More

    ಮುಂಬೈನ ಅತಿದುಬಾರಿ ಖರೀದಿ ಎನಿಸಿದ ಈ ಫ್ಲ್ಯಾಟ್​ಗಳ ಸ್ಟ್ಯಾಂಪ್​ ಡ್ಯೂಟಿ ಎಷ್ಟು ಗೊತ್ತಾ?

    ಮುಂಬೈ: ರಾಷ್ಟ್ರದ ವಾಣಿಜ್ಯ ರಾಜಧಾನಿಯಲ್ಲಿ ಅತ್ಯಧಿಕ ಕರೊನಾ ಪ್ರಕರಣಗಳು ವರದಿಯಾಗುತ್ತಿವೆ. ಹೀಗಿರುವಾಗ ಅಲ್ಲಿ ರಿಯಲ್​ ಎಸ್ಟೇಟ್​ ಉದ್ಯಮ ಪೂರಾ ನೆಲಕಚ್ಚಿದ್ದು, ಫ್ಲ್ಯಾಟ್​ಗಳ ಬೆಲೆ ಕಡಿಮೆಯಾಗಿದೆ ಎಂದು ಭಾವಿಸಿದ್ದರೆ ಅದು ತಪ್ಪು. ಏಕೆಂದರೆ, ಈ ಕೈಗಾರಿಕೋದ್ಯಮಿ 100 ಕೋಟಿ ರೂ. ಪಾವತಿಸಿ ಎರಡು ಐಷಾರಾಮಿ ಫ್ಲ್ಯಾಟ್​ಗಳನ್ನು ಖರೀದಿಸಿದ್ದಾರೆ.

    ಯಾರು ಆ ಕೈಗಾರಿಕೋದ್ಯಮಿ? ಇವರು ಬಜಾಜ್​ ಕಂಪನಿಯ ಮಾಲೀಕ ರಾಹುಲ್​ ಬಜಾಜ್​ ಅವರ ಸಹೋದರ ಸಂಬಂಧಿ. ಹೆಸರು ಅನುರಾಗ್​ ಜೈನ್​. ಇವರು ಎಂಡ್ಯೂರೆನ್ಸ್​ ಟೆಕ್ನಾಲಜೀಸ್​ ಎಂಬ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಇವರು ಕೂಡ ದ್ಚಿಚಕ್ತ ಮತ್ತು ತ್ರಿಚಕ್ರ ಅಲ್ಲದೆ ಕಾರುಗಳ ಬಿಡಿಭಾಗಗಳನ್ನು ತಯಾರಿಸಿ, ಮಾರಾಟ ಮಾಡುತ್ತಾರೆ. ಭಾರತದಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರವಾಹನಗಳ ಬಿಡಿಭಾಗಗಳನ್ನು ತಯಾರಿಸಿ ಮಾರಾಟ ಮಾಡುವ ಇವರು, ಯುರೋಪ್​ನಲ್ಲಿ ಕಾರುಗಳ ಬಿಡಿಭಾಗಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ.

    ಮುಂಬೈನ ಪ್ರತಿಷ್ಠಿತ ಬಡಾವಣೆಗಳ ಪೈಕಿ ಒಂದೆನಿಸಿರುವ ಕಾರ್ಮಿಕೈಲ್​ ರಸ್ತೆಯಲ್ಲಿರುವ ಎರಡು ಐಷಾರಾಮಿ ಫ್ಲ್ಯಾಟ್​ಗಳನ್ನು 100 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. ಅಂದರೆ ಚದರಡಿಗೆ 1.57 ಲಕ್ಷ ರೂ. ಪಾವತಿಸಿದ್ದಾರೆ. ಇವುಗಳ ನೋಂದಣಿಗಾಗಿ ಅವರು ಪಾವತಿಸಿರುವ ಸ್ಟ್ಯಾಂಪ್​ ಡ್ಯೂಟಿ 5 ಕೋಟಿ ರೂಪಾಯಿ ಆಗಿದೆ. ಈ ವಹಿವಾಟು 2020ನೇ ಸಾಲಿನಲ್ಲಿ ಮುಂಬೈನಲ್ಲಿ ನಡೆದಿರುವ ಭಾರಿ ಮೊತ್ತದ ರಿಯಲ್​ ಎಸ್ಟೇಟ್​ ವಹಿವಾಟು ಎನಿಸಿಕೊಂಡಿದೆ.

    ಇದನ್ನೂ ಓದಿ: ಇದೊಂದು ಷಡ್ಯಂತ್ರ: ಡ್ರೋನ್​ ಪ್ರತಾಪ್​, ಕೆರೆ ಕಾಮೇಗೌಡರ ಬೆಂಬಲಕ್ಕೆ ನಿಂತವರ‍್ಯಾರು?

    ಏನೇನು ಇದೆ ಫ್ಲ್ಯಾಟ್​ನಲ್ಲಿ?: ಎರಡೂ ಫ್ಲ್ಯಾಟ್​ಗಳು ಸೇರಿ ಒಟ್ಟು 6,371 ಚದರಡಿಯಷ್ಟು ವಿಶಾಲವಾದ ಐಷಾರಾಮಿ ಮನೆಗಳು ಸಿಗಲಿವೆ. ಒಟ್ಟು 8 ಕಾರುಗಳ ಪಾರ್ಕಿಂಗ್​ ಸೌಲಭ್ಯ ದೊರೆಯಲಿದೆ.

    ಮೂಲಬೆಲೆ 46.43 ಕೋಟಿ ರೂ.: ಈ ಎರಡು ಫ್ಲ್ಯಾಟ್​ಗಳ ಮೂಲ ಬೆಲೆ 46.43 ಕೋಟಿ ರೂಪಾಯಿ ಆಗಿತ್ತು. ಆದರೆ, ಅನುರಾಗ್​ ಅವರು ಅಂದಾಜು 4 ಕೋಟಿ ರೂ.ನಂತೆ ಒಟ್ಟು 8 ಕೋಟಿ ರೂ. ಹೆಚ್ಚುವರಿಯಾಗಿ ಪಾವತಿಸಿ ಈ ಫ್ಲ್ಯಾಟ್​ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಮತ್ತೊಬ್ಬ ಕೈಗಾರಿಕೋದ್ಯಮಿ ಪ್ರತೀಕ್​ ಅಗರ್​ವಾಲ್​ ಎಂಬುವರು ಸಮುದ್ರ ಮಹಲ್​ನಲ್ಲಿ ಚದರಡಿಗೆ 1.12 ಲಕ್ಷ ರೂ.ನಂತೆ ಪಾವತಿಸಿ ಫ್ಲ್ಯಾಟ್​ ಖರೀದಿಸಿದ್ದರು. ಅನುರಾಗ್​ ಅವರ ಈ ಖರೀದಿಗೂ ಮುನ್ನ ಇದುವೇ ಮುಂಬೈನ ಅತ್ಯಂತ ದುಬಾರಿ ರಿಯಲ್​ ಎಸ್ಟೇಟ್​ ವಹಿವಾಟು ಎನಿಸಿಕೊಂಡಿತ್ತು.

    ಈ ಬಾರ್​​ನಲ್ಲಿ ಎಣ್ಣೆಗಾಗಿ ಮುಗಿಬಿದ್ದರೆ ಜೀವಕ್ಕೇ ಅಪಾಯ; ಇದು ಮಾಲೀಕನ ಡೆಡ್ಲಿ ಐಡಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts