಮರೆಯಿತು. ರಾಮು ಕುಟುಂಬ ಸ್ವಗ್ರಾಮಕ್ಕೆ ಮಂಗಳವಾರ ತಲುಪಿತು.

    “ರಾಮು, ಆತನ ಪತ್ನಿ, ಮಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದೇವೆ. ಬಾಲಘಾಟ್‌ನಲ್ಲಿರುವ ಅವರ ಗ್ರಾಮಕ್ಕೆ ವಾಹನದಲ್ಲಿ ಕಳುಹಿಸಿಕೊಟ್ಟೆವು. ಅವರೀಗ ಮನೆಯಲ್ಲೇ 14 ದಿನ ಕ್ವಾರಂಟೈನ್​ನಲ್ಲಿ ಇರಲಿದ್ದಾರೆ” ಎಂದು ನಿತೇಶ್ ಭಾರ್ಗವ ತಿಳಿಸಿದ್ದಾರೆ.

    ಗರ್ಭಿಣಿ ಪತ್ನಿ ಮತ್ತು ಪುಟ್ಟ ಮಗಳನ್ನು ಬಂಡಿ ಮೇಲೆ ಕರೆದೊಯ್ಯುತ್ತಿದ್ದದ್ದನ್ನು ಯಾರೋ ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ವೈರಲ್​ ಆಗಿದೆ.

    ಇದನ್ನೂ ಓದಿ ಐದು ಬಾಲಕಿಯರ ವಿರುದ್ಧ ಕಂಪ್ಲೇಂಟ್​ ಕೊಟ್ಟ ಎಂಟರ ಪೋರ! ಕಾರಣ ಕೇಳಿ ಪೊಲೀಸರು ತಬ್ಬಿಬ್ಬು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts