More

    ಪ್ರಾಯೋಗಿಕ ಕಲಿಕೆಗೆ ಆದ್ಯತೆ ನೀಡಿ – ಉಪ ಪ್ರಾಚಾರ್ಯ ಸಿ.ಬಸವರಾಜ್ ಸಲಹೆ

    ಕೊಟ್ಟೂರು: ವಿಜ್ಞಾನ ವಿಷಯವನ್ನು ಶಿಕ್ಷಕರು ಪ್ರಯೋಗಾತ್ಮಕವಾಗಿ ಸರಳ ಭಾಷೆಯಲ್ಲಿ ಬೋಧನೆ ಮಾಡಿದಾಗ ವಿದ್ಯಾರ್ಥಿಗಳಿಗೆ ಬೇಗನೆ ಅರ್ಥವಾಗಲಿದೆ ಎಂದು ಉಪ ಪ್ರಾಚಾರ್ಯ ಸಿ.ಬಸವರಾಜ್ ಹೇಳಿದರು.

    ಬೆಳಗಾವಿಯ ವಿಕಾಸನ ಕೇಂದ್ರ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಪರಿಷತ್ತು, ವಿಜಯನಗರ ಶಾಲಾ ಶಿಕ್ಷಣ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ತು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಶಿಕ್ಷಕರಿಗೆ ಆಯೋಜಿಸಿರುವ ಮೂರು ದಿನಗಳ ಕಾರ್ಯಾಗಾರದಲ್ಲಿ ಶುಕ್ರವಾರ ಮಾತನಾಡಿದರು.

    ಇದನ್ನೂ ಓದಿ: ಗಣಿತ ಅಭ್ಯಾಸ ಮಕ್ಕಳಿಗೆ ಸಂತಸದ ಕಲಿಕೆಯಾಗಲಿ

    ವಿಜ್ಞಾನವು ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕೆ ಸಾಂಪ್ರದಾಯಿಕ ಪದ್ಧತಿ ಅಥವಾ ಕೇವಲ ಬೋಧನೆ ಬದಲು ಪ್ರಾಯೋಗಿಕ ಕಲಿಕೆಗೆ ಆದ್ಯತೆ ನೀಡಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚು ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು.

    ವಿಜ್ಞಾನ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಕೆ.ರಾಮಣ್ಣ ಮಾತನಾಡಿ, ವೈಜ್ಞಾನಿಕ ಪ್ರಕ್ರಿಯೆಯ ಪರಿಕಲ್ಪನೆಯನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಶಿಕ್ಷಕರಿಗೆ ಈ ತರಬೇತಿಯ ಬೋಧನಾ ಸಾಮಗ್ರಿಗಳು ಉಪಯೋಗಕ್ಕೆ ಬರುತ್ತವೆ ಎಂದರು.

    ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಪ್ಪ, ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಮಿಸಾಳೆ ಮಾತನಾಡಿದರು. ವಿಕಾಸನ ಸಂಸ್ಥೆ ಅಧ್ಯಕ್ಷ ಸಂಜಯ್ ಮುದುಗುಮ್, ರವಿಪ್ರಸಾದ್ ಕುಲಕರ್ಣಿ, ಹರೀಶ್ ಗೌಡ, ಶಿವತನಯ ಇದ್ದರು.

    ವಿಜಯನಗರ ಜಿಲ್ಲೆಯ ಕೂಡ್ಲಿಗಿ ಕೊಟ್ಟೂರು, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ತಾಲೂಕಿನ 60 ಜನ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts