More

    ಇತಿಹಾಸದಲ್ಲಿಯೇ ಅತಿ ದೊಡ್ಡ ನಗದು ದರೋಡೆ; 7 ಜನ ಕಳ್ಳರು 700 ಕೋಟಿ ರೂ. ಲೂಟಿ ಮಾಡಿದರೂ 1600 ಕೋಟಿ ರೂ. ಬಿಟ್ಟು ಹೋಗಿದ್ದೇಕೆ?

    ಇಂಗ್ಲೆಂಡ್: ಇಂದು ನಾವು ನಿಮಗೆ ಹೇಳಲು ಹೊರಟಿರುವ ದರೋಡೆ ಪ್ರಕರಣವು ಯಾವುದೇ ಚಲನಚಿತ್ರ ಅಥವಾ ವೆಬ್​​ ಸಿರೀಸ್ ತರಹ ಯಾವುದೇ ಕಾಲ್ಪನಿಕ ಕಥೆಯಲ್ಲ. ನೈಜ ಘಟನೆ. ಈ ಘಟನೆಯು ಯುನೈಟೆಡ್ ಕಿಂಗ್‌ಡಮ್ (ಯುಕೆ) ಇತಿಹಾಸದಲ್ಲಿಯೇ ಅತಿದೊಡ್ಡ ನಗದು ದರೋಡೆ ಎಂದು ಪರಿಗಣಿಸಲಾಗಿದೆ. ಈ ಘಟನೆಯು ಇದೇ ದಿನ ಅಂದರೆ 2006 ರಲ್ಲಿ ಫೆಬ್ರವರಿ 22 ರಂದು ಸಂಭವಿಸಿತು.

    ದರೋಡೆ ನಡೆದಿದ್ದು ಹೇಗೆ? 
    2006ರಲ್ಲಿ ಇಂಗ್ಲೆಂಡ್‌ನ ಟನ್‌ಬ್ರಿಡ್ಜ್‌ನಲ್ಲಿ ನಡೆದ ಕಳ್ಳತನವು ಯುಕೆಯ ಅತಿದೊಡ್ಡ ದರೋಡೆಯಾಗಿದೆ. ಈ ಸಮಯದಲ್ಲಿ ಏಳು ಮಂದಿ ಕಳ್ಳರು ಸುಮಾರು 53 ಮಿಲಿಯನ್ ಪೌಂಡ್ (ಸುಮಾರು 700 ಕೋಟಿ ರೂ.) ಲೂಟಿ ಮಾಡಿದರು. ಆದರೆ ಅವರು 1600 ಕೋಟಿ ರೂಪಾಯಿಗಳನ್ನು ಅಲ್ಲಿಯೇ ಬಿಟ್ಟರು. ಇದಕ್ಕೆ ಕಾರಣ ತಿಳಿದರೆ ನಗು ಬರಬಹುದು. ಹೌದು, ಇಷ್ಟು ದೊಡ್ಡ ಮೊತ್ತದ ಹಣವನ್ನು ಅಲ್ಲಿಯೇ ಬಿಡಲು ಕಾರಣವೆಂದರೆ ಅವರಿಗೆ ಅಷ್ಟು ಹಣವನ್ನು ಸಾಗಿಸಲು ಯಾವುದೇ ಮಾರ್ಗವಿರಲಿಲ್ಲ. ಆದ್ದರಿಂದ ದುರಾಸೆಗೆ ಬಲಿಯಾಗಿ ಸಿಕ್ಕಿಬೀಳುವ ಬದಲು ಕಳ್ಳರು ಕೈಗೆ ಬಂದಷ್ಟು ಹಣ ಹಿಡಿದುಕೊಂಡು ಹೋಗಲು ನಿರ್ಧರಿಸಿದ್ದಾರೆ.

    ಕಳ್ಳರು ಹೇಗೆ ಈ ದರೋಡೆ ನಡೆಸಿದ್ದಾರೆ ಗೊತ್ತಾ? 
    ದರೋಡೆ ಸಮಯದಲ್ಲಿ, ಕಳ್ಳರು ಟನ್‌ಬ್ರಿಡ್ಜ್‌ನಲ್ಲಿರುವ ಸೆಕ್ಯುರಿಟಾಸ್ ಡಿಪೋವನ್ನು ಗುರಿಯಾಗಿಸಿಕೊಂಡಿದ್ದರು. ಮೊದಲು ಮಾಹಿತಿ ಪಡೆಯಲು ಅವರಲ್ಲಿ ಒಬ್ಬರನ್ನು ಒಳಗೆ ಕಳುಹಿಸಿದರು. ಇದಾದ ನಂತರ ಅವರು ಮ್ಯಾನೇಜರ್ ಮತ್ತು ಅವರ ಕುಟುಂಬವನ್ನು ಅಪಹರಿಸಿದ್ದಾರೆ. ಆ ನಂತರ ಕಟ್ಟಡದೊಳಗೆ ನುಗ್ಗಿ 14 ಉದ್ಯೋಗಿಗಳನ್ನು ಬಂದೂಕು ತೋರಿಸಿ ಒತ್ತೆಯಾಳಾಗಿ ಇಟ್ಟುಕೊಂಡು 5 ಕೋಟಿ, 29 ಲಕ್ಷದ 96 ಸಾವಿರದ 760 ಪೌಂಡ್ (ಸುಮಾರು 700 ಕೋಟಿ ರೂ.) ಕದ್ದಿದ್ದರು. 1600 ಕೋಟಿ ಮೌಲ್ಯದ ನಗದನ್ನು ಕದಿಯುವ ಅವಕಾಶವೂ ಅವರಿಗೆ ಸಿಕ್ಕಿತ್ತು.

    ಆದರೆ, ಅಷ್ಟೊಂದು ನಗದನ್ನು ಸಾಗಿಸುವ ಸಮಸ್ಯೆ ಕಂಡು ಕಳ್ಳರು ಉಳಿದ ಹಣವನ್ನು ಅಲ್ಲೇ ಇಡಲು ನಿರ್ಧರಿಸಿದ್ದಾರೆ. ಆದರೆ, ನಂತರ ಪೊಲೀಸರು ತನಿಖೆ ಆರಂಭಿಸಿದಾಗ ವಿವಿಧೆಡೆ ಕಳ್ಳತನವಾದ ನಗದನ್ನು ವಶಪಡಿಸಿಕೊಂಡಿದ್ದಾರೆ. 2007ರವರೆಗೆ ಈ ಪ್ರಕರಣದಲ್ಲಿ 36 ಮಂದಿಯನ್ನು ಬಂಧಿಸಲಾಗಿತ್ತು.

    2007ರಲ್ಲಿ ಲಂಡನ್‌ನ ಓಲ್ಡ್ ಬೈಲಿಯಲ್ಲಿ ನಡೆದ ವಿಚಾರಣೆಯಲ್ಲಿ ಈ ಪ್ರಕರಣದಲ್ಲಿ 5 ಮಂದಿಗೆ ಶಿಕ್ಷೆ ವಿಧಿಸಲಾಗಿತ್ತು. ಅಪರಾಧಿಗಳ ಗುರುತನ್ನು ಮರೆಮಾಡಲು ಪ್ರಾಸ್ತೆಟಿಕ್ಸ್ ವಿನ್ಯಾಸಗೊಳಿಸಿದ ಮಹಿಳೆಯನ್ನು ಕಳ್ಳರ ವಿರುದ್ಧ ಸಾಕ್ಷ್ಯಕ್ಕಾಗಿ ಬಿಡುಗಡೆ ಮಾಡಲಾಯಿತು. ಅಂದಹಾಗೆ ಕಳುವಾದ ಮೊತ್ತದಲ್ಲಿ 265 ಕೋಟಿ ರೂಪಾಯಿ ನಗದು ಇನ್ನೂ ಪತ್ತೆಯಾಗಿಲ್ಲ.

    ‘ದಯವಿಟ್ಟು ರಕ್ಷಿಸಿ, ನಮ್ಮ ಪ್ರಾಣ ಅಪಾಯದಲ್ಲಿದೆ’; ರಷ್ಯಾದಿಂದ ಬಲವಂತವಾಗಿ ವ್ಯಾಗ್ನರ್ ಸೇನೆಗೆ ಸೇರ್ಪಡೆಗೊಂಡ ಕನ್ನಡಿಗರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts