More

    ಕಲಿಕೆ ಹಂತದಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಿ

    ಕೊಳ್ಳೇಗಾಲ: ಶುಶ್ರೂಷಕರ ವೃತ್ತಿ ಬಹಳ ಶ್ರೇಷ್ಠ ಎಂದು ಸುಪ್ರೀಮ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನ ನಿರ್ದೇಶಕ ಹಾಗೂ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಡೀನ್ ಡಾ.ಪಿ.ಮಹೇಶ್ ಹೇಳಿದರು.

    ಪಟ್ಟಣದ ಗುರುಭವನದಲ್ಲಿ ಸುಪ್ರೀಮ್ ಇನ್ಸ್ಟಿಟ್ಯೂಟ್ ಆಫ್ ನಸಿರ್ಂಗ್ ಕಾಲೇಜು ವತಿಯಿಂದ ಗುರುವಾರ ನೂತನ ಜಿಎನ್‌ಎಂ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಜ್ಯೋತಿ ಬೆಳಗುವಿಕೆ ಹಾಗೂ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

    ಶುಶ್ರೂಷಕರ ವೃತ್ತಿಗೆ ಬಹಳ ಬೇಡಿಕೆ ಇದೆ. ಅದರಂತೆ ಅವಕಾಶಗಳು ಹೆಚ್ಚಿದೆ. ರೋಗಿಗಳ ಜೀವ ಉಳಿಸುವಲ್ಲಿ ಶ್ರುಶೂಷಕರ ಪಾತ್ರ ಮಹತ್ವದ್ದು. ಆದ್ದರಿಂದ ಕಲಿಕೆಯ ಹಂತದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ಪಾಠ-ಪ್ರವಚನಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.

    ಆಸ್ಪತ್ರೆಗೆ ಬಂದ ರೋಗಿಗಳ ಆರೈಕೆಯನ್ನು ಮೊದಲು ನರ್ಸ್‌ಗಳು ಮಾಡುವುದರಿಂದ ಅವರ ಆರೋಗ್ಯದ ಬಗ್ಗೆ ವಿಚಾರಿಸಿ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸವನ್ನು ನಾವು ಮಾಡಬೇಕಿದೆ. ಕಲಿಕೆಗೆ ಮಿತಿ ಇಲ್ಲ, ಪ್ರತಿ ದಿನವೂ ಕಲಿಯುವುದಿದೆ. ಉನ್ನತ ಗುರಿಯನ್ನು ಇಟ್ಟುಕೊಂಡು ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದರೆ ಮುಂದೊಂದು ದಿನ ಯಶಸ್ಸು ಸಿಗುವುದು ಖಚಿತ ಎಂದರು.

    ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳು ಮೊಂಬತ್ತಿ ಹಿಡಿದು ರೋಗಿಯ ಜೀವ ಉಳಿಸುವ ಕಾರ್ಯವನ್ನು ಕಾಯ, ವಾಚ, ಮನಸ ಮಾಡುತ್ತೇವೆ ಎಂದು ಪ್ರಮಾಣ ವಚನ ಸ್ವೀಕರಿಸಿದರು. ಸರ್ಕಾರಿ ಉಪವಿಭಾಗ ಆಸ್ಪತ್ರೆಯ ನಸಿರ್ಂಗ್ ಸೂಪರ್ ಡೆಂಟ್ ಶಶಿಕಲಾ, ನಗರ ಆರೋಗ್ಯ ಅಧಿಕಾರಿ ಡಾ.ರಿಯಾ, ಜೆಎಸ್‌ಎಸ್ ನರ್ಸಿಂಗ್ ಸ್ಕೂಲ್ ಪ್ರಾಂಶುಪಾಲ ಹೇಮೇಶ್ ಮೂರ್ತಿ, ಸುಪ್ರೀಮ್ ಇನ್ಸ್ಟಿಟ್ಯೂಟ್ ಆಫ್ ನಸಿರ್ಂಗ್ ಕಾಲೇಜಿನ ಪ್ರಾಂಶುಪಾಲೆ ಎನ್.ರೋಜ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts