More

    ಬರೋಬ್ಬರಿ 140 ವರ್ಷದ ಬಳಿಕ ಅಪರೂಪದ ಪಕ್ಷಿಯ ಮರುಶೋಧನೆ! ವಿಜ್ಞಾನಿಗಳ ನಿರಂತರ ಪ್ರಯತ್ನದ ಫಲವಿದು

    ನವದೆಹಲಿ: ಅಳಿದು ಹೋಗಿದೆ ಎಂದು ನಂಬಲಾಗಿದ್ದ ಕಪ್ಪು ಮತ್ತು ಕಂದು ಬಣ್ಣ ಮಿಶ್ರಿತ ಪಾರಿವಾಳವನ್ನು 140 ವರ್ಷಗಳ ಬಳಿಕ ಮರು ಸಂಶೋಧಿಸಲಾಗಿದೆ. ಇದು ವಿಜ್ಞಾನಿಗಳ ನಿರಂತರ ಪ್ರಯತ್ನದ ಫಲವಾಗಿದೆ.

    ಒಂದು ತಿಂಗಳ ತೀವ್ರ ಹುಡುಕಾಟದ ಬಳಿಕ ಸೆಪ್ಟೆಂಬರ್‌ನಲ್ಲಿ ಪಪುವಾ ನ್ಯೂ ಗಿನಿಯಾದಲ್ಲಿರುವ ಸಣ್ಣ ದ್ವೀಪದ ಕಾಡಿನಲ್ಲಿ ಈ ಅಪರೂಪದ ಪ್ರಭೇದಗಳ ಚಲನವಲನವನ್ನು ಅಧ್ಯಯನ ತಂಡವು ಕಂಡುಹಿಡಿಯಲು ಸಾಧ್ಯವಾಗಿದೆ. ಸುಮಾರು 20ಕ್ಕೂ ಹೆಚ್ಚು ಕ್ಯಾಮೆರಾ ಟ್ರ್ಯಾಪ್‌ಗಳನ್ನು ಸ್ಥಾಪಿಸಿ, ಸ್ಥಳೀಯರೊಂದಿಗೆ ನಿಯಮಿತವಾಗಿ ಸಂದರ್ಶನಗಳನ್ನು ನಡೆಸುವ ಮೂಲಕ ಸಾಕಷ್ಟು ಶ್ರಮವಹಿಸಿ ಪಾರಿವಾಳವನ್ನು ಪತ್ತೆಹಚ್ಚಲಾಯಿತು.

    ಅಪರೂಪದ ಪಕ್ಷಿಯ ವಿಡಿಯೋವನ್ನು ರೀ ವೈಲ್ಡ್​ ಹೆಸರಿನ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಲಾಗಿದ್ದು, ಕಪ್ಪು ನ್ಯಾಪ್ಡ್ ಫೆಸೆಂಟ್ ಪಾರಿವಾಳವನ್ನು ಹುಡುಕುವ ಭಾರಿ ದಂಡಯಾತ್ರೆಯ ಅಂತಿಮ ಕ್ಷಣಗಳಲ್ಲಿ ಕ್ಯಾಮೆರಾ ಟ್ರ್ಯಾಪ್‌ಗಳು ಕೊನೆಗೂ ಪಕ್ಷಿಯ ಫೋಟೋಗಳು ಮತ್ತು ವಿಡಿಯೋವನ್ನು ಸೆರೆಹಿಡಿದಿವೆ ಎಂದು ವಿಡಿಯೋ ಕುರಿತು ಬರೆಯಲಾಗಿದೆ. 140 ವರ್ಷಗಳ ಬಳಿಕ ಕೊನೆಗೂ ಅಪರೂಪದ ಪಕ್ಷಿ ಜಗತ್ತಿಗೆ ಮರು ಪರಿಚಯವಾಗಿದೆ.

    ಪುರಾಣದಲ್ಲಿ ಬರುವಂತಹ ಕೊಂಬುಳ್ಳು ಕುದುರೆಯನ್ನು ಪತ್ತೆ ಹಚ್ಚುವಲ್ಲಿ ಹೆಸರು ಮಾಡಿರುವ ಜಾನ್​ ಮಿಟ್ಟರಮಿಯರ್ ಈ ತಂಡದ ಸಹ ನಾಯಕರಾಗಿದ್ದರು. ಬೃಹತ್ ಕಾಡಿನಲ್ಲಿ ವಾಸಿಸುವ ಈ ಪಾರಿವಾಳವನ್ನು 2019ರಲ್ಲಿ ಮೂರು ಪ್ರತ್ಯೇಕ ಸಂದರ್ಭಗಳಲ್ಲಿ ಹುಡುಕಲಾಯಿತು, ಆದರೆ ಈ ಅಸಾಮಾನ್ಯ ಜಾತಿಯ ಯಾವುದೇ ಪುರಾವೆಗಳು ಪತ್ತೆಯಾಗಿರಲಿಲ್ಲ.

    ಆದರೆ, ಈ ವರ್ಷ ಸಂಶೋಧಕರ ತಂಡವು ಸ್ಪಷ್ಟವಾಗಿ ಕಿಲ್ಕೆರಾನ್ ಪರ್ವತದ ಪಶ್ಚಿಮ ಇಳಿಜಾರಿನಲ್ಲಿರುವ ಸಮುದಾಯಗಳನ್ನು ತಲುಪಿ, ಅಲ್ಲಿ ಅವರು ಫೆಸೆಂಟ್ ಪಾರಿವಾಳವನ್ನು ಗುರುತಿಸಿದ ಬೇಟೆಗಾರರನ್ನು ಭೇಟಿಯಾಗಲು ಪ್ರಾರಂಭಿಸಿದರು. ಬೇಟೆಗಾರರಲ್ಲಿ ಒಬ್ಬ ತಂಡಕ್ಕೆ ಉತ್ತಮ ಸಲಹೆಯನ್ನು ನೀಡಿದರು. ಎತ್ತರದ ಬೆಟ್ಟಗಳು ಮತ್ತು ಕಣಿವೆಗಳ ಪ್ರದೇಶವನ್ನು ನೋಡಬೇಕೆಂದು ಸೂಚಿಸಿದರು. ಅಲ್ಲಿ ಅವರು ಹಕ್ಕಿಯ ವಿಶಿಷ್ಟವಾದ ಕೂಗು ಕೇಳಿದ್ದಾಗಿ ಹೇಳಿದರು. ಬಳಿಕ ಸಂಶೋಧಕರು ಆ ಪ್ರದೇಶದಲ್ಲಿ ಕ್ಯಾಮೆರಾಗಳನ್ನು ಇರಿಸಿದರು ಮತ್ತು ದ್ವೀಪದಿಂದ ಹೊರಡುವ ಮೊದಲು ಕೊನೆಯ ದಿನಗಳಲ್ಲಿ ಪಕ್ಷಿ ಚಿತ್ರವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು.

    ಈ ಅಪರೂಪದ ಪಕ್ಷಿಯ ಜಾತಿಯ ಬಗ್ಗೆ ಮಾಹಿತಿಯ ಕೊರತೆಯಿದ್ದರೂ, ದ್ವೀಪದಲ್ಲಿ ಕೆಲವೇ ಕೆಲವು ಪಕ್ಷಿಗಳು ಉಳಿದಿರುವ ಸಾಧ್ಯತೆಯಿದೆ ಎಂದು ತಜ್ಞರು ತೀರ್ಮಾನಿಸಿದ್ದಾರೆ. ಅಳಿವಿನಂಚಿನಲ್ಲಿರುವ ಪ್ರಭೇದಗಳ ಕೊನೆಯ ಸದಸ್ಯರನ್ನು ಸಂರಕ್ಷಿಸಲು ಅವರು ಪ್ರಯಾಣದ ಸಮಯದಲ್ಲಿ ಪಡೆದ ಡೇಟಾವು ಉಪಯುಕ್ತವಾಗಿದೆ ಎಂದು ತಜ್ಞರು ಆಶಾವಾದ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪಕ್ಷಿಗಳ ಅಳಿವನ್ನು ತಡೆಗಟ್ಟುವ ವಿಧಾನವನ್ನು ಕಂಡುಹಿಡಿಯುವ ಬಯಕೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ರೇಷನ್​ ಕಾರ್ಡ್​ನಲ್ಲಿ ಕುತ್ತಾ ಅಂತಾ ಬರೆದಿದ್ದಕ್ಕೆ ನಾಯಿಯಂತೆ ಬೊಗಳಿ ಅಧಿಕಾರಿಯನ್ನು ಪೇಚಿಗೆ ಸಿಲುಕಿಸಿದ ವ್ಯಕ್ತಿ!

    ಎಚ್ಚರಿಕೆಯ ನಿರ್ಲಕ್ಷ್ಯ, ಅಪಾಯಕ್ಕೆ ಆಹ್ವಾನ: ಆ ಕ್ಷಣ…

    PHOTO GALLERY | ವಿಜಯಾನಂದ ಚಿತ್ರದ ಟ್ರೇಲರ್ ರಿಲೀಸ್ ಸಮಾರಂಭದ ಸಂಭ್ರಮದ ಕ್ಷಣಗಳು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts