More

    ‘ಧರಣಿ ಕುಳಿತಿರುವ ಉಪನ್ಯಾಸಕರೇ… ಆತಂಕ ಬೇಡ’- ಆಸ್ಪತ್ರೆಯಿಂದಲೇ ಶಿಕ್ಷಣ ಸಚಿವರ ಅಭಯ

    ಬೆಂಗಳೂರು: ಪಿಯು ಉಪನ್ಯಾಸಕರಾಗಿ ಆಯ್ಕೆಯಾಗಿದ್ದು, ಕೌನ್ಸೆಲಿಂಗ್ ಮುಗಿಸಿರುವ ಉಪನ್ಯಾಸಕರು ನೇಮಕ ಆದೇಶಕ್ಕೆ ಆಗ್ರಹಿಸಿ ಧರಣಿ ಕುಳಿತಿದ್ದಾರೆ. ಈ ವಿಚಾರ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಗಮನಕ್ಕೆ ಬಂದಿದ್ದು, ಅದಕ್ಕೆ ಇಂದು ಫೇಸ್​ಬುಕ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

    ಆತಂಕಪಡುವ_ಅಗತ್ಯವಿಲ್ಲ.‌

    ಯಾವುದೇ ಉಪನ್ಯಾಸಕರ ಹುದ್ದೆಗಳಿಗೆ ತೊಂದರೆಯಾಗದಂತೆ ಅಗತ್ಯ ತಿದ್ದುಪಡಿ ಬೇಕಾದರೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸುತ್ತಿದ್ದೇನೆ. ಯಾವುದೇ ಉಪನ್ಯಾಸಕರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. 

    ಅವರ ಫೇಸ್​ ಬುಕ್ ಅಪ್ಡೇಟ್​ನಲ್ಲಿ ಅವರು ಹೇಳಿರುವುದು ಇಷ್ಟು- ” ಪಿಯುಸಿ ಉಪನ್ಯಾಸಕರಾಗಿ ಆಯ್ಕೆಗೊಂಡಿರುವ ಮತ್ತು ಕೌನ್ಸೆಲಿಂಗ್ ಸಹ ಪೂರ್ಣವಾಗಿರುವ ಉಪನ್ಯಾಸಕರು ನೇಮಕಾತಿ ಆದೇಶಕ್ಕಾಗಿ ಧರಣಿ ಕೂತಿರುವ ವಿಚಾರ ನನಗೆ ತಿಳಿದುಬಂದಿದೆ. ನಾನು ಆಸ್ಪತ್ರೆಯಲ್ಲಿ ದಾಖಲಾಗಿರುವುದರಿಂದ ಈ ಮೂಲಕ ಕೆಲವು ವಿಚಾರಗಳನ್ನು ಸ್ಪಷ್ಟಗೊಳಿಸಲು ಇಚ್ಚಿಸುತ್ತೇನೆ.

    ಇದನ್ನೂ ಓದಿ: ಸರ್ಕಾರಿ ಸಂಪನ್ಮೂಲ ದುರುಪಯೋಗದ ಆರೋಪ: ಇಮ್ರಾನ್ ಖಾನ್​ಗೆ​ ಸುಪ್ರೀಂ ನೋಟಿಸ್ !

    2019 ಆಗಸ್ಟ್ 21 ರಂದು, ಅಂದರೆ ನಾನು ಪ್ರಮಾಣವಚನ ಸ್ವೀಕರಿಸಿದ ಮಾರನೆಯದಿನ (ಆದರೆ ಇನ್ನೂ ಶಿಕ್ಷಣ ಇಲಾಖೆಯ ಜವಾಬ್ದಾರಿಯನ್ನು ನನಗೆ ನೀಡುವ ಮುನ್ನವೇ) ನಾನು 2015ರಿಂದ ವಿಳಂಬವಾಗುತ್ತಿದ್ದ ಈ ಉಪನ್ಯಾಸಕರ ಪರೀಕ್ಷೆ ಫಲಿತಾಂಶವನ್ನು ಪ್ರಕಟ ಮಾಡುವಂತೆ ಕ್ರಮ ತೆಗೆದುಕೊಂಡ ನಂತರ ಈ ವಿಚಾರ ಅನೇಕ ಅಡೆತಡೆಗಳನ್ನು ಎದುರಿಸಿತು.

    ಇದನ್ನೂ ಓದಿ: ವರ್ಚುವಲ್ ನ್ಯಾಯಾಂಗ ವ್ಯವಸ್ಥೆ ಅನಿವಾರ್ಯ: ಸಜ್ಜನ್ ಪೂವಯ್ಯ ಅವರ ಲಾ & ಆರ್ಡರ್ ಅಂಕಣ

    ನನ್ನ ಪ್ರತಿ ಪ್ರಯತ್ನ ಈ ಎಲ್ಲಾ ನೂತನ ಉಪನ್ಯಾಸಕರಿಗೆ ತಿಳಿದಿದೆ. ಆರ್ಥಿಕ ಇಲಾಖೆಯ ನಿರ್ಬಂಧ ಇದ್ದರೂ ಸಹ‌ ಇವರೆಲ್ಲರಿಗೂ ಕೌನ್ಸೆಲಿಂಗ್ ಪ್ರಕ್ರಿಯೆ ಸಹ ಪೂರ್ಣಗೊಳಿಸಲಾಗಿದೆ. ಈಗ ಕಾಲೇಜುಗಳು ಪ್ರಾರಂಭವಾದ ತಕ್ಷಣ ನೇಮಕಾತಿ ಆದೇಶ ಕೊಡಲಾಗುವುದು ಎಂದು ಈ ಎಲ್ಲಾ ನೂತನ ಉಪನ್ಯಾಸಕರುಗಳಿಗೆ ಮುಂಚೆಯೇ ತಿಳಿಸಲಾಗಿತ್ತು.‌ ಉಪನ್ಯಾಸಕರಾಗಿ ಆಯ್ಕೆಯಾಗಿ ಒಂದು ವರ್ಷದ ಒಳಗೆ ನೇಮಕಾತಿ ಆದೇಶ ದೊರೆಯದಿದ್ದರೆ ಆ ಆಯ್ಕೆ ಪಟ್ಟಿ ರದ್ದಾಗುತ್ತದೆ ಎಂಬ ಆತಂಕ ಈ ನೂತನ ಉಪನ್ಯಾಸಕರಿಗಿದೆ”.

    ನೌಕರರಿಗೆ ದಸರಾ ಗಿಫ್ಟ್: ಕೇಂದ್ರ ಸಿಬ್ಬಂದಿಗೆ ಎಲ್​ಟಿಸಿ ನಗದು ವೋಚರ್​, 10,000 ರೂಪಾಯಿ ಅಡ್ವಾನ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts