More

    ಒಂದೇ ಟೇಕ್​ನಲ್ಲಿ ಮೂಡಿಬಂದಿದೆ ಪಾರಿವಾಳ

    ಬೆಂಗಳೂರು: ಪಬ್ಲಿಕ್ ಟಾಯ್ಲೆಟ್ ಎನ್ನುವ ಕಿರುಚಿತ್ರ ನಿರ್ಮಿಸಿದ ಭಾನವಿ ಕ್ಯಾಪ್ಚರ್ ಸಂಸ್ಥೆ ಇದೀಗ ಪಾರಿವಾಳ ಎಂಬ ಆಲ್ಬಂ ವೀಡಿಯೋ ಸಾಂಗ್‍ನ್ನು ಮಾಡಿದೆ. ನೃತ್ಯ ನಿರ್ದೇಶಕ ಚಿನ್ನಿಪ್ರಕಾಶ್ ಅವರ ಶಿಷ್ಯ, ಮೂಲತ: ನೃತ್ಯ ಸಂಯೋಜಕರಾದ ರಾಮ್ ಕಿರಣ್ ಈ ಹಾಡಿನಲ್ಲಿ ಅಭಿನಯಿಸುವುದರ ಜೊತೆಗೆ ತಾವೇ ಕೊರಿಯೋಗ್ರಾಫ್ ಕೂಡ ಮಾಡಿದ್ದಾರೆ. ವಿಶೇಷವಾಗಿ ಈ ಹಾಡನ್ನು ಸಿಂಗಲ್ ಟೇಕ್‍ನಲ್ಲಿ ಕ್ಯಾಮೆರಾಮನ್ ಅಭಿಷೇಕ್ ಜಿ.ಕಾಸರಗೋಡು ಸೆರೆಹಿಡಿದಿದ್ದು, ಅಗಸ್ತ್ಯ ಸಂತೋಷ್ ಇದರ ಸಾಹಿತ್ಯ ರಚಿಸಿ ರಾಗಸಂಯೋಜನೆ ಮಾಡಿದ್ದಾರೆ.

    ಇದನ್ನೂ ಓದಿ: ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಸೋನಾಕ್ಷಿ ಸಿನ್ಹಾ !

    ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ಈ ಪಾರಿವಾಳದ ಹಾಡು ಬಿಡುಗಡೆಯಾಗಲಿದ್ದು, ಸದ್ಯ ಕನ್ನಡ ಸಾಂಗ್ ಮಾತ್ರ ಹೊರಬಂದಿದೆ. ಮುಂದಿನ ದಿನಗಳಲ್ಲಿ ಪ್ರತಿವಾರ ಒಂದೊಂದು ಭಾಷೆಯ ಹಾಡನ್ನು ರಿಲೀಸ್ ಮಾಡುವ ಯೋಜನೆಯನ್ನು ಈ ತಂಡ ಹಮ್ಮಿಕೊಂಡಿದೆ. ಇನ್ನು ಎಲ್ಲಾ ಛಾಷೆಯಲ್ಲೂ ಗಾಯಕ ಶಶಾಂಕ್ ಶೇಷಗಿರಿ ಅವರೇ ಹಾಡಿದ್ದಾರೆ.

    ನಾಯಕ ರಾಮ್‍ಕಿರಣ್ ಹಾಗೂ ನಾಯಕಿ ತೇಜಸ್ವಿನಿ ಶರ್ಮ ಅವರ ಅಭಿನಯವಿರುವ ಭಾನವಿ ಕ್ಯಾಪ್ಚರ್ ನಿರ್ಮಾಣದ ಈ ಹಾಡಿನ ಸಾಹಿತ್ಯದಲ್ಲಿ ಭಗ್ನಪ್ರೇಮಿಯೊಬ್ಬನ ಮನದ ವಿರಹವೇದನೆಯನ್ನು ಹೇಳಲು ಟ್ರೈ ಮಾಡಲಾಗಿದೆ. ಅರುಣ್ ಬಸವರಾಜ್ ಜೊತೆಗೆ ರೋಹಿತ್ ಕಾರ್ಯಕಾರಿ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.

    ಇದನ್ನೂ ಓದಿ: ಪೈರಸಿ ಮಾಡಿದರೆ ಘೋರ ಪರಿಣಾಮ; ರಾಬರ್ಟ್ ನಿರ್ಮಾಪಕ ಉಮಾಪತಿ ಎಚ್ಚರಿಕೆ

    ಹಿರಿಯ ನೃತ್ಯನಿರ್ದೇಶಕ ಚಿನ್ನಿಪ್ರಕಾಶ್ ಅವರು ಈ ವೀಡಿಯೋ ಆಲ್ಬಂ ಹಾಡನ್ನು ರೇಣುಕಾಂಬ ಥಿಯೇಟರಿನಲ್ಲಿ ಬಿಡುಗಡೆ ಮಾಡಿ ಶಿಷ್ಯನಿಗೆ ಶುಭ ಹಾರೈಸಿದರು. ನಂತರ ರಾಮ್‍ಕಿರಣ್ ಮಾತನಾಡಿ, ನಾವೆಲ್ಲ ಸೇರಿ ಏನಾದರೂ ಡಿಫರೆಂಟಾಗಿ ಟ್ರೈಮಾಡಬೇಕು ಎಂದು ಹೊರಟಾಗ ಈ ಕಾನ್ಸೆಪ್ಟ್ ಹೊಳೆಯಿತು, ಆಗಲೇ 6 ಚಿತ್ರಗಳಿಗೆ ಕ್ಯಾಮೆರಾವರ್ಕ್ ಮಾಡಿದ್ದ ಅಭಿಷೇಕ್, ವಿಭಿನ್ನ ಪ್ರಯತ್ನವಾಗಿ ಒನ್‍ಟೇಕ್‍ನಲ್ಲಿ ಈ ಸಾಂಗನ್ನು ಸೆರೆಹಿಡಿದಿದ್ದಾರೆ.

    ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಒಂದೇ ರಾತ್ರಿ ಈ ಹಾಡನ್ನು ಚಿತ್ರೀಕರಿಸಿದ್ದೇವೆ ಎಂದು ಹೇಳಿಕೊಂಡರು.
    ಕೊನೆಯಲ್ಲಿ ಮಾತನಾಡಿದ ಚಿನ್ನಿಪ್ರಕಾಶ್, ಯುವರತ್ನ ಸಾಂಗ್ ಮಾಡುವಾಗ ಕಿರಣ್ ಈ ಹಾಡನ್ನು ಕೇಳಿಸಿದ, ಸಖತ್ತಾಗಿತ್ತು, ನಾನೇ ಕೊರಿಯೋಗ್ರಾಫ್ ಮಾಡಬೇಕು ಅನ್ನಿಸುವಷ್ಟು ಆಕರ್ಷಕವಾಗಿತ್ತು, ನಾನಾಗಿದ್ರೆ ಈ ಹಾಡನ್ನು 4-5 ದಿನ ಮಾಡ್ತಿದ್ದೆ, ಆದರೆ ಈತನ ಆಲೋಚನೆ ಕಂಡು ಆಶ್ಚರ್ಯವಾಯ್ತು, ಅಲ್ಲಿ ನಾನಿದ್ರೂ ಇಷ್ಟು ಚೆನ್ನಾಗಿ ಮಾಡಲು ಆಗ್ತಿರಲಿಲ್ಲ, ನಾನೆಲ್ಲೇ ಹೋದರೂ ರಾಮ್‍ಕಿರಣ್ ನನ್ನ ಶಿಷ್ಯ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ, ಈ ಹಾಡು ಮಿಲಿಯನ್​ಗಟ್ಟಲೆ ವೀಕ್ಷಣೆಯಾಗಿ ಯಶಸ್ಸು ಗಳಿಸಲಿ ಎಂದು ಹಾರೈಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts