More

    ಕಾಂಗ್ರೆಸ್​ಗೆ ಐಟಿ ಶಾಕ್..1800 ಕೋಟಿ ರೂ. ತೆರಿಗೆ ವಸೂಲಿಗೆ ನೋಟಿಸ್!

    ನವದೆಹಲಿ: ಲೋಕಸಭೆ ಚುನಾವಣೆ ಸಂದರ್ಭ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ. ಆದಾಯ ತೆರಿಗೆ ಇಲಾಖೆ ಶುಕ್ರವಾರ ಪಕ್ಷಕ್ಕೆ ನೋಟಿಸ್ ಕಳುಹಿಸಿದೆ.

    ಇದನ್ನೂ ಓದಿ: ದರೋಡೆಕೋರ ಮುಕ್ತಾರ್ ಅನ್ಸಾರಿ ಸಾವಿನ ತನಿಖೆಗೆ ಮಾಯಾವತಿ ಆಗ್ರಹ!

    2017-18 ಮತ್ತು 2021-21ನೇ ಸಾಲಿಗೆ ದಂಡ ಮತ್ತು ಬಡ್ಡಿ ವಸೂಲಿಗೆ 1,823 ಕೋಟಿ ರೂ.ಮೊತ್ತದ ತೆರಿಗೆ ನೋಟಿಸ್ ಜಾರಿ ಮಾಡಿದೆ. ತಮ್ಮ ವಿರುದ್ಧದ ಐಟಿ ಇಲಾಖೆಯ ತೆರಿಗೆ ಮೌಲ್ಯಮಾಪನ ಪ್ರಕ್ರಿಯೆಗೆ ತಡೆ ನೀಡಬೇಕೆಂಬ ಕಾಂಗ್ರೆಸ್ ಪಕ್ಷದ ಮನವಿಯನ್ನು ಹೈಕೋರ್ಟ್ ಗುರುವಾರ ವಜಾಗೊಳಿಸಿದ ಬೆನ್ನಲ್ಲೇ ನೋಟಿಸ್​ ಜಾರಿಯಾಗಿದೆ.

    ಇದನ್ನು ಕಾಂಗ್ರೆಸ್ ಖಚಿತಪಡಿಸಿದೆ. ಲೋಕಸಭೆ ಚುನಾವಣೆ ವೇಳೆ ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸಲು ಬಿಜೆಪಿ ‘ತೆರಿಗೆ ಭಯೋತ್ಪಾದನೆ’ಯಲ್ಲಿ ತೊಡಗಿದೆ ಎಂದು ಆ ಪಕ್ಷ ಆರೋಪಿಸಿದೆ.

    ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮತ್ತು ಪಕ್ಷದ ಖಜಾಂಚಿ ಅಜಯ್ ಮಾಕನ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆದಾಯ ತೆರಿಗೆ ಕಾನೂನುಗಳ ಗಂಭೀರ ಉಲ್ಲಂಘನೆ ಮಾಡುತ್ತಿದ್ದಾರೆ.

    ಚುನಾವಣಾ ಬಾಂಡ್‌ಗಳ ಯೋಜನೆ’ ಮೂಲಕ ಬಿಜೆಪಿ 8,200 ಕೋಟಿ ರೂಪಾಯಿ ಸಂಗ್ರಹಿಸಿದೆ ಮತ್ತು ಇದಕ್ಕಾಗಿ ಹಲವು ಕಂಪನಿಗಳನ್ನು ಬಳಸಿಕೊಂಡಿದೆ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.

    ಇನ್ನೊಂದೆಡೆ ಬಿಜೆಪಿ ತೆರಿಗೆ ಭಯೋತ್ಪಾದನೆ ಮಾಡುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಆರ್ಥಿಕವಾಗಿ ಹಾನಿ ಮಾಡುವ ಯತ್ನ ನಡೆಯುತ್ತಿದೆ ಎಂದರು.

    ಕಾಂಗ್ರೆಸ್ ಪ್ರಚಾರಕ್ಕೆ ಮುಂದಾಗಿದ್ದು, ಪಕ್ಷದ ಭರವಸೆಗಳನ್ನು ಜನರ ಬಳಿಗೆ ಕೊಂಡೊಯ್ಯಲಿದೆ ಎಂದು. ಆದಾಯ ತೆರಿಗೆ ಇಲಾಖೆ ನೊಟೀಸ್‌ಗಳಿಗೆ ಹೆದರುವುದಿಲ್ಲ. ದೃಢವಾಗಿ ಚುನಾವಣೆ ಎದುರಿಸಲಿದೆ ಎಂದು ಹೇಳಿದರು.

    ಐಟಿ ಇಲಾಖೆ ಕೇವಲ ಕಾಂಗ್ರೆಸ್ ಮತ್ತು ಸಮಾನ ಮನಸ್ಕ ಪಕ್ಷಗಳನ್ನು ಗುರಿಯಾಗಿಸಿದೆ. ಬಿಜೆಪಿ “ಅಂಗಸಂಸ್ಥೆ”ಯಾಗಿದೆ ಎಂದು ಅಜಯ್ ಮಾಕನ್ ಆರೋಪಿಸಿದ್ದಾರೆ. ಸದ್ಯದಲ್ಲೇ ತಮ್ಮ ಪಕ್ಷ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲಿದೆ ಎಂದು ಅವರು ತಿಳಿಸಿದರು.

    ಕೈಕುಲುಕಲು ನಿರಾಕರಿಸಿದ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಓರ್ರಿ..ಕಂಟೆಂಟ್ ಕ್ರಿಯೇಟರ್ ರುಚಿಕಾ ಮೇಲೆ ಕೇಸ್​ ಹಾಕುವ ಬೆದರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts