More

    ಈ ಬಾರ್​​ನಲ್ಲಿ ಎಣ್ಣೆಗಾಗಿ ಮುಗಿಬಿದ್ದರೆ ಜೀವಕ್ಕೇ ಅಪಾಯ; ಇದು ಮಾಲೀಕನ ಡೆಡ್ಲಿ ಐಡಿಯಾ

    ವಿಶ್ವದಾದ್ಯಂತ ಕರೊನಾ ಮಹಾಮಾರಿ ಹಬ್ಬುತ್ತಿದೆ. ಕರೊನಾದಿಂದ ಪಾರಾಗಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್​ ಧರಿಸುವುದೇ ಮಾರ್ಗ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

    ಹಾಗಾಗಿ ಅಂಗಡಿಗಳಲ್ಲೆಲ್ಲ ಮಾಲೀಕರು ಒಂದು ಹಗ್ಗ ಕಟ್ಟಿಡುವುದು ಸಾಮಾನ್ಯವಾಗಿದೆ. ಅಂಗಡಿಗಳ ಎದುರು ಒಂದು ಹಗ್ಗ ಕಟ್ಟಿ ಬೇಲಿ ನಿರ್ಮಿಸಿಡುತ್ತಾರೆ. ಗ್ರಾಹಕರು ಆ ಹಗ್ಗವನ್ನು ದಾಟುವಂತಿಲ್ಲ. ದೂರದಲ್ಲಿಯೇ ನಿಂತು ಅಗತ್ಯ ವಸ್ತುಗಳನ್ನು ಖರೀದಿಸಬೇಕು.  ಬಹುತೇಕ ಅಂಗಡಿಗಳಲ್ಲಿ ಈ ನಿಯಮ ಪಾಲನೆಯಾಗುತ್ತಿದೆ. ಆದರೆ ಬಾರ್​, ಪಬ್​ಗಳಲ್ಲಿ ಕಷ್ಟ. ಎಣ್ಣೆಗಾಗಿ ಮುಗಿಬೀಳುವವರೇ ಜಾಸ್ತಿ. ಹಾಗಾಗಿ ಇಲ್ಲೋರ್ವ ಪಬ್​ ಮಾಲೀಕ ಮಹಾನ್​ ಖತರ್ನಾಕ್​ ಐಡಿಯಾ ಕಂಡುಕೊಂಡಿದ್ದಾರೆ. ಪಬ್​ಗೆ ಬಂದವರು ಯಾವ ಕಾರಣಕ್ಕೂ ಇವರು ಹಾಕಿದ ರೇಖೆ ದಾಟಲು ಸಾಧ್ಯವೇ ಇಲ್ಲ ಅಷ್ಟರ ಮಟ್ಟಿಗೆ ಹೆದರಿಸಿಟ್ಟಿದ್ದಾರೆ.

    ಲಂಡನ್​ನ ಈ ಪಬ್ ಗ್ರಾಹಕರಿಂದ​ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕಂಡುಕೊಂಡ ಮಾರ್ಗ ನಿಜಕ್ಕೂ ಶಾಕ್​ ಹೊಡೆಸುತ್ತದೆ. ಯಾಕೆಂದರೆ ಮಾಲೀಕ ತಾನು ನಿಲ್ಲುವ ಸ್ಥಳ ಮತ್ತು ಗ್ರಾಹಕರು ನಿಲ್ಲಬೇಕಾದ ಸ್ಥಳದ ಮಧ್ಯೆ ವಿದ್ಯುತ್​ ವೈರ್​ ಕಟ್ಟಿಟ್ಟಿದ್ದಾರೆ…!

    ಕಾರ್ನ್​ವಾಲ್​​ನಲ್ಲಿರುವ ಸ್ಟಾರ್​ ಇನ್ ಎಂಬ ಪಬ್​ ಮಾಲೀಕ ಜಾನಿ ಮ್ಯಾಕ್​ಫ್ಯಾಡನ್​ ಅವರು ಕರೊನಾ ಬಾರದಂತೆ ಮುನ್ನೆಚ್ಚರಿಕೆ ವಹಿಸಲು ಕಂಡುಕೊಂಡ ಮಾರ್ಗ ಇದು. ಬಾರ್​ಕೌಂಟರ್​ ಬಳಿ ವಿದ್ಯುತ್​ ಹರಿಯುವ ವೈರ್​ ಬೇಲಿ ಹಾಕಿದ್ದಲ್ಲದೆ, ಎಚ್ಚರಿಕೆ…ಇದು ವಿದ್ಯುತ್​ ಪ್ರವಹಿಸುತ್ತಿರುವ ಬೇಲಿ ಎಂದು ದೊಡ್ಡದಾಗಿ ಬರೆಸಿದ ಬೋರ್ಡ್​ನ್ನೂ ತೂಗಿ ಹಾಕಿದ್ದಾರೆ. ತಾವು ಮತ್ತು ತಮ್ಮ ಪಬ್​​ನಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಗಂಡನಿಗೆ ಡಿವೋರ್ಸ್​ ನೀಡಿ ಮಗನನ್ನೇ ವರಿಸಿದ ಮಹಿಳೆ: ಆಕೆಯ ಉತ್ತರ ಕೇಳಿದ್ರೆ ಶಾಕ್​ ಆಗ್ತೀರಾ!

    ನಾನು ಈ ಮೊದಲು ಸಾದಾ ಹಗ್ಗವನ್ನು ಕಟ್ಟಿ ಬೇಲಿ ಹಾಕಿದ್ದೆ. ಆದರೆ ಇಲ್ಲಿಗೆ ಬರುವ ಜನರು ಅದನ್ನೂ ಮೀರಿ ಮುಗಿಬೀಳುತ್ತಿದ್ದರು. ಸಾಮಾಜಿಕ ಅಂತರ ನಿಯಮ ಪಾಲನೆ ಕಷ್ಟವಾಗುತ್ತಿತ್ತು. ನಂತರ ವಿಧಿಯಿಲ್ಲದೆ ಈ ಐಡಿಯಾ ಮಾಡಬೇಕಾಯಿತು. ಹಾಗಂತ ಇದರಲ್ಲೇನೂ ವಿದ್ಯುತ್​ ಹರಿಯುತ್ತಿರುವುದಿಲ್ಲ. ಸ್ವಿಚ್​ ಆಫ್ ಆಗಿಯೇ ಇರುತ್ತದೆ. ಆದರೆ ಕೆಲವೊಮ್ಮೆ ತುಂಬ ಜನ ಬಂದಾಗ ಅನಿವಾರ್ಯವಾಗಿ ಸ್ವಿಚ್​ ಆನ್​ ಮಾಡುತ್ತೇವೆ. ಗ್ರಾಹಕರು ಹೆದರಿಕೆಯಿಂದ ಹತ್ತಿರ ಬರುವುದಿಲ್ಲ ಎಂದು ಜಾನಿ ತಿಳಿಸಿದ್ದಾರೆ.

    ಯುಕೆಯಲ್ಲಿ ಲಾಕ್​ಡೌನ್​ ನಿರ್ಬಂಧಗಳನ್ನು ತೆರವುಗೊಳಿಸಲಾಗಿದ್ದು, ಹೊಸ ಮಾರ್ಗಸೂಚಿಗಳೊಂದಿಗೆ ಪಬ್​, ಬಾರ್​ಗಳನ್ನೆಲ್ಲ ತೆರೆಯಲಾಗುತ್ತಿದೆ. ಮಾಲೀಕರು ಸಂಪೂರ್ಣ ಸುರಕ್ಷತಾ ಕ್ರಮ ಅನುಸರಿಸುತ್ತಿದ್ದಾರೆ. (ಏಜೆನ್ಸೀಸ್​)

    ಈ ಬಾರ್​​ನಲ್ಲಿ ಎಣ್ಣೆಗಾಗಿ ಮುಗಿಬಿದ್ದರೆ ಜೀವಕ್ಕೇ ಅಪಾಯ; ಇದು ಮಾಲೀಕನ ಡೆಡ್ಲಿ ಐಡಿಯಾ

    ರಿಲಯನ್ಸ್​ನ ಜಿಯೋ ಫ್ಲಾಟ್​ಫಾರಂನಲ್ಲಿ ಗೂಗಲ್​ನಿಂದ 33,838.15 ಕೋಟಿ ರೂ. ಹೂಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts