More

    ರಾಷ್ಟ್ರಪ್ರೇಮ ಕೆಲವರ ಭಾಷಣಕ್ಕಷ್ಟೇ ಸೀಮಿತವಾಗಿದೆ; ಪರೋಕ್ಷವಾಗಿ ಬಿಜೆಪಿ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ

    ಬೆಳಗಾವಿ: ದೇಶಭಕ್ತಿ, ರಾಷ್ಟ್ರಪ್ರೇಮ ಕೆಲವರ ಭಾಷಣಕ್ಕಷ್ಟೇ ಸೀಮಿತವಾಗಿದೆ.  ಇಂದು ಅಧಿಕಾರದಲ್ಲಿರುವವರು ಸಂಗೊಳ್ಳಿ ರಾಯಣ್ಣ ಅವರನ್ನು ನೋಡಿ ಕಲಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

    ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿಯಲ್ಲಿ ರಾಯಣ್ಣನ ಉತ್ಸವ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ, ಸಮುದಾಯ ಭವನ, ಭೋಜನಾಲಯ ಹಾಗೂ ಶಿಲ್ಪವನಗಳನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಬಿಜೆಪಿ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.

    ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಹಲಗಲಿ ಬೇಡರು, ಸುರಪುರದ ವೆಂಕಟಪ್ಪ ನಾಯಕ ಮುಂತಾದವರು ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕಿಂತಲೂ ಮೊದಲೇ ಬ್ರಿಟಿಷರೊಂದಿಗೆ ಹೋರಾಡಿದವರು. ಈಗ ದೇಶಪ್ರೇಮದ ಬಗ್ಗೆ ದೊಡ್ಡ ದೊಡ್ಡ ಮಾತನಾಡುವವರೆಲ್ಲ ಆಗ ಎಲ್ಲಿ‌ದ್ದರು. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಡಿದ್ದು ಕಾಂಗ್ರೆಸ್ಸಿನವರು. ದೇಶದ ಇತಿಹಾಸವನ್ನು ಸರಿಯಾಗಿ ಓದಿಕೊಳ್ಳಿ. ಇತಿಹಾಸ ಅರಿಯದವ ಭವಿಷ್ಯ ನಿರ್ಮಿಸಲು ಸಾಧ್ಯವಿಲ್ಲ ಎಂಬ ಅಂಬೇಡ್ಕರ್ ಮಾತು ಅರ್ಥ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಹೇಳಿಕೆ; ಬೇರೆ ರೀತಿ ಯಾಕೆ ಟ್ವಿಸ್ಟ್ ಮಾಡಬೇಕು ಎಂದ ಡಿ.ಕೆ. ಶಿವಕುಮಾರ್

    ಸಂಗೊಳ್ಳಿ ರಾಯಣ್ಣ ಬಹಳ ಓದಿದವರು ಅಲ್ಲಾ. ತಾಯಿ ನಾಡಿನ ಬಗ್ಗೆ ಪ್ರೀತಿ ಇತ್ತು, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ. ಮೊದಲ ಯುದ್ದದಲ್ಲಿ ಗೆದ್ದು ಎರಡನೇ ಯುದ್ದದಲ್ಲಿ ರಾಯಣ್ಣ ಸೋತರು. ನಮ್ಮವರನ್ನೇ ಉಪಯೋಗಿಸಿಕೊಂಡು ನಮ್ಮವರನ್ನ ಸೋಲಿಸಿ ದೇಶ ಆಳಿದರು. ನಮ್ಮ ನಮ್ಮಲ್ಲಿದ್ದ ಒಡಕು ಉಪಯೋಗಿಸಿಕೊಂಡು ದೇಶದಲ್ಲಿ ಆಡಳಿತ ನಡೆಸಿದರು. ಇಂದು ಬಹಳ ಜನ ರಾಷ್ಟ್ರ ಪ್ರೇಮದ ಬಗ್ಗೆ ದೇಶ ಭಕ್ತಿ ಬಗ್ಗೆ ಮಾತಾಡುತ್ತಾರೆ. ಮೊಘಲರು, ಬ್ರಿಟಿಷರು ಆಳಿದಾಗ ಇವರ ದೇಶ ಪ್ರೇಮ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದ್ದಾರೆ.

    ಪ್ರತಿಯೊಬ್ಬರೂ ರಾಯಣ್ಣನಂತೆ ತಾಯ್ನಾಡು ಪ್ರೀತಿಸಬೇಕು. ನಮ್ಮ ನಾಡನ್ನು ದೇಶವನ್ನು ನಾವಲ್ಲದೇ ಇನ್ಯಾರು ಪ್ರೀತಿಸುತ್ತಾರೆ. ಇತಿಹಾಸವನ್ನು ಅರ್ಥ ಮಾಡಿಕೊಂಡು‌ ನಿಜವಾದ ದೇಶಪ್ರಮ ಬೆಳೆಸಿಕೊಳ್ಳಬೇಕು. ಇದಕ್ಕಾಗಿ ಸೈನಿಕ ಶಾಲೆಗಳು ದಾರಿ ತೋರಿಸಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts