More

    ರೇಷನ್​ ಕಾರ್ಡ್​ನಲ್ಲಿ ಕುತ್ತಾ ಅಂತಾ ಬರೆದಿದ್ದಕ್ಕೆ ನಾಯಿಯಂತೆ ಬೊಗಳಿ ಅಧಿಕಾರಿಯನ್ನು ಪೇಚಿಗೆ ಸಿಲುಕಿಸಿದ ವ್ಯಕ್ತಿ!

    ಕೋಲ್ಕತ: ರೇಷನ್​ ಕಾರ್ಡ್​ನಲ್ಲಿ “ಕುತ್ತಾ” (ಹಿಂದಿಯಲ್ಲಿ ನಾಯಿ ಎಂದರ್ಥ) ಅಂತಾ ತಪ್ಪಾಗಿ ಮುದ್ರಿಸಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ನಾಯಿಯಂತೆ ಬೊಗಳಿ ಪ್ರತಿಭಟನೆ ನಡೆಸಿರುವ ಘಟನೆ ಪಶ್ಚಿಮ ಬಂಗಾಳದ ಬಂಕುರಾದಲ್ಲಿ ನಡೆದಿದೆ.

    ಬಂಗಾಳದ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಕಾರಿನ ಕಿಟಕಿ ಬಳಿ ನಿಂತು ನಾಯಿಯಂತೆ ಬೊಗಳುತ್ತಾ ದಾಖಲೆಗಳನ್ನು ಅಧಿಕಾರಿಗೆ ತೊರಿಸಿದ್ದಾನೆ. ದಾಖಲೆಗಳನ್ನು ನೋಡಿ, ಅದನ್ನು ಸರಿಪಡಿಸುವಂತೆ ಸಿಬ್ಬಂದಿಗೆ ಸೂಚನೆ ನೀಡುವವರೆಗೂ ಆ ವ್ಯಕ್ತಿ ನಾಯಿಯಂತೆಯೇ ಬೊಗಳಿ ಗಮನ ಸೆಳೆದಿದ್ದಾನೆ.

    ವ್ಯಕ್ತಿಯ ಹೆಸರನ್ನು ತಪ್ಪಾಗಿ ಮುದ್ರಿಸಿರುವ ಇದೇ ಮೊದಲೇನಲ್ಲ. ಈ ಹಿಂದೆ ಒಂದಲ್ಲ, ಎರಡಲ್ಲ ಮೂರು ಬಾರಿ ತಪ್ಪಾಗಿ ಬರೆದಿದ್ದಾರೆ. ಆದರೆ, ಈ ಬಾರಿ ಶ್ರೀಕಂಠಿ ಕುಮಾರ್​ ದತ್ತ ಎಂದು ಬರೆಯಲು ಶ್ರೀಕಂಠಿ ಕುಮಾರ್​ ಕುತ್ತಾ ಎಂದು ಬರೆದಿದ್ದಾರೆ. ಕುತ್ತಾ ಅಂದರೆ ನಾಯಿ ಎಂದರ್ಥ. ಈ ಹಿಂದೆ ಎರಡು ಮೂರು ಬಾರಿ ಗಮನಕ್ಕೆ ತಂದು ಹೆಸರು ಸರಿಪಡಿಸಿದರೂ ಮತ್ತೆ ಅದೇ ತಪ್ಪು ಮರುಕಳಿಸಿರುವ ಕಾರಣ ಈ ಬಾರಿ ವಿಭಿನ್ನವಾಗಿ ಪ್ರತಿಭಟನೆ ಮಾಡುವ ಮೂಲಕ ಅಧಿಕಾರಿಗಳ ಗಮನ ಸೆಳೆದಿದ್ದಾನೆ.

    ನಾಯಿಯಂತೆ ಬೊಗಳಿ ಪ್ರತಿಭಟಿಸಿದ್ದಕ್ಕೆ ಶೀಘ್ರವೇ ಬಂಕುರಾ ಜಿಲ್ಲಾ ಆಡಳಿತದ ಅಧಿಕಾರಿಗಳ ಸ್ಪಂದನೆ ದೊರಕಿದೆ. ಈ ಬಗ್ಗೆ ಮಾತನಾಡಿದ ಶ್ರೀಕಂಠಿ, ಮೊದಲ ಬಾರಿಗೆ ನನ್ನ ಹೆಸರನ್ನು ಶ್ರೀಕಂಠಿ ಮೊಂಡಲ್​ ಎಂದು ಮುದ್ರಿಸಿದ್ದರು. ಆದರೆ, ನನ್ನ ಹೆಸರು ಮೊಂಡಲ್​ ಅಲ್ಲ. ನಾನು ದುವಾರೆ ಸರ್ಕಾರ್ (ಪಡಿತರ ಅಂಗಡಿ) ಬಳಿ ಹೋಗಿ ಸರಿಪಡಿಸಲು ಅರ್ಜಿ ಸಲ್ಲಿಸಿದೆ. ಆಗ ಅವರು ಶ್ರೀಕಾಂತ್ ಕುಮಾರ್ ದತ್ತ ಎಂಬುದಕ್ಕೆ ಬದಲಾಗಿ ಶ್ರೀಕಾಂತೋ ದತ್ತ ಎಂದು ನನ್ನ ಹೆಸರನ್ನು ಮಾಡಿದರು. ಇದಾದ ಬಳಿಕವೂ ಮತ್ತೆ ದುವಾರೆ ಸರ್ಕಾರ್ ಕ್ಯಾಂಪ್​ಗೆ ಅರ್ಜಿ ಹಾಕಿದ್ದೆ. 11 ರಂದು ಮತ್ತೊಮ್ಮೆ ಅರ್ಜಿ ಹಾಕಿ ಡೌನ್​ಲೋಡ್ ಮಾಡಿಕೊಂಡಾಗ ನನ್ನ ಹೆಸರು ಶ್ರೀಕಂಠಿ ಕುಮಾರ್ ಕುತ್ತ ಎಂದು ಬದಲಾಗಿರುವುದು ಗಮನಕ್ಕೆ ಬಂದಿದೆ. ಇದನ್ನು ನೋಡಿದಾಗ ನನಗೆ ಮಾನಸಿಕ ಕಿರುಕುಳವಾಯಿತು. ನಾನು ನಿನ್ನೆ ಮತ್ತೆ ದುವಾರೆ ಸರ್ಕಾರ್ ಶಿಬಿರಕ್ಕೆ ಹೋಗಿದ್ದೆ ಎಂದು ಅವರು ಹೇಳಿದರು.

    ಕ್ಯಾಂಪ್​ನಲ್ಲಿ ಹಿರಿಯ ಅಧಿಕಾರಿಯನ್ನು ನೋಡಿ, ಅವರತ್ತ ಓಡಿದೆ. ಬಳಿಕ ಅವರಿಗೆ ನನ್ನ ಪಡಿತರ ಚೀಟಿ ತೋರಿಸಿ, ಅದನ್ನು ಓದಲು ಕೇಳಿದೆ. ಆದರೆ, ಜಂಟಿ ಬಿಡಿಒ (ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್) ನನ್ನ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಅವರು ಓಡಿಹೋದರು. ಅವರು ಯಾಕೆ ಓಡಿದರು? ಏಕೆ ಹೆದರಿದರು? ಎಷ್ಟು ಬಾರಿ ನನ್ನಂತಹ ಸಾಮಾನ್ಯ ಮನುಷ್ಯ ಪಡಿತರ ಶಿಬಿರಕ್ಕೆ ಹೋಗುತ್ತಾನೆ? ಇಲ್ಲಿಗೆ ಬರಲು ನಾವು ಒಂದು ದಿನ ಕೆಲಸವನ್ನು ನಿಲ್ಲಿಸಬೇಕು ಎಂದು ದತ್ತ ಹೇಳಿದರು.

    ಕೊನೆಗೆ ನಾಯಿಯಂತೆ ಬೊಗಳಿ ಪ್ರತಿಭಟಿಸಲು ಆರಂಭಿಸಿದಾಗ ಆದಷ್ಟು ಬೇಗ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು ಎಂದು ದತ್ತಾ ತಿಳಿಸಿದ್ದಾರೆ. (ಏಜೆನ್ಸೀಸ್​)

    ಉತ್ತಮ ಜೀವನಶೈಲಿ, ಆಹಾರ ಪದ್ಧತಿಯಿಂದ ಮೂಲವ್ಯಾಧಿ ದೂರ; ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಕ್ಯಾನ್ಸರ್ ಅಪಾಯ

    ನೋ ಇಂಟರ್ವಲ್ ನಯನತಾರಾ; ಹೆದರಿಸಲು ಬರುತ್ತಿದ್ದಾರೆ ಲೇಡಿ ಸೂಪರ್​ಸ್ಟಾರ್

    3 ಮಕ್ಕಳ ತಾಯಿಯ ಮೋಹಕ್ಕೆ ಸಿಲುಕಿ ಇಸ್ಲಾಂಗೆ ಮತಾಂತರ ಆದ ಶರಣಪ್ಪ! ಗಂಡನಿಗಾಗಿ ಮೊದಲ ಪತ್ನಿ ಕಣ್ಣೀರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts