More

    ಮತ್ತೊಮ್ಮೆ ಪತ್ತೆಯಾಯ್ತು ದೈತ್ಯಾಕಾರದ ನಿಗೂಢ ಏಕಶಿಲೆ! ಅಚ್ಚರಿಗೀಡಾದ ತಜ್ಞರು

    ಲಂಡನ್​: ಭಾರತ ಸೇರಿದಂತೆ ಜಗತ್ತಿನ ಹಲವೆಡೆ ಪತ್ತೆಯಾಗಿ ಎಲ್ಲರಲ್ಲೂ ಬೆರಗು ಮೂಡಿಸಿರುವ “ನಿಗೂಢ ಏಕಶಿಲೆ” ಇದೀಗ ಮತ್ತೊಮ್ಮೆ ಯುನೈಟೆಡ್​ ಕಿಂಗ್​ಡಮ್​ನಲ್ಲಿ ಪ್ರತ್ಯಕ್ಷವಾಗಿದೆ. ಬ್ರಿಟನ್​ನ ವೇಲ್ಸ್​ನಲ್ಲಿರುವ ಬೆಟ್ಟದ ಪ್ರದೇಶದಲ್ಲಿ 10 ಅಡಿ ಎತ್ತರದ ಉಕ್ಕಿನ ಏಕಶಿಲೆ ಪತ್ತೆಯಾಗಿರುವುದಾಗಿ ನ್ಯೂಯಾರ್ಕ್​ ಪೋಸ್ಟ್​ ವರದಿ ಮಾಡಿದೆ.

    ಪತ್ತೆಯಾಗಿರುವ ನಿಗೂಢ ಏಕಶಿಲೆ ದೈತ್ಯ ಟೊಬ್ಲೆರೋನ್ ಮಾದರಿಯಲ್ಲಿದೆ. ವಾರಾಂತ್ಯದಲ್ಲಿ ಪೋವಿಸ್ ಪಟ್ಟಣದ ಬಳಿ ಹೇ ಬ್ಲಫ್‌ನಲ್ಲಿ ಸ್ಥಳೀಯರು ಇದನ್ನು ಗುರುತಿಸಿದ್ದಾರೆ. ತಜ್ಞರು ಸೇರಿದಂತೆ ಸ್ಥಳೀಯರು ಏಕಶಿಲೆಯನ್ನು ನೋಡಿ ಅಚ್ಚರಿಗೀಡಾಗಿದ್ದಾರೆ.

    ನೋಡಲು ಇದು ಸ್ವಲ್ಪ ವಿಲಕ್ಷಣವಾಗಿ ಕಾಣುತ್ತದೆ ಮತ್ತು ಮಳೆನೀರನ್ನು ಸಂಗ್ರಹಿಸುವ ವೈಜ್ಞಾನಿಕ ಮಾಧ್ಯಮ ಸಂಶೋಧನೆಯ ವಸ್ತುವಾಗಿರಬೇಕೆಂದು ನಾನು ಭಾವಿಸಿದೆ ಎಂದು ಸಂಶೋಧಕ ರಿಚರ್ಡ್ ಹೇನ್ಸ್ ಅವರು ವೇಲ್ಸ್ ಆನ್​ಲೈನ್​ಗೆ ಹೇಳಿದ್ದಾರೆ.

    ನಿಗೂಢ ಏಕಶಿಲೆ ತುಂಬಾ ಎತ್ತರವಾಗಿ ಮತ್ತು ವಿಚಿತ್ರವಾಗಿದೆ ಎಂದು ಅರಿತುಕೊಂಡ ಬಳಿಕ ನಾನು ಅದರ ಬಳಿಗೆ ಹೋದೆ. ಸುಮಾರು 10 ಅಡಿ ಎತ್ತರ ಮತ್ತು ತ್ರಿಕೋನ ಆಕೃತಿಯಲ್ಲಿದೆ. ಅದು ಖಂಡಿತವಾಗಿ ಸ್ಟೇನ್ಲೆಸ್ ಸ್ಟೀಲ್ ಆಗಿತ್ತು ಮತ್ತು ಟೊಳ್ಳಾಗಿತ್ತು. ಎರಡು ಜನರು ಅದನ್ನು ಹೊತ್ತುಕೊಂಡು ನೆಲದಲ್ಲಿ ನೆಡುವಷ್ಟು ಟೊಳ್ಳಾಗಿತ್ತು ಎಂದು ರಿಚರ್ಡ್ ಹೇನ್ಸ್ ತಿಳಿಸಿದ್ದಾರೆ.

    ಸದ್ಯ ವೈರಲ್ ಆಗಿರುವ ಏಕಶಿಲೆಯ ಫೋಟೋಗಳು ಆನ್‌ಲೈನ್‌ನಲ್ಲಿ ಹಲವಾರು ಪಿತೂರಿ ಸಿದ್ಧಾಂತಗಳನ್ನು ಹುಟ್ಟುಹಾಕಿವೆ. ಕೆಲವರು ಇದು ಅನ್ಯಗ್ರಹ ಜೀವಿಗಳ ಕೆಲಸ ಎಂದು ಹೇಳಿದರೆ, ಇತರರು ಇದು ರಹಸ್ಯ ಕಲಾಕೃತಿಯ ತುಣುಕು ಎಂದಿದ್ದಾರೆ.

    ಇನ್ನೂ ಈ ನಿಗೂಢ ಏಕಶಿಲೆ ಪತ್ತೆಯಾಗಿರುವುದು ಇದೇ ಮೊದಲೇನಲ್ಲ. 2021ರ ಫೆಬ್ರವರಿಯಲ್ಲಿ ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಆಗ್ನೇಯ ಟರ್ಕಿಯಲ್ಲಿ 10-ಅಡಿ ಎತ್ತರದ ಲೋಹದ ಚಪ್ಪಡಿ ಕಾಣಿಸಿಕೊಂಡಿತು. ಬಳಿಕ ಸದ್ದಿಲ್ಲದೆ ಕಣ್ಮರೆಯಾಯಿತು. ಇದು ಪ್ರಾಚೀನ ತುರ್ಕಿಕ್ ಭಾಷೆಯಾದ ಗೋಕ್ತುರ್ಕ್ ವರ್ಣಮಾಲೆಯಲ್ಲಿ “ಆಕಾಶವನ್ನು ನೋಡಿ, ಚಂದ್ರನನ್ನು ನೋಡಿ” ಎಂಬ ರಹಸ್ಯ ಸಂದೇಶವನ್ನು ಕೆತ್ತಲಾಗಿತ್ತು. ನಂತರದಲ್ಲಿ ಇದು ಟರ್ಕಿ ಸರ್ಕಾರದ ಹೊಸ ಬಾಹ್ಯಾಕಾಶ ಕಾರ್ಯಕ್ರಮವನ್ನು ಉತ್ತೇಜಿಸುವ ಪ್ರಚಾರದ ಗೀಳಾಗಿ ಹೊರಹೊಮ್ಮಿತು.

    2020ರಲ್ಲಿ ಉತಾಹ್ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಇದೇ ರೀತಿಯ ಎರಡು ರೀತಿಯ ರಚನೆಗಳು ಕಂಡುಬಂದವು. 2020ರ ನವೆಂಬರ್ ತಿಂಗಳಲ್ಲಿ ರೊಮೇನಿಯಾದಲ್ಲಿ ಮತ್ತೊಂದು ಬೃಹತ್ ಉಕ್ಕಿನ ಏಕಶಿಲೆ ಕಾಣಿಸಿಕೊಂಡಿತು ಮತ್ತು ಅದನ್ನು ಯಾರು ಅಲ್ಲಿ ತಂದು ಹಾಕಿದರು ಎಂಬುದರ ಬಗ್ಗೆ ತಿಳಿದಿಲ್ಲ ಎಂದು ಸರ್ಕಾರವೇ ಹೇಳಿತು.

    ಭಾರತದಲ್ಲೂ ಪತ್ತೆ
    ಭಾರತದಲ್ಲಿ ಮೊದಲು ಗುಜರಾತಿನ ಅಹಮದಾಬಾದ್​ ಸಾರ್ವಜನಿಕ ಸ್ಥಳದಲ್ಲಿ ಪತ್ತೆಯಾಗಿದ್ದ ನಿಗೂಢ ಏಕಶಿಲೆ ಎರಡನೇ ಬಾರಿ ಮಹಾರಾಷ್ಟ್ರದ ಮುಂಬೈ ಉಪನಗರ ಬಾಂದ್ರಾದ ಜಾಗ್ಗರ್ಸ್​ ಪಾರ್ಕ್​ನಲ್ಲಿ ಕಾಣಿಸಿಕೊಂಡಿತು. ಮೊದಲು ಅಹಮದಾಬಾದ್​ನ ಥಲ್ತೇಜ ಏರಿಯಾದಲ್ಲಿರುವ ಸಿಂಫೋನಿ ಪಾರ್ಕ್​ನಲ್ಲಿ ಕಂಡುಬಂದಿತ್ತು. ತ್ರಿಕೋನ ಮಾದರಿಯಲ್ಲಿರುವ ಏಕಶಿಲೆಯ ಮೇಲ್ಮೈನಲ್ಲಿ ಕೆಲವು ಸಂಖ್ಯೆಗಳು ಮತ್ತು ಚಿಹ್ನೆಗಳಿದ್ದವು. (ಏಜೆನ್ಸೀಸ್​)

    ಮಗಳಿಂದಲೇ ಬಯಲಾಯ್ತು ನಟಿ ಲಕ್ಷ್ಮೀಗಿದ್ದ ಅಫೇರ್! ದಾಂಪತ್ಯ ದ್ರೋಹದ ಗುಟ್ಟು ಬಿಚ್ಚಿಟ್ಟ ಮಾಜಿ ಗಂಡ

    ಗುಜರಾತ್​​ ಬಳಿಕ ಭಾರತದಲ್ಲಿ 2ನೇ ಬಾರಿಗೆ ಪತ್ತೆಯಾಯ್ತು ನಿಗೂಢ ಏಕಶಿಲೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts