More

    ಅರ್ಚಕರಿಗೆ ವರ್ಷಾಸನ ಭತ್ಯೆ ನೀಡಿ

    ಕೊಟ್ಟೂರು: ತಾಲೂಕಿನಲ್ಲಿ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಗ್ರೇಡ್-ಸಿ ದೇವಾಲಯಗಳು 60 ಇವೆ. ಆದರೆ ವರ್ಷಾಸನ ನಾಲ್ವರು ಅರ್ಚಕರು ಹಾಗೂ ತಸ್ವೀಕ್ ವೇತನವನ್ನು ಏಳು ಪೂಜಾರಿಗಳು ಮಾತ್ರ ಪಡೆಯುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ಅರ್ಚಕ, ಆಗಮಿಕ, ಉಪಾಧಿವಂತರ ಒಕ್ಕೂಟದ ವಿಜಯನಗರ ಜಿಲ್ಲಾಧ್ಯಕ್ಷ ರಾಮಕೃಷ್ಣ ಕಮಲಾಪುರ ಹೇಳಿದರು.

    ಅರ್ಚಕರಿಗೆ ವರ್ಷಾಸನ ಮತ್ತು ತಸ್ವೀಕ್ ಭತ್ಯೆ ನೀಡಿ

    ಪಟ್ಟಣದ ಗಚ್ಚಿನ ಮಠದ ಆವರಣದಲ್ಲಿ ಒಕ್ಕೂಟದ ಸಭೆಯಲ್ಲಿ ಬುಧವಾರ ಮಾತನಾಡಿದರು. ತಾಲೂಕಿನಲ್ಲಿ ಕೊಟ್ಟೂರೇಶ್ವರ ಮತ್ತು ಉಜ್ಜಿನಿ ದೇವಾಲಯಗಳು ಮಾತ್ರ ಗ್ರೇಡ್-ಎ ಒಳಪಟ್ಟಿವೆ. ಉಳಿದ ದೇಗುಲುಗಳು ಗ್ರೇಡ್-ಸಿ ಒಳಪಟ್ಟಿವೆ ಎಂದರು. ಕಂದಾಯ ಇಲಾಖೆ ತಾಲೂಕಿನ ಗ್ರೇಡ್-ಸಿ ದೇವಾಲಯಗಳ ಅರ್ಚಕರ ಸರ್ವೇ ಮಾಡಿ ಅರ್ಚಕರಿಗೆ ವರ್ಷಾಸನ ಮತ್ತು ತಸ್ವೀಕ್ ಭತ್ಯೆ ಪಡೆಯಲು ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಿದರು.

    ಇದನ್ನೂ ಓದಿ: ರಾಷ್ಟ್ರಪ್ರೇಮ ಕೆಲವರ ಭಾಷಣಕ್ಕಷ್ಟೇ ಸೀಮಿತವಾಗಿದೆ; ಪರೋಕ್ಷವಾಗಿ ಬಿಜೆಪಿ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ

    ಗ್ರೇಡ್-ಸಿ ದೇವಾಲಯದ ಅರ್ಚಕರಿಗೆ ಒಂದು ವರ್ಷಕ್ಕೆ ವರ್ಷಾಸನ 48,000 ರೂ. ಹಾಗೂ ತಸ್ವೀಕ್ ವರ್ಷಕ್ಕೆ 60, 000 ರೂ.ಗಳನ್ನು ಧಾರ್ಮಿಕ ದತ್ತಿ ಇಲಾಖೆ ನೇರವಾಗಿ ಅರ್ಚಕರ ಖಾತೆಗೆ ಜಮೆ ಮಾಡುತ್ತದೆ. ಇದರಿಂದ ವಂಚಿತರಾದ ಅರ್ಚಕರು ಕೂಡಲೇ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕಿಗೆ ಸಿ ಗ್ರೇಡ್ ಅರ್ಚಕರಿಗೆ ಪ್ರಸ್ತುತ ವರ್ಷ ವರ್ಷಾಸನ ಮತ್ತು ತಸ್ವೀಕ್ ಭತ್ಯೆಯಾಗಿ 4.56 ಲಕ್ಷ ರೂ. ಬಿಡುಗಡೆಯಾಗಿದೆ ಎಂದರು.

    ಒಕ್ಕೂಟದ ಕೊಟ್ಟೂರು ತಾಲೂಕಿನ ನೂತನ ಅಧ್ಯಕ್ಷ ಪಿ.ವೀರಭದ್ರಪ್ಪ, 1831ರಲ್ಲಿ ಅಂದಿನ ನಿಜಾಂ ಸರ್ಕಾರ ಅರ್ಚಕರೆಂದು ದಾಖಲೆ ನೀಡಿದೆ. ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಕೆಲವು ದೇವಾಲಯಗಳು ಪಾಳು ಬಿದ್ದಿವೆ. ಅರ್ಚಕರಿಲ್ಲದೆ ಪೂಜೆ ನಡೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ಇಂತಹ ದೇವಾಲಯಕ್ಕೆ ಅರ್ಚಕರ ನೇಮಕ ಮಾಡಲಿ ಎಂದರು. ಸಭೆ ನಂತರ ಒಕ್ಕೂಟ ಪದಾಧಿಕಾರಿಗಳು ತಹಸೀಲ್ದಾರ್ ಜಿ.ಕೆ. ಅಮರೇಶಗೆ ಮನವಿ ಸಲ್ಲಿಸಿದರು.
    ಅಖಿಲ ಕರ್ನಾಟಕ ಅರ್ಚಕ, ಆಗಮಿಕ, ಉಪಾಧಿವಂತರ ಒಕ್ಕೂಟದ ಹಡಗಲಿ ತಾಲೂಕು ಅಧ್ಯಕ್ಷ ರಾಜಶೇಖರ್ ಡಿ ಮಾತನಾಡಿದರು. ಒಕ್ಕೂಟದ ಕೊಟ್ಟೂರು ಕಾರ್ಯದರ್ಶಿ ಮೌನಾಚಾರಿ, ಅರ್ಚಕ ಸಿದ್ದಪ್ಪ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts