More

    ಇದೊಂದು ಷಡ್ಯಂತ್ರ: ಡ್ರೋನ್​ ಪ್ರತಾಪ್​, ಕೆರೆ ಕಾಮೇಗೌಡರ ಬೆಂಬಲಕ್ಕೆ ನಿಂತವರ‍್ಯಾರು?

    ಬೆಂಗಳೂರು: ರಾಜ್ಯದ ಜನರ ನಂಬಿಕೆ ಗಳಿಸಿದ್ದ ಡ್ರೋನ್​ ಪ್ರತಾಪ್​ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಂಸೆ ಗಿಟ್ಟಿಸಿರುವ ಕೆರೆ ಕಾಮೇಗೌಡರ ವಿರುದ್ಧ ಸಾಕಷ್ಟು ವಿರೋಧಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಡ್ರೋನ್​ ಪ್ರತಾಪ್​ ಫ್ಯಾನ್ಸ್​ ಕ್ಲಬ್ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದೆ.

    ಪ್ರತಾಪ್​ ಹಾಗೂ ಕೆರೆ ಕಾಮೇಗೌಡರು ಮೂಲತಃ ಮಂಡ್ಯ ಜಿಲ್ಲೆಯವರು. ಹೀಗಾಗಿ ನಮ್ಮ ಜಿಲ್ಲೆಯವರನ್ನು ವ್ಯವಸ್ಥಿತವಾಗಿ ತುಳಿಯುವ ಷಡ್ಯಂತ್ರ ನಡೆಯುತ್ತಿದೆ ಎಂದು ಡ್ರೋನ್​ ಪ್ರತಾಪ್ ಫ್ಯಾನ್ಸ್​ ಕ್ಲಬ್​ ಫೇಸ್​ಬುಕ್​ ಪೇಜ್​ನಲ್ಲಿ ಆಕ್ರೋಶ ಹೊರಹಾಕಲಾಗಿದೆ. ಇನ್ನು ಪ್ರತಾಪ್​ ಪರವಾಗಿ ಸಾಕಷ್ಟು ಪೋಸ್ಟ್​ಗಳನ್ನು ಸಹ ಶೇರ್​​ ಮಾಡಲಾಗಿದೆ. ಎಲ್ಲದಕ್ಕೂ ಪ್ರತಾಪ್​ ಸಮಯ ಬಂದಾಗ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದ್ದು, ಪ್ರಸ್ತುತ ಕೇಳಿಬರುತ್ತಿರುವ ಆರೋಪಕ್ಕೆ ಪ್ರತಾಪ್​ ನೀಡಿರುವ ಸ್ಪಷ್ಟನೆಯ ವಿಡಿಯೋವನ್ನು ಸಹ ಶೇರ್​ ಮಾಡಿಕೊಂಡಿದ್ದಾರೆ.

    ಇದೊಂದು ಷಡ್ಯಂತ್ರ: ಡ್ರೋನ್​ ಪ್ರತಾಪ್​, ಕೆರೆ ಕಾಮೇಗೌಡರ ಬೆಂಬಲಕ್ಕೆ ನಿಂತವರ‍್ಯಾರು?

    ಇದನ್ನೂ ಓದಿ:  ಮೀತಿ ಮೀರುತ್ತಿದ್ದೀರಿ ಜೋಕೆ ಎಂದು ಡ್ರೋನ್ ಪ್ರತಾಪ್​ ಎಚ್ಚರಿಕೆ ನೀಡಿದ್ಯಾರಿಗೆ?

    ಪ್ರತಾಪ್​ ವಿರುದ್ಧ ಕೇಳಿಬಂದ ಆರೋಪ
    ಮಿಕ್ಸಿಯಲ್ಲಿನ ಮೋಟಾರ್ ಹಾಗೂ ಟಿವಿಯ ಬಿಡಿಭಾಗಗಳನ್ನು ಬಳಸಿ 600 ಡ್ರೋನ್​ಗಳನ್ನು ತಯಾರಿಸಿದ್ದೇನೆ. ನನಗೆ ಸಾಕಷ್ಟು ಪ್ರಶಸ್ತಿಗಳು ಹಾಗೂ ವಿದೇಶಿ ಕಂಪನಿಗಳಿಂದ ಆಫರ್​ ಬಂದಿವೆ ಎಂದು ಹೇಳಿಕೊಂಡು ಅನೇಕ ಗಣ್ಯ ವ್ಯಕ್ತಿಗಳ ಬಳಿ ಹಣ ಪಡೆದು ದೇಶ-ವಿದೇಶಗಳನ್ನು ಸುತ್ತುತ್ತಿದ್ದ ಡ್ರೋನ್​ ಪ್ರತಾಪ್​ ಓರ್ವ ನಕಲಿ ವಿಜ್ಞಾನಿ ಎಂಬುದು ಬಹಿರಂಗವಾಗಿದೆ. ಇದುವರೆಗೂ ಪ್ರತಾಪ್​ ಒಂದೇ ಒಂದು ಡ್ರೋನ್​ ತಯಾರಿಕಾ ವಿಡಿಯೋವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿಲ್ಲ. ಅಲ್ಲದೆ, ಡಿಗ್ರಿಯನ್ನು ಕಂಪ್ಲೀಟ್​ ಮಾಡದೇ ಎರಡು ವಿಷಯ ಬಾಕಿ ಉಳಿಸಿಕೊಂಡಿದ್ದಾರೆ ಎಂಬ ವಿಚಾರವು ಬಹಿರಂಗವಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಾಪ್ ಅವರನ್ನು ಭಾರಿ ಟ್ರೋಲ್ ಮಾಡಲಾಗುತ್ತಿದೆ.

    ಇದನ್ನೂ ಓದಿ: ಕೆರೆ ಕಾಮೇಗೌಡರ ಕಿರಿಕ್​ಗೆ ಸಿಡಿದೆದ್ದ ದಾಸನದೊಡ್ಡಿ ಜನತೆ

    ಕಾಮೇಗೌಡರ ವಿರುದ್ಧವೂ ಗಂಭೀರ ಆರೋಪ
    ಕಾಮೇಗೌಡರು ಯಾವುದೇ ಕೆರೆ ಕಟ್ಟಲಿಲ್ಲ. ಒಂದೆರಡು ಕಟ್ಟೆ ನಿರ್ವಿುಸಿದ್ದಾರೆ ಅಷ್ಟೇ. ರಸ್ತೆ ಕಾಮಗಾರಿ ನಡೆಸಲು ಮಣ್ಣು ತುಂಬಿಕೊಂಡ ಜಾಗಗಳು ಗುಂಡಿಗಳಾಗಿದ್ದು, ಅದನ್ನೇ ಆತ ತಾನು ಕಟ್ಟೆ ಮಾಡಿಸಿರುವುದಾಗಿ ಹೇಳಿಕೊಳ್ಳುತ್ತಿದ್ದಾನೆ. ಇದರಿಂದಾಗಿ ಆತನಿಗೆ ಸಾಕಷ್ಟು ಪ್ರಶಸ್ತಿ, ಗೌರವ ಸಿಕ್ಕಿದೆ ಎಂದು ಆರೋಪಿಸಿದರು. ಮರಳು ಕಳ್ಳತನ, ಬೇರೆಯವರ ಫಸಲನ್ನು ಮೇಯಿಸಿ, ಜಮೀನಿನ ಮಾಲೀಕರ ಮೇಲೆಯೇ ದಬ್ಬಾಳಿಕೆ ಮಾಡಿದ ಸಾಕಷ್ಟು ಆರೋಪಗಳು ಕಾಮೇಗೌಡರ ಮೇಲಿವೆ ಎಂದು ದೂರಿದರು. ಕೆರೆಗಳನ್ನು ಕಟ್ಟಿಸಿದ್ದಾಗಿ ಯಾರೋ ಹೇಳಿದರೆಂದು ನಂಬಿ ಪ್ರಶಸ್ತಿ ನೀಡುವ ಮೊದಲು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೀರಾ? ಗ್ರಾಮದ ಜನರಿಗೆ ಆತ ಕಿರುಕುಳ ನೀಡುವ ಬಗ್ಗೆ ಗ್ರಾಮಸ್ಥರನ್ನು ಕೇಳಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

    ಗಂಡನಿಗೆ ಡಿವೋರ್ಸ್​ ನೀಡಿ ಮಗನನ್ನೇ ವರಿಸಿದ ಮಹಿಳೆ: ಆಕೆಯ ಉತ್ತರ ಕೇಳಿದ್ರೆ ಶಾಕ್​ ಆಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts