More

  ಬಾಲ್ಯದ ಕಲಿಕೆಗೆ ಹೆಚ್ಚಿನ ಒತ್ತು ನೀಡಿ

  ಅಳವಂಡಿ: ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮ ಹಾಗೂ ಛಲದಿಂದ ಅಭ್ಯಾಸಿಸಿ ಯಶಸ್ಸು ಪಡೆಯಿರಿ ಎಂದು ಶಿಕ್ಷಕಿ ಅರುಣ ನರೇಂದ್ರ ಪಾಟೀಲ ತಿಳಿಸಿದರು.

  ಇದನ್ನೂ ಓದಿ: ಕನ್ನಡ ಕಲಿಕೆ ಗಂಭೀರ ಚಿಂತನೆಯಾಗಲಿ

  ಸಮೀಪದ ಬೆಟಗೇರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಹಾಗೂ ಬಿಳ್ಕೊಡುಗೆ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು.

  ಬಾಲ್ಯದಲ್ಲಿ ಸಂಸ್ಕಾರ, ಮೌಲ್ಯಾದಾರಿತ ವ್ಯಕ್ತಿತ್ವ ಹಾಗೂ ಉತ್ತಮ ಶಿಕ್ಷಣ ಪಡೆಯಬೇಕು. ಬಾಲ್ಯದ ಕಲಿಕೆ ಮುಂದಿನ ಬದುಕಿನ ಹಾದಿ ತೋರುವ ಜತೆಗೆ ಗುರಿ ಮುಟ್ಟಿಸುತ್ತೆ. ವಿದ್ಯಾರ್ಥಿಗಳು ಶಿಕ್ಷಕರು ನೀಡಿದ ಶಿಕ್ಷಣವನ್ನು ಶ್ರದ್ಧೆಯಿಂದ ಮನನ ಮಾಡಿಕೊಂಡು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಿರಿ ಎಂದರು.

  ಮುಖ್ಯ ಶಿಕ್ಷಕಿ ಕಸ್ತೂರಿ ಬಡಿಗೇರ, ಪರಶುರಾಮ ಸಾಲ್ಮನಿ, ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ನಾಗರಡ್ಡಿ, ರಮೇಶ ಬನ್ನಿಕೊಪ್ಪ, ಪ್ರಮಖರಾದ ಡಾ.ಕಾವ್ಯಾ ಚಿಂಚಲಿ, ಎಳೂಕೋಟೇಶ, ನರೇಂದ್ರ ಪಾಟೀಲ, ಶಾಂತಾ, ಜ್ಯೋತಿ, ಶಿವಮ್ಮ, ವೀರೇಶ, ಮೌಲಾಹುಸೇನ, ಕೊಟ್ರಯ್ಯ,

  ಶರಣಮ್ಮ, ಪಕೀರಪ್ಪ, ಶಿವರಾಜ, ಶೇಖರಪ್ಪ, ಸುರೇಶ, ಶಿವರಾಜ, ಶಿಲ್ಪಾ, ನಿರ್ಮಲಾ, ಅನಸಮ್ಮ, ಶಿಕ್ಷಕರಾದ ಹುಸೆನಸಾಬ, ಈಶಪ್ಪ, ಸವಿತಾ, ಹನುಮಂತಪ್ಪ, ರವಿ, ಬಾರ್ಗವ ಇದ್ದರು. ಶಿಕ್ಷಕರು, ಸಾಧಕರು, ಆದರ್ಶ ವಿದ್ಯಾರ್ಥಿಗಳು ಮತ್ತು ಅಡಿಗೆದಾರರನ್ನು ಸನ್ಮಾನಿಸಲಾಯಿತು.


  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts